/newsfirstlive-kannada/media/post_attachments/wp-content/uploads/2024/08/wayanad-19.jpg)
ಕೇರಳದ ಮುಂಡಕ್ಕೈ ಮತ್ತು ಚುರಲ್ಮಲಾದಲ್ಲಿ ನಡೆದ ಭೀಕರ ಭೂಕುಸಿತವು ದೇಶದ ದೊಡ್ಡ ದುರಂತವಾಗಿದೆ. ಸಾವಿನ ಸಂಖ್ಯೆ 314ಕ್ಕೇರಿದೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮಳೆ, ರಭಸವಾಗಿ ಹರಿಯುವ ನದಿ, ಇದರ ನಡುವೆ ರಕ್ಷಣಾ ಕಾರ್ಯಚರಣೆ ಭಾರತೀಯ ಸೇನೆಗೆ ದೊಡ್ಡ ಸವಾಲಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಭಾರತೀಯ ಸೇನೆಯು ಚುರಲ್ಮಲಾದಲ್ಲಿ ಬೈಲಿ ಸೇತುವೆಯನ್ನು ಪೂರ್ಣಗೊಳಿಸಿದೆ. ಆ ಮೂಲಕ ರಕ್ಷಣಾ ಕಾರ್ಯಕ್ಕೆ ಬಹುದೊಡ್ಡ ನೆರವು ನೀಡಿದಂತಾಗಿದೆ.
/newsfirstlive-kannada/media/post_attachments/wp-content/uploads/2024/08/wayanad-18.jpg)
ಬೈಲಿ ಸೇತುವೆಯನ್ನು ಬೆಂಗಳೂರಿನ ಸೇನೆಯ ಮದ್ರಾಸ್​​ ಇಂಜಿನಿಯರ್​ ಗ್ರೂಪ್​ (MEG) ನಿರ್ಮಿಸಿದೆ. ಇವರನ್ನು ಮದ್ರಾಸ್​​ ಸಪರ್ಸ್​ ಎಂದು ಕರೆಯಲಾಗುತ್ತದೆ. ದೇಶದ ವಿವಿಧ ಭಾಗಗಳಿಗೆ ಅಗತ್ಯ ನೆರವು ನೀಡುವ ಎಂಜಿನಿಯರಿಂಗ್​ ಘಟಕವಾಗಿ ಗುರುತಿಸಿಕೊಂಡಿದೆ. ವಿಶೇಷ ತರಬೇತಿಯನ್ನು ಪಡೆದುಕೊಂಡು ಈ ತಂಡ ಸೇನೆಗೆ ದಾರಿಯನ್ನು ನಿರ್ಮಿಸಿಕೊಟ್ಟಿದೆ.
/newsfirstlive-kannada/media/post_attachments/wp-content/uploads/2024/07/baily-Bridge.jpg)
ಇದನ್ನೂ ಓದಿ: ಶವಗಳ ವಾಸನೆ ಪತ್ತೆ ಹಚ್ಚುತ್ತಿವೆ ಮಾಯಾ ಮತ್ತು ಮರ್ಫಿ.. ರಕ್ಷಣಾ ಕಾರ್ಯದಲ್ಲಿ ಶ್ವಾನಗಳ ಅದ್ಭುತ ಕಾರ್ಯ!
190 ಅಡಿ ಉದ್ದದ ಬೈಲಿ ಸೇತುವೆ ಇದಾಗಿದೆ. ಸೇತುವೆ ನಿರ್ಮಾಣಕ್ಕೆ ಬೆಂಗಳೂರು ಮತ್ತು ದೆಹಲಿಯಿಂದ ಚುರಲ್ಮಲಾಗೆ ಸಾಮಾಗ್ರಿಗಳು ಬಂದಿವೆ. ಇಂಜಿನಿಯರಿಂಗ್​ ತಂಡದ ಏಕೈಕ ಮಹಿಳಾ ಅಧಿಕಾರಿ ಸೀತಾ ಶೆಲ್ಕೆ ಈ ಬೈಲಿ ಸೇತುವೆ ನಿರ್ಮಾಣದ ನೇತೃತ್ವ ವಹಿಸಿದ್ದರು. ಸೇತುವೆ ಪೂರ್ಣಗೊಂಡ ಬಳಿಕ ಸೀತಾರವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಸುರಿದವು.
/newsfirstlive-kannada/media/post_attachments/wp-content/uploads/2024/07/m.jpg)
ಬೈಲಿ ಸೇತುವೆ ಎಂದರೇನು?
ಬೈಲಿ ಸೇತುವೆಯನ್ನು ಕಡಿದಾದ ಇಳಿಜಾರು ಅಥವಾ ಕಡಿದಾದ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತದೆ. ತುರ್ತು ಸಮಯದಲ್ಲಿ ಈ ಸೇತುವೆ ಉಪಯೋಗ ಬಹಳವಿದೆ. ಮೊದಲೇ ಹೇಳಿದಂತೆ ವಿಪತ್ತು ಸಮಯದಲ್ಲಿ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ನಿರ್ಮಿಸಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/07/wayanad-2.jpg)
ಬಿಡಿ ಬಿಡಿ ಭಾಗಗಳನ್ನು ಜೋಡಿಸುತ್ತಾ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬೈಲಿ ಸೇತುವೆ ನಿರ್ಮಾಣ ಮಾಡಲು ಸಾಧ್ಯ. ಮಾತ್ರವಲ್ಲದೆ, ಇದು ತಾತ್ಕಾಲಿಕ ಸೇತುವೆಯಾಗಿದ್ದು, ಕಬ್ಬಿಣ ಮತ್ತು ಮರದಿಂದ ನಿರ್ಮಿಸಲಾಗುತ್ತದೆ. ಬೈಲಿ ಸೇತುವೆ ಮೂಲಕ ಸಣ್ಣ ವಾಹನಗಳು ಹೋಗಬಹುದಾಗಿದೆ. ಈ ಸೇತುವೆಗಳ ಮೂಲಕ 40 ಟನ್, 70 ಟನ್ ಭಾರವನ್ನು ಸಾಗಿಸಬಹುದಾಗಿದೆ.
/newsfirstlive-kannada/media/post_attachments/wp-content/uploads/2024/07/baily-Bridge.jpg)
ಬೈಲಿ ಎಂದು ಹೆಸರೇಕೆ ಬಂತು?
ಡೊನಾಲ್ಡ್ ಬೈಲಿ ಎಂಬ ಬ್ರಿಟಿಷ್ ವ್ಯಕ್ತಿ ಈ ಸೇತುವೆಯನ್ನು ಮೊದಲು ನಿರ್ಮಾಣ ಮಾಡಿದರು. 1942 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಬೈಲಿ ಸೇತುವೆ ಜನಪ್ರಿಯತೆಗೆ ಬಂತು. ಪ್ರಾರಂಭದಲ್ಲಿ ಬ್ರಿಟಿಷ್ ಸೈನ್ಯವು ಉತ್ತರ ಆಫ್ರಿಕಾದಲ್ಲಿ ನಿರ್ಮಿಸಿತು. 1941 ಮತ್ತು 1942ರಲ್ಲಿ ಮಿಲಿಟರಿ ಇಂಜಿನಿಯರಿಂಗ್​ನಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಬಂತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us