/newsfirstlive-kannada/media/post_attachments/wp-content/uploads/2024/07/kerala25.jpg)
ಹಚ್ಚ ಹಸುರಿನ ಪರಿಸರ, ಚಹಾದ ಎಸ್ಟೇಟ್​, ಎತ್ತ ನೋಡಿದರೂ ಗ್ರೀನರಿ​ ಎಂಬಂತಿದ್ದ ವಯನಾಡಿನ ದೃಶ್ಯವೇ ಬದಲಾಗಿದೆ. ರಕ್ಕಸ ಮಳೆಯಿಂದಾಗಿ ಮಂಡಕ್ಕೈ ಮತ್ತು ಚುರುಲ್ಮಲಾ ಸ್ಮಶಾನದಂತಾಗಿದೆ. ರಕ್ಕಸ ಮಳೆ ಮತ್ತು ಭೂಕುಸಿತ ಅಲ್ಲಿನ ಹಸಿರನ್ನೇ ತೋಯ್ದು ಅಲ್ಲಿದ್ದ ಜೀವ ಸಂಕುಲಗಳನ್ನು ಮಣ್ಣಿನಡಿಯಲ್ಲಿ ಹುಡುಗಿಸಿಟ್ಟುಬಿಟ್ಟಿದೆ. ಪ್ರಕೃತಿ ವಿಕೋಪಕ್ಕೆ ಸಿಲುಕಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಸಂಖ್ಯೆ ಸಿಕ್ಕಿದೆ. 200ಕ್ಕೂ ಹೆಚ್ಚು ಜನರಿಗೆ ಗಂಭೀರಗಾಯಗಳಾಗಿವೆ. 187 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.
ಒಂದೆಡೆ ರಸ್ತೆಯಿಲ್ಲದೆ ಪರದಾಟ, ಸಂಪರ್ಕ ಸಾಧಿಸಲು ಆಗದೆ ರಕ್ಷಣಾ ತಂಡಗಳ ಹರಸಾಹಸ, ಅಲ್ಲಲ್ಲೇ ಕುಟುಂಬಗಳನ್ನು ಹುಡುಕಾಡುತ್ತಿರುವ ಜನರು. ಈ ನಡುವೆ ಜನರ ರಕ್ಷಣಾ ಕಾರ್ಯಚರಣೆಗೆ ‘ಬೈಲಿ ಸೇತುವೆ’ ನೆರವಾಗಿದೆ. 85 ಮೀಟರ್​ ಉದ್ದದ ತಾತ್ಕಾಲಿಕ ಸೇತುವೆ ಇದಾಗಿದ್ದು, ತುರ್ತು ಸಮಯದಲ್ಲಿ ರಕ್ಷಣೆಗಾಗಿ ಈ ಸೇತುವೆಯನ್ನು ನಿರ್ಮಿಸುವ ಅನಿವಾರ್ಯತೆ ಎದುರಾಗಿದೆ.
/newsfirstlive-kannada/media/post_attachments/wp-content/uploads/2024/07/wayanad-3.jpg)
ಜಗ್ಗಲ್ಲ ..ಬಗ್ಗಲ್ಲ ಬೈಲಿ ಸೇತುವೆ
ವಯನಾಡಿಗೆ ಬೈಲಿ ಸೇತುವೆಯನ್ನು ತರಿಸಲಾಗಿದೆ. 85 ಮೀಟರ್​ ಉದ್ದದ ಬೈಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 17 ಟ್ರಕ್​ ಮೂಲಕ ವಯನಾಡಿಗೆ ಬೈಲಿ ಸೇತುವೆ ಬಂದಿಳಿದಿದೆ.
ಬೈಲಿ ಸೇತುವೆ ಎಂದರೇನು?
ಬೈಲಿ ಸೇತುವೆಯನ್ನು ಕಡಿದಾದ ಇಳಿಜಾರು ಅಥವಾ ಕಡಿದಾದ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತದೆ. ತುರ್ತು ಸಮಯದಲ್ಲಿ ಈ ಸೇತುವೆ ಉಪಯೋಗ ಬಹಳವಿದೆ. ಮೊದಲೇ ಹೇಳಿದಂತೆ ವಿಪತ್ತು ಸಮಯದಲ್ಲಿ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ನಿರ್ಮಿಸಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/07/baily-Bridge.jpg)
ಇದನ್ನೂ ಓದಿ: ಮುನಿಸಿಕೊಂಡ ಪ್ರಕೃತಿ ಮಾತೆ.. ಕರಿ ನೆರಳ ಛಾಯೆಯಲ್ಲಿ ಕೇರಳ! ಅಪಾಯದಲ್ಲಿವೆ 13 ಜಿಲ್ಲೆಗಳು
ಬಿಡಿ ಬಿಡಿ ಭಾಗಗಳನ್ನು ಜೋಡಿಸುತ್ತಾ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬೈಲಿ ಸೇತುವೆ ನಿರ್ಮಾಣ ಮಾಡಲು ಸಾಧ್ಯ. ಮಾತ್ರವಲ್ಲದೆ, ಇದು ತಾತ್ಕಾಲಿಕ ಸೇತುವೆಯಾಗಿದ್ದು, ಕಬ್ಬಿಣ ಮತ್ತು ಮರದಿಂದ ನಿರ್ಮಿಸಲಾಗುತ್ತದೆ. ಬೈಲಿ ಸೇತುವೆ ಮೂಲಕ ಸಣ್ಣ ವಾಹನಗಳು ಹೋಗಬಹುದಾಗಿದೆ. ಈ ಸೇತುವೆಗಳ ಮೂಲಕ 40 ಟನ್, 70 ಟನ್ ಭಾರವನ್ನು ಸಾಗಿಸಬಹುದಾಗಿದೆ.
/newsfirstlive-kannada/media/post_attachments/wp-content/uploads/2024/07/wayanad-2.jpg)
ಬೈಲಿ ಸೇತುವೆಯನ್ನು ಭಾರತೀಯ ಸೇನೆಯು ಕಾಶ್ಮೀರದಲ್ಲಿ ಮೊದಲ ಬಾರಿಗೆ ಮಿಲಿಟರಿ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ. ಲಡಾಖ್‌ನ ದ್ರಾಸ್ ನದಿ ಮತ್ತು ಸುರು ನದಿಯ ನಡುವೆ ನಿರ್ಮಿಸಲಾಗಿದೆ. ಇದು 30 ಮೀಟರ್ (98 ಅಡಿ) ಉದ್ದವಿದೆ.
ಬೈಲಿ ಎಂದು ಹೆಸರೇಕೆ ಬಂತು?
ಡೊನಾಲ್ಡ್ ಬೈಲಿ ಎಂಬ ಬ್ರಿಟಿಷ್ ವ್ಯಕ್ತಿ ಈ ಸೇತುವೆಯನ್ನು ಮೊದಲು ನಿರ್ಮಾಣ ಮಾಡಿದರು. 1942 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಬೈಲಿ ಸೇತುವೆ ಜನಪ್ರಿಯತೆಗೆ ಬಂತು. ಪ್ರಾರಂಭದಲ್ಲಿ ಬ್ರಿಟಿಷ್ ಸೈನ್ಯವು ಉತ್ತರ ಆಫ್ರಿಕಾದಲ್ಲಿ ನಿರ್ಮಿಸಿತು. 1941 ಮತ್ತು 1942ರಲ್ಲಿ ಮಿಲಿಟರಿ ಇಂಜಿನಿಯರಿಂಗ್​ನಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಬಂತು.
/newsfirstlive-kannada/media/post_attachments/wp-content/uploads/2024/07/m.jpg)
ಬೈಲಿ ಸೇತುವೆಯ ವಿಶೇಷತೆ
ಬೈಲಿ ಸೇತುವೆ ನಿರ್ಮಿಸಲು ಯಾವುದೇ ವಿಶೇಷ ಉಪಕರಣಗಳು ಅಗತ್ಯವಿಲ್ಲ. ಜೋಡಣೆಗಾಗಿ ಭಾರೀ ಯಂತ್ರೋಪಕರಣಗಳ ಅಗತ್ಯವಿಲ್ಲ. ಮರ ಮತ್ತು ಕಬ್ಬಿಣದಿಂದ ನಿರ್ಮಿಸಲಾಗುತ್ತದೆ.
ಇದನ್ನೂ ಓದಿ: ಚಂಡೀಪುರ ವೈರಸ್ ಮೊದಲು​ ಪತ್ತೆಯಾಗಿದ್ದೆಲ್ಲಿ? ಇದರ ಲಕ್ಷಣಗಳೇನು?
ಬೈಲಿ ಸೇತುವೆ ಮೂಲಕ ದೊಡ್ಡ ಟ್ಯಾಂಕ್‌ಗಳನ್ನು ಸಹ ಸಾಗಿಸಬಹುದಾಗಿದೆ. ಸದ್ಯ ವಯನಾಡಿನ ಭೂಕುಸಿತದ ಸಮಯದಲ್ಲಿ ಬೈಲಿ ಸೇತುವೆ ಬಳಕೆಗೆ ಬಂದಿದೆ. ಜನರ ರಕ್ಷಣೆಗಾಗಿ ಇಂದು ಬೈಲಿಯನ್ನು ಆತನ ಸೇತುವೆಯನ್ನು ನೆನಪಿಸಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us