newsfirstkannada.com

VIDEO: ದುಬೈನಲ್ಲಿ ಅಂಬಾನಿ ಮಗನ ರೌಂಡ್ಸ್‌.. ಬೆಂಗಾವಲು ಪಡೆ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು; ಹೇಗಿದೆ ಗೊತ್ತಾ?

Share :

Published April 8, 2024 at 1:49pm

  ದುಬೈ ಮಾಲ್‌ನಲ್ಲಿ ರಾಧಿಕಾ ಮರ್ಚೆಂಟ್, ಅನಂತ್ ಅಂಬಾನಿ ರೌಂಡ್ಸ್‌

  ಅನಂತ್ ಅಂಬಾನಿ ರೋಲ್ಸ್ ರಾಯ್ಸ್‌ಗೆ 20 SUVs ಕಾರುಗಳ ಬೆಂಗಾವಲು!

  ಆರೆಂಜ್‌ ಬಣ್ಣದ ರೋಲ್ಸ್ ರಾಯ್ಸ್ ಕಾರಿನ ಸುತ್ತಾ ಹೈ ಸೆಕ್ಯೂರಿಟಿ ವ್ಯವಸ್ಥೆ

ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರಿಸ್‌ ಚೇರ್ಮನ್ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರ ಪ್ರಿ-ವೆಡ್ಡಿಂಗ್ ನೋಡಿ ಇಡೀ ವಿಶ್ವವೇ ಬೆರಗಾಗಿದೆ. ಗುಜರಾತ್‌ನ ಜಾಮ್‌ನಗರಕ್ಕೆ ಇಡೀ ವಿಶ್ವದ ತಾರಾಲೋಕವೇ ಧರೆಗಿಳಿದು ಬಂದು ಸಖತ್ ಸುದ್ದಿಯಾಗಿತ್ತು. ಇದೀಗ ಅನಂತ್ ಅಂಬಾನಿ, ರಾಧಿಕಾ ಜೋಡಿ ದುಬೈನಲ್ಲಿ ರೌಂಡ್ಸ್‌ ಹೊಡೆದಿದ್ದು, ಇವರಿಬ್ಬರ ಖದರ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ದುಬೈ ಮಾಲ್‌ಗೆ ಶಾಪಿಂಗ್ ಮಾಡಲು ಹೋಗಿದ್ದಾರೆ. ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರಿನಲ್ಲಿ ಅನಂತ್ ಅಂಬಾನಿ ಹೋಗಿದ್ರೆ ಸುತ್ತಾ ಇದ್ದ ಬೆಂಗಾವಲು ಪಡೆ ಬೆಚ್ಚಿ ಬೀಳಿಸುವಂತಿದೆ. ಸುತ್ತಾಮುತ್ತ ಬೌನ್ಸರ್‌ಗಳ ಜೊತೆ ಹೆಜ್ಜೆ ಹಾಕಿರುವ ಅನಂತ್ ಅಂಬಾನಿ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: 100, 200, 300 ಅಲ್ಲ.. ನೀತಾ ಅಂಬಾನಿ ಧರಿಸಿದ್ದ ನೆಕ್ಲೆಸ್ ಬೆಲೆ ಎಷ್ಟು ಕೋಟಿ ರೂ. ಗೊತ್ತಾ?

ದುಬೈ ಮಾಲ್‌ನಿಂದ ಹೊರಗಡೆ ಬಂದ ಅನಂತ್ ಅಂಬಾನಿ ಅವರನ್ನು ರೋಲ್ಸ್‌ ರಾಯ್ಸ್‌ ಕಾರಿನಲ್ಲಿ ಕರೆದುಕೊಂಡು ಹೋಗಲಾಗಿದೆ. ಆರೆಂಜ್‌ ಬಣ್ಣದ ರೋಲ್ಸ್ ರಾಯ್ಸ್ ಕಾರಿನ ಹಿಂದೆ 20 ಬೆಂಗಾವಲು ವಾಹನಗಳು ಹಿಂಬಾಲಿಸಿದೆ. ಬ್ಲ್ಯಾಕ್ ಬಣ್ಣದ SUVs ಕಾರುಗಳು ಅಂಬಾನಿ ಮಗನ ರೋಲ್ಸ್ ರಾಯ್ಸ್ ಕಾರಿಗೆ ಭದ್ರತೆ ನೀಡಿದೆ. ದುಬೈನಲ್ಲಿ ಅಂಬಾನಿ ಮಗನಿಗೆ ನೀಡಲಾಗಿರುವ ಹೈ ಸೆಕ್ಯೂರಿಟಿಗಾಗಿ ಭದ್ರತಾ ಪಡೆ ನಿಯೋಜಿಸಲಾಗಿದೆ. ಅನಂತ್ ಅಂಬಾನಿ ಪ್ರಯಾಣಿಸುತ್ತಿದ್ದ ರೋಲ್ಸ್ ರಾಯ್ಸ್‌ಗೆ 20 SUVs ಕಾರುಗಳು ಹಿಂಬಾಲಿಸಿರೋ ವಿಡಿಯೋ ನೋಡಿದ ನೆಟ್ಟಿಗರಿಗೆ ಹುಬ್ಬೇರುವಂತೆ ಮಾಡಿದೆ.

ಅನಂತ್ ಅಂಬಾನಿ ಅವರು ಮುಖೇಶ್ ಅಂಬಾನಿ, ನೀತಾ ಅಂಬಾನಿಯ ಕಿರಿಯ ಪುತ್ರ. ಅನಂತ್ ಅಂಬಾನಿ ಅಂದ್ರೆ ಅಂಬಾನಿ ಕುಟುಂಬಕ್ಕೆ ಅಚ್ಚುಮೆಚ್ಚು. ಅನಂತ್ ಅಂಬಾನಿ ಆಸೆಯಂತೆ ಪ್ರಿ-ವೆಡ್ಡಿಂಗ್ ಶೂಟ್‌ ಮಾಡಿಸಿದ್ದ ಮುಖೇಶ್ ಅಂಬಾನಿ ಇದೀಗ ಮಗನಿಗಾಗಿ ಭಾರೀ ಭದ್ರತೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದುಬೈನಲ್ಲಿ ಅಂಬಾನಿ ಮಗನ ರೌಂಡ್ಸ್‌.. ಬೆಂಗಾವಲು ಪಡೆ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು; ಹೇಗಿದೆ ಗೊತ್ತಾ?

https://newsfirstlive.com/wp-content/uploads/2024/04/Ananth-Ambani-In-Dubai.jpg

Load More