newsfirstkannada.com

×

ಮಂಡ್ಯ ರೈತರಿಗೆ ಸಿಹಿ ಸುದ್ದಿ; 100 ಅಡಿ ಗಡಿಯತ್ತ KRS ಜಲಾಶಯ; ಡ್ಯಾಂಗೆ ಒಳ ಹರಿವು ಭಾರೀ ಹೆಚ್ಚಳ

Share :

Published July 24, 2023 at 8:52pm

    ಡೆಡ್​ ಸ್ಟೋರೇಜ್​ನತ್ತ ಹೋಗಿದ್ದ ಡ್ಯಾಂ​​ಗಳಿಗೆ ಈಗ ಜೀವ ಕಳೆ

    ಮಳೆಯಿಂದ ಭರ್ತಿಯಾಗುವತ್ತಾ ಕೃಷ್ಣರಾಜ ಸಾಗರ ಅಣೆಕಟ್ಟು

    ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ KRS ಜಲಾಶಯದ ಒಳಹರಿವು

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ ಜೋರಾಗಿರುವುದರಿಂದ ಕೆಆರ್‌ಎಸ್ ಡ್ಯಾಂಗೆ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 12 ಗಂಟೆಗೆ 2.5 ಅಡಿ ನೀರು ಡ್ಯಾಂನಲ್ಲಿ ಏರಿಕೆಯಾಗಿದೆ. ಇಂದು ಬೆಳಗ್ಗೆ 19,139 ಕ್ಯೂಸೆಕ್ ಇದ್ದ ಒಳಹರಿವು ಇದೀಗ 44,436 ಕ್ಯೂಸೆಕ್ ನೀರು ತಲುಪಿದೆ. 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 97.50 ಅಡಿ ನೀರು ಭರ್ತಿಯಾಗಿದೆ. ನಾಳೆ ಬೆಳಗ್ಗೆ ಡ್ಯಾಂ 100 ಅಡಿ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 20.915 ಟಿಎಂಸಿ ನೀರು ಸಂಗ್ರಹವಾಗಿದೆ. 100 ಅಡಿ ಗಡಿಯತ್ತ ಕೆ.ಆರ್.ಎಸ್ ಡ್ಯಾಂ ತಲುಪಿರುವುದರಿಂದ ಡ್ಯಾಂನಿಂದ ನಾಲೆ,‌ ನದಿಗೆ 5452 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.

ಇದನ್ನು ಓದಿ: ಕಬಿನಿ ಡ್ಯಾಂ ಭರ್ತಿಗೆ 6 ಅಡಿ ಬಾಕಿ.. ರಾಜ್ಯದಲ್ಲಿ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

ಕೆಲ ದಿನಗಳ ಹಿಂದೆ ಮಳೆಯಿಲ್ಲದೆ ಕೆಆರ್​ಎಸ್​ ಡ್ಯಾಂ​​ ಡೆಡ್​ ಸ್ಟೋರೇಜ್​ನತ್ತ ತಲುಪಿತ್ತು. ಇದೀಗ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದರಿಂದ ಕೆಆರ್‌ಎಸ್‌ ಡ್ಯಾಂ​ಗೆ 48 ಸಾವಿರ ಕ್ಯೂಸೆಕ್ ಒಳಹರಿವು ಏರಿಕೆ ಕಂಡಿದೆ. ಇದರ ಜೊತೆಗೆ ನಾಳೆ ಕಾವೇರಿ ಕಣಿವೆಯ ನಾಲ್ಕು ಡ್ಯಾಂ​ಗಳಿಗೆ 10 ಟಿಎಂಸಿ ಅಡಿ ಒಳಹರಿವಿನ ಪ್ರಮಾಣ ಹೆಚ್ಚಾಗಬಹುದು ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ.

  • ಹೇಮಾವತಿ ಡ್ಯಾಂಗೆ 27,700 ಕ್ಯೂಸೆಕ್ ಒಳಹರಿವು ಮುನ್ಸೂಚನೆ
  • ಕಬಿನಿ ಡ್ಯಾಂ​ಗೆ 26,100 ಕ್ಯೂಸೆಕ್ ಒಳಹರಿವು ಮುನ್ಸೂಚನೆ
  • ಹಾರಂಗಿ ಡ್ಯಾಂ​ಗೆ 16,200 ಕ್ಯೂಸೆಕ್ ಒಳಹರಿವು ಮುನ್ಸೂಚನೆ

ಇನ್ನು, ರಾಜ್ಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ರಾಜ್ಯದ ಹಲವು ಜಲಾಶಯಗಳಲ್ಲಿ ನೀರು ಉಕ್ಕಿ ಹರಿಯುತ್ತಿವೆ. ವರುಣಾನ ಆರ್ಭಟದಿಂದ ಕೆರೆ, ನದಿಗಳು ಸಹ ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದ ಜಲಾಶಯದ ಒಳ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ನಿರಂತರವಾಗಿ ಇದೇ ಪ್ರಮಾಣದಲ್ಲಿ ಒಳ ಹರಿವು ಇದ್ದರೆ ನಾಳೆ ಸಂಜೆಯ ಒಳಗೆ ಪ್ರಮುಖ ಜಲಾಶಯಗಳು ಭರ್ತಿಯಾಗುವ ಸಾಧ್ಯತೆ ಇದೆ. ಕೇರಳದ ವಯನಾಡ್, ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಭಾಗದಲ್ಲಿ ಇಂದು ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯ ನಾಲ್ಕು ಡ್ಯಾಂ​ಗಳಿಗೆ ನಾಳೆ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಹೀಗಾಗಿ ಹವಾಮಾನ ಇಲಾಖೆಯು ಕೊಡಗಿನ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯದ ಅಧಿಕಾರಿಗಳು ಒಳ ಹರಿವಿನ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ರೈತರಿಗೆ ಸಿಹಿ ಸುದ್ದಿ; 100 ಅಡಿ ಗಡಿಯತ್ತ KRS ಜಲಾಶಯ; ಡ್ಯಾಂಗೆ ಒಳ ಹರಿವು ಭಾರೀ ಹೆಚ್ಚಳ

https://newsfirstlive.com/wp-content/uploads/2023/07/krs-1.jpg

Load More