newsfirstkannada.com

ಈಶ್ವರಪ್ಪ ಅಂದ್ರೆ ಯಾರು.. ನಮಗೆ ಯಾರು ಅಂತಾನೆ ಗೊತ್ತಿಲ್ಲ; ರಾಜ್ಯ ಬಿಜೆಪಿ ಉಸ್ತುವಾರಿ ಖಡಕ್‌ ರಿಯಾಕ್ಷನ್‌!

Share :

Published April 11, 2024 at 6:15pm

  ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್ ಈಶ್ವರಪ್ಪ ಬಂಡಾಯ ಸ್ಪರ್ಧೆ

  ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಗರ್ವಾಲ್ ಸಖತ್ ಟಾಂಗ್

  ನಾಳೆ ಕಾಂಗ್ರೆಸ್‌ ಪಕ್ಷದವರು ಮೋದಿ ಭಾವಚಿತ್ರದಿಂದ ಪ್ರಚಾರ ಮಾಡ್ತಾರೆ

ಬೀದರ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದಾರೆ. 28 ಲೋಕಸಭಾ ಕ್ಷೇತ್ರವನ್ನು ಗೆದ್ದು ಪ್ರಧಾನಿ ಮೋದಿಗೆ ಕರುನಾಡ ಉಡುಗೊರೆ ಕಾಣಲು ಪಣ ತೊಟ್ಟಿದ್ದಾರೆ.

28 ಲೋಕಸಭಾ ಕ್ಷೇತ್ರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಉಳಿದಿದೆ. ಬಂಡಾಯ ನಾಯಕ ಕೆ.ಎಸ್‌ ಈಶ್ವರಪ್ಪ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದು, ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಪರವಾಗಿ ಬಿಜೆಪಿ ನಾಯಕರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್ ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಿಡಿದು ಪ್ರಚಾರ ಮಾಡುತ್ತಾ ಇರೋದು ಬಿಜೆಪಿ ನಾಯಕರಿಗೆ ತಲೆನೋವಾಗಿದೆ.

ಕೆ.ಎಸ್ ಈಶ್ವರಪ್ಪನವರ ಬಂಡಾಯ ಹಾಗೂ ಹಠಮಾರಿ ಧೋರಣೆಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರ್ವಾಲ್ ಸಖತ್ ಟಾಂಗ್ ಕೊಟ್ಟಿದ್ದಾರೆ. ಬೀದರ್‌ನಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಬಗ್ಗೆ ಕೇಳಿದ ಪ್ರಶ್ನೆಗೆ ಅಗರ್ವಾಲ್ ಅವರು ವ್ಯಂಗ್ಯವಾಗಿಯೇ ಉತ್ತರ ನೀಡಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಯಾರು ಈಶ್ವರಪ್ಪ. ಈಶ್ವರಪ್ಪ ಎಂಬ ವ್ಯಕ್ತಿಯೇ ನನಗೆ ಗೊತ್ತೇ ಇಲ್ಲ. ಯಾರು ಈಶ್ವರಪ್ಪ ಅಂದ್ರೆ. ನಾನು ಆ ಹೆಸರಿನ ವ್ಯಕ್ತಿಯನ್ನ ಗುರುತು ಹಿಡಿಯಲ್ಲ. ಚುನಾವಣೆಯಲ್ಲಿ ಗೆಲ್ಲಲು ಮೋದಿ ಭಾವಚಿತ್ರವನ್ನ ಎಲ್ಲರೂ ಹಾಕಿಕೊಳ್ಳುತ್ತಾರೆ. ನಾಳೆ ಕಾಂಗ್ರೆಸ್‌, ಡಿಎಂಕೆ ಪಕ್ಷದವರು ಮೋದಿ ಭಾವಚಿತ್ರವನ್ನು ಹಾಕಿಕೊಳ್ಳುತ್ತಾರೆ. ಈಶ್ವರಪ್ಪ ಯಾರೂ ಅಂತಾನೇ ನಮಗೆ ಗೊತ್ತಿಲ್ಲ ಎಂದು ರಾಧಾ ಮೋಹನ್‌ದಾಸ್ ಅಗರ್ವಾಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಎಲೆಕ್ಷನ್‌ ಹೊಸ್ತಿಲಲ್ಲೇ ಎಡವಿದ್ರಾ ಕೆ.ಎಸ್​ ಈಶ್ವರಪ್ಪ? ಶಿವಮೊಗ್ಗದ ಬಂಡಾಯಕ್ಕೆ ಹೊಸ ಟ್ವಿಸ್ಟ್; ಏನದು?

ಇಷ್ಟು ದಿನ ಶಿವಮೊಗ್ಗದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಈಶ್ವರಪ್ಪ ಅವರ ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು, ಆರ್‌ಎಸ್‌ಎಸ್‌ ಮುಖಂಡರು ಬಹಳಷ್ಟು ಕಸರತ್ತು ನಡೆಸಿದ್ದರು. ಆದರೆ ಯಾವುದಕ್ಕೂ ಸೊಪ್ಪು ಹಾಕದೇ ಇರುವ ಈಶ್ವರಪ್ಪನವರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯೇ ಖಡಕ್ ಸಂದೇಶ ರವಾನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈಶ್ವರಪ್ಪ ಅಂದ್ರೆ ಯಾರು.. ನಮಗೆ ಯಾರು ಅಂತಾನೆ ಗೊತ್ತಿಲ್ಲ; ರಾಜ್ಯ ಬಿಜೆಪಿ ಉಸ್ತುವಾರಿ ಖಡಕ್‌ ರಿಯಾಕ್ಷನ್‌!

https://newsfirstlive.com/wp-content/uploads/2024/04/Eshwarappa-BjP-Shivamogga.jpg

Load More