/newsfirstlive-kannada/media/post_attachments/wp-content/uploads/2024/08/wayanad-6.jpg)
ದೇವರನಾಡು ಕೇರಳದಲ್ಲಿ ಕಂಡು ಕೇಳರಿಯ ಭೂಕುಸಿತ ಸಂಭವಿಸಿದೆ. ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುತ್ತಿದ್ದ ವಯನಾಡ್, ಭೂಕುಸಿತಕ್ಕೆ ತತ್ತರಿಸಿ ಹೋಗಿದೆ ಕ್ಷಣ ಕ್ಷಣಕ್ಕೂ ಸಾವು ನೋವು ಹೆಚ್ಚಾಗುತ್ತಲೇ ಇದೆ. ಭೂಕುಸಿದ ಸಂಭವಿಸಿ ಐದು ದಿನಗಳು ಕಳೆದಿದ್ದು, 330ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಕಣ್ಮರೆಯಾಗಿರುವ ನೂರಾರು ಜನರಿಗಾಗಿ ಶೋಧ ಕಾರ್ಯವೂ ಮುಂದುವರಿದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮಹಾ ಮಳೆ! ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ 6 ಮಂದಿ, ಬೆಳೆದು ನಿಂತಿದ್ದ ಬೆಳೆ ನುಂಗಿದ ವರದಾ ನದಿ!
ಭೀಕರ ಭೂಕುಸಿತ ಮತ್ತು ಪ್ರವಾಹದ ನೀರಿನ ಅಬ್ಬರಕ್ಕೆ ಹಲವು ಮನೆಗಳು ಕಟ್ಟಡಗಳು ಕೊಚ್ಚಿ ಹೋಗಿವೆ. ಚೂರಲ್ಮಾಲದಲ್ಲಿ ಅಪಾರ ಹಾನಿ ಸಂಭವಿಸಿದೆ. ಇನ್ನು ಅರ್ಧಂಬರ್ಧ ಉಳಿದಿರುವ ಕಟ್ಟಡಗಳ ಕೆಳಗೆ ಸಿಲುಕಿಕೊಂಡಿರುವ ಶಂಕೆ ಇದೆ. ಹೀಗಾಗಿ ಭಾರತೀಯ ಸೇನೆ ಕಳೆದ ರಾತ್ರಿಯೂ ಶೋಧ ಕಾರ್ಯ ನಡೆಸಿತು. ಕತ್ತಲಾದರೂ ಫೆಡ್ಲೈಟ್ಗಳನ್ನು ಬಳಸಿಕೊಂಡು. ಥರ್ಮಲ್ ಸ್ಕ್ಯಾನರ್ ಸಾಧನದ ಮೂಲಕ ಕಟ್ಟಡದೊಳಗೆ ಸಿಲುಕಿರುವವರನ್ನು ಪತ್ತೆ ಹಚ್ಚಲು ಭಾರತೀಯ ಸೇನೆ ಪ್ರಯತ್ನಿಸಿತು. 3 ಅಡಿ ಅಳದವರೆಗೆ ಥರ್ಮಲ್ ಸ್ಕ್ಯಾನರ್ ಬಳಸಿ ಶೋಧ ನಡೆಸಲಾಯ್ತು. ಆದ್ರೆ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಹಾಗೂ ಕಟ್ಟಡವು ಕುಸಿದು ಬೀಳುವ ಆತಂಕ ಮತ್ತು ಸ್ಥಳೀಯರ ಒತ್ತಡಕ್ಕೆ ಮಣಿದ ಭಾರತೀಯ ಸೇನೆ ರಾತ್ರಿ ಶೋಧ ಕಾರ್ಯವನ್ನು ಅಂತ್ಯಗೊಳಿಸ್ತು.
ಭಾರತೀಯ ಸೇನೆಗೆ ಚಪ್ಪಾಳೆ ಮೂಲಕ ಅಭಿನಂದನೆ
ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವರರನ್ನು ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕಾಪಾಡುತ್ತಿದೆ. ಮಣ್ಣಿನಡಿ ಸಿಲುಕಿರುವವರಿಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ಚಪ್ಪಾಳೆ ತಟ್ಟುವ ಮೂಲಕ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹುಡುಗರ ಮನಸನ್ನೇ ಕದ್ದ ಕನ್ನಡ ಸೀರಿಯಲ್ ಶ್ರಾವಣಿ ಸುಬ್ರಮಣ್ಯ.. ಏನಿದರ ಸ್ಪೆಷಲ್?
ಕಾಂಗ್ರೆಸ್ನಿಂದ 100ಕ್ಕೂ ಹೆಚ್ಚು ಮನೆಗಳ ನಿರ್ಮಾಣ ಭರವಸೆ
ವಯನಾಡಿನ ಭೀಕರ ಭೂಕುಸಿದಲ್ಲಿ ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಹುಲ್ ಗಾಂಧಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ರು. ಅಷ್ಟೇ ಅಲ್ಲ ವಯನಾಡಿನಲ್ಲಿ ಕಾಂಗ್ರೆಸ್ನಿಂದ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಟವೆಲ್ನಲ್ಲೇ ಸಿಟಿ ರಸ್ತೆಗಳಿಗೆ ಇಳಿದ ಚೆಲುವೆ.. ಯುವಕರು ನೋಡ್ ನೋಡ್ತಿದ್ದಂತೆ ಬ್ಯೂಟಿ ಮಾಡಿದ್ದೇನು?
ವಯನಾಡು ದುರಂತದ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ
ವಯನಾಡು ಭೂಕುಸಿತದ ದುರಂತಕ್ಕೆ ಕಲ್ಲು ಗಣಿಗಾರಿಕೆ, ವನ ಸಂಪತ್ತು ನಾಶವೇ ಕಾರಣ ಎಂದು ಆಕ್ರೋಶ ವ್ಯಕ್ತವಾಗಿದೆ. ಇದೀಗ ವಯನಾಡು ಭೂಕುಸಿತ ಬಳಿಕ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದೆ. ಪಶ್ಚಿಮ ಘಟ್ಟದ 57 ಸಾವಿರ ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಸಂಬಂಧ ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಇದು ಕಳೆದ ಒಂದು ದಶಕದಲ್ಲಿ ಹೊರಡಿಸಲಾದ 6ನೇ ಕರಡು ಅಧಿಸೂಚನೆಯಾಗಿದೆ. ಪಶ್ಚಿಮ ಘಟ್ಟದ ಶೇಕಡಾ 36ರಷ್ಟು ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದವರಿಗೆ ಭಾರೀ ಲಾಭ; ಬೇರೆಯವರಿಗೆ ಮೋಸ ಮಾಡಬೇಡಿ; ಇಲ್ಲಿದೆ ನಿಮ್ಮ ಭವಿಷ್ಯ
ಇನ್ನು ಭೂಕುಸಿತದಿಂದ ಕಂಗಾಲಾಗಿರುವ ಕೇರಳ ಸ್ಥಿತಿ ಕಂಡು ಇಡೀ ದೇಶವೇ ಮರುಗುತ್ತಿದೆ. ಮನೆ ಮಠ ಕಳೆದುಕೊಂಡು, ನಿರಾಶ್ರಿತರಾಗಿರುವವರೆಗೆ ನೆರವಿ ಮಹಾಪೂರವೇ ಹರಿದು ಬರುತ್ತಿದೆ. ವಿವಿಧ ರಾಜ್ಯಗಳಿಂದ ಕೇರಳಕ್ಕೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ಮಾನವೀತೆ ಮೆರೆಯುತ್ತಿದ್ದಾರೆ.
ಒಟ್ಟಾರೆ, ಭೀಕರ ಭೂಕುಸಿತದಿಂದ ವಯನಾಡು ಚಿತ್ರಣವೇ ಬದಲಾಗಿ ಹೋಗಿದೆ. ಎಲ್ಲೆಲ್ಲೂ ಮಣ್ಣಿನ ರಾಶಿ, ಸಾವು-ನೋವಿನ ಅರ್ತನವಾದವೇ ಕೇಳಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ