/newsfirstlive-kannada/media/post_attachments/wp-content/uploads/2024/03/Kohli-RCB.jpg)
ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ವಿಡಿಯೋ ಹಂಚಿಕೊಳ್ಳುವ ಮೂಲಕ ಪಶ್ಚಿಮ ಬಳಗಾಳದ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ವಿಡಿಯೋ ಹಂಚಿಕೊಂಡು ಹೆಲ್ಮೆಟ್ ಧರಿಸುವಂತೆ ಹೇಳಿದ್ದಾರೆ.
ನಿನ್ನೆ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಪ್ರಮುಖ ಪ್ಲೇಯರ್ ಕೊಹ್ಲಿ 83 ರನ್ ಬಾರಿಸಿದ್ದರು. ಅದರಲ್ಲಿ 4 ಸಿಕ್ಸ್ ಮತ್ತು 4 ಬೌಂಡರಿ ಬಾರಿಸಿದ್ದರು. ಕೊಹ್ಲಿ ಸಿಕ್ಸ್ ಬಾರಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು ವೆಸ್ಟ್ ಬೆಂಗಾಲದ ಪೊಲೀಸರು ಕೊಹ್ಲಿಯಂತೆ ಹೆಲ್ಮೆಟ್ ಧರಿಸಿ ಎಂಬ ಜಾಗೃತಿಯನ್ನು ಸಾರಿಸಿದ್ದಾರೆ.
ಇದನ್ನೂ ಓದಿ:ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಖರ್ಗೆ ಪ್ರಧಾನಿಯಾಗೋದು ಅಷ್ಟೇ ಸತ್ಯ; ಬಾಬುರಾವ್ ಚಿಂಚನಸೂರ್
ಅಂದಹಾಗೆಯೇ ಪಶ್ಚಿಮ ಬಂಗಾಳದ ಪೊಲೀಸರು ರಸ್ತೆ ಸುರಕ್ಷತೆಯ ಬಗ್ಗೆ ಸಾರಿದ ವಿಡಿಯೋ ಇದಾಗಿದೆ. ಇದರಲ್ಲಿ ಟೀಂ ಇಂಡಿಯಾದ ಆಟಗಾರ ಕೊಹ್ಲಿಯಂತೆ ಹೆಲ್ಮೆಟ್ ಧರಿಸಿ. ಸುರಕ್ಷತೆಯ ಚಾಲನೆಯಿಂದ ಜೀವನ ಉಳಿಸಿ ಎಂಬ ಸಂದೇಶ ಸಾರಿದ್ದಾರೆ.
#ViratKohli#SafeDriveSaveLifepic.twitter.com/2Jyn4r6p6Q
— West Bengal Police (@WBPolice)
— West Bengal Police (@WBPolice) March 29, 2024
">March 29, 2024
ಸದ್ಯ ಪಶ್ಚಿಮ ಬಂಗಾಳದ ಪೊಲೀಸರು ಹಂಚಿಕೊಂಡ ವಿಡಿಯೋ ಕಂಡು ಆರ್ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೊಹ್ಲಿಯನ್ನು ಕಂಡು ಬಗೆ ಬಗೆಯ ಕಾಮೆಂಟ್ ಬರೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ