ವಯನಾಡು ಮಹಾದುರಂತ ಸಂಭವಿಸಿ ಇಂದಿಗೆ 5 ದಿನ.. ಸತ್ತವರ ಸಂಖ್ಯೆ 340ಕ್ಕೆ ಏರಿಕೆ
200ಕ್ಕೂ ಹೆಚ್ಚು ಜನರು ನಾಪತ್ತೆ.. ಹಗಲು ರಾತ್ರಿಯೆನ್ನದೆ ಹುಡುಕಾಡುತ್ತಿರುವ ಭಾರತೀಯ ಸೇನೆ
ಅನಾಥ ನವಜಾತ ಶಿಶುಗಳಿಗೆ ಹಾಲುಣಿಸಲು ಮುಂದಾದ ತಾಯಂದಿರು.. ಇದು ಕರುಳು ಹಿಂಡುವ ಕತೆ
ಮಹಾ ಮಳೆಗೆ ವಯನಾಡಿನಲ್ಲಿ ದುರಂತ ಸಂಭವಿಸಿ ಇಂದಿಗೆ 5 ದಿನವಾಗಿದೆ. ಇಂದಿಗೆ ಸತ್ತವರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ. 200ಕ್ಕೂ ಹೆಚ್ಚು ಜನರು ಪತ್ತೆಯಾಗಬೇಕಾಗಿದ್ದು, ಭಾರತೀಯ ಸೇನೆ ಮತ್ತು ಸ್ಥಳೀಯರು ಹುಡುಕಾಟ ಮುಂದುವರೆಸಿದ್ದಾರೆ.
ವಯನಾಡಿನ ದುರಂತದಲ್ಲಿ 84 ಜನರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಸಿಕ್ಕ ಮೃತದೇಹಗಳಲ್ಲಿ 146 ಮೃತದೇಹಗಳನ್ನು ಗುರುತಿಸಲಾಗಿದೆ. ಆದರೆ ಗುರುತೇ ಸಿಗದ 74 ಮೃತದೇಹಗಳ ಅಂತ್ಯಸಂಸ್ಕಾರ ಇಂದು ಮಾಡಲಾಗುತ್ತದೆ.
ಇದನ್ನೂ ಓದಿ: 330ಕ್ಕೂ ಹೆಚ್ಚು ಸಾವು, ನೂರಾರು ಜನರು ಕಣ್ಮರೆ.. ಥರ್ಮಲ್ ಸ್ಕ್ಯಾನರ್ ಬಳಸಿ ಶೋಧ ನಡೆಸುತ್ತಿರೋ ಭಾರತೀಯ ಸೇನೆ
ವಯನಾಡಿದ ಮಹಾ ದುರಂತಕ್ಕೆ ಅನೇಕ ಕುಟುಂಬಗಳು ಪ್ರಾಣಬಿಟ್ಟಿವೆ. ಕೆಲವು ಕಂದಮ್ಮಗಳು ಅನಾಥವಾಗಿವೆ. ಇಂಥಾ ಸಮಯದಲ್ಲಿ ನಾಲ್ಕು ಮಕ್ಕಳನ್ನು ಹೊಂದಿರುವ ದಂಪತಿ ಅನಾಥವಾಗಿದ್ದ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮಹಾ ಮಳೆ! ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ 6 ಮಂದಿ, ಬೆಳೆದು ನಿಂತಿದ್ದ ಬೆಳೆ ನುಂಗಿದ ವರದಾ ನದಿ!
ಭೂಕುಸಿತ ಸಮಯದಲ್ಲಿ ಸಂಕಷ್ಟಕ್ಕೀಡಾದ ಶಿಶುಗಳ ಪರಿಸ್ಥಿತಿ ಕಂಡು ಇಡುಕ್ಕಿಯ ಮಹಿಳೆ ಭಾವನಾ ಸಜಿನ್ರವರು ಅನಾಥ ನವಜಾತ ಶಿಶುಗಳಿಗೆ ಹಾಲುಣಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ವಯಂಪ್ರೇರಿತರಾಗಿದ್ದರು. ಭಾವನಾ ಅವರ ವಿಚಾರಧಾರೆಯನ್ನು ಕಂಡು ವಯನಾಡ್‌ನ ದಂಪತಿಗಳಾದ ಸಜಿತ್ (43) ಮತ್ತು ಅವರ ಪತ್ನಿ ನಫೀಜಾ (40) ವಿಪತ್ತು ವಲಯದಿಂದ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ದಂಪತಿಗಳು ದತ್ತು ತೆಗೆದುಕೊಳ್ಳಲು ಮುಂದಾದ ಮಗುವಿಗೆ ಚಿಕ್ಕು ಎಂದು ಹೊಸ ಹೆಸರನ್ನು ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಟವೆಲ್ನಲ್ಲೇ ಸಿಟಿ ರಸ್ತೆಗಳಿಗೆ ಇಳಿದ ಚೆಲುವೆ.. ಯುವಕರು ನೋಡ್ ನೋಡ್ತಿದ್ದಂತೆ ಬ್ಯೂಟಿ ಮಾಡಿದ್ದೇನು?
ನಿನ್ನೆ ಪಟವೆಟ್ಟಿನ್ನುನ್ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆ ಅವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ