/newsfirstlive-kannada/media/post_attachments/wp-content/uploads/2024/08/friend-ai.jpg)
ನಿಮಗೆ ಒಂಟಿತನದ ಬೇಸರ ಕಾಡುತ್ತಿದೆಯಾ..? ಯಾರಾದ್ರೂ ಒಬ್ಬರು ಇರಬೇಕಪ್ಪ ಮಾತಾಡೋಕೆ ಅನ್ನುವಷ್ಟು ಸಾಂಗತ್ಯದ ಅಗತ್ಯವಿದೆಯಾ.? ಹಾಗಿದ್ರೆ ಈಗ ಒಂದು ಅದ್ಭುತ ಡಿವೈಸ್ ಬಂದಿದೆ. ಅದು ನಿಮ್ಮ ಗೆಳೆಯನಾಗಿ ಗೆಳತಿಯಾಗಿ ನಿಮ್ಮೊಂದಿಗೆ ಮಾತನಾಡುತ್ತದೆ. ಆ ಗೆಳೆಯ ಅಥವಾ ಗೆಳತಿಯ ಹೆಸರೇ ಎಐ ನಕ್ಲೇಸ್​ ಅಥವಾ ಫ್ರೆಂಡ್ ಎಐ
ಇದು ಒಂದು ಎಐ ತಂತ್ರಜ್ಞಾನ, ಇದನ್ನು ನಾವು ಕುತ್ತಿಗೆಯಲ್ಲಿ ನಕ್ಲೇಸ್ ಅಥವಾ ಚೈನ್​ ರೀತಿ ಹಾಕಿಕೊಳ್ಳಬಹುದು, ಶರ್ಟ್ ಟೀ ಶರ್ಟ್​ಗಳಿಗೆ ಮೈಕ್​ ರೀತಿಯಲ್ಲೂ ಹಾಕಿಕೊಂಡು ತಿರುಗಬಹುದು. ಇದು ನಿಮ್ಮ ಮಾನಸಿಕ ನೆಮ್ಮದಿಯನ್ನು ನೀಡುವ ಕಾರ್ಯವನ್ನು ಮಾಡುತ್ತದೆ. ನಿಮ್ಮ ಒಂಟಿತನವನ್ನು ದೂರು ಮಾಡುತ್ತದೆ. ಇದನ್ನು ಫ್ರೆಂಡ್ ಎಐ ಎಂದೇ ಕರೆಯಲಾಗುತ್ತದೆ. ಈ ಫ್ರೆಂಡ್ ಡಿವೈಸ್​ನ ಇನ್​ಬಿಲ್ಟ್​ನಲ್ಲಿ ಮೈಕ್ರೋಫೋನ್ ಅಳವಡಿಸಲಾಗಿದೆ. ಆ ಮೈಕ್ರೋಫೋನ್ ಮೂಲಕ ಅದು ನಿಮ್ಮ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಬಳಿಕ ಅದು ಟೆಕ್ಷ್ಟ್ ಮೂಲಕ ಅಂದ್ರೆ ವಾಟ್ಸಾಪ್​ನಲ್ಲಿ ಚಾಟ್​ ರೀತಿಯಲ್ಲಿ ಪದಗಳ ಮೂಲಕ ನಿಮಗೆ ಉತ್ತರ ನೀಡುತ್ತದೆ. ಅದಕ್ಕಾಗಿ ನೀವು ಒಂದು ಫ್ರೆಂಡ್ ಆ್ಯಪ್​ನ್ನ ನೀವು ಡೌನ್​ಲೋಡ್ ಮಾಡಿಕೊಳ್ಳಬೇಕು
ಹಾರ್ವರ್ಡ್​​ನಿಂದ ಡ್ರಾಪೌಟ್​ ಆದ ವ್ಯಕ್ತಿಯಿಂದ ಸೃಷ್ಟಿಯಾದ ಫ್ರೆಂಡ್ ಎಐ
ಈ ಫ್ರೆಂಡ್ ಎಐಯನ್ನು ಅವಿ ಸ್ಚಿಫ್​ಮ್ಯಾನ್ ಅನ್ನುವವರು ನಿರ್ಮಿಸಿದ್ದಾರೆ. ಅವಿ ಹಾರ್ಡರ್ಡ್​ನಿಂದ ಡ್ರಾಪ್​ಔಟ್ ಆದ ಒಬ್ಬ ವಿದ್ಯಾರ್ಥಿಯಾಗಿರುವ ಅವರು, ಒಂಟಿತನಕ್ಕೆ ಈ ಫ್ರೆಂಡ್ ಎಐ ಅದ್ಭುತ ಪರಿಹಾರ, ಇದು ನಿಮಗೆ ತುಂಬಾ ಕೆಲಸಕ್ಕೆ ಬರುತ್ತದೆ ಈ ಪ್ರೊಡಕ್ಟ್​ ನಿಮ್ಮ ಸಂಗಾತಿಯ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಇದರ ಬೆಲೆ ಕೇವಲ ಅಮೆರಿಕಾದ 99 ಡಾಲರ್ ಎಂದು ಕೂಡ ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us