/newsfirstlive-kannada/media/post_attachments/wp-content/uploads/2024/06/Suraj-revanna-2-1.jpg)
ಅಸಹಜ ಲೈಂಗಿಕ ಕಿರುಕುಳ ಆರೋಪದ ಮೇಲೆ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಅವರ ಬಂಧನವಾಗಿದೆ. ಹಾಸನದ ಸೆನ್ ಠಾಣೆಯಲ್ಲಿ ಸೂರಜ್ ರೇವಣ್ಣ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಂತ್ರಸ್ತನ ದೂರು ಆಲಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಳಿಕ ಇಂದು ಸೂರಜ್ ರೇವಣ್ಣರವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಸಂತ್ರಸ್ತ ಸೂರಜ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ..
ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ಮಾಡಿರುವ ಆರೋಪ
ಸಂತ್ರಸ್ತ ಯುವಕ ಸೂರಜ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಾರೆ. ಜೂ.16ರ ಸಂಜೆ ಗನ್ನಿಕಡದ ತೋಟದ ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಸೂರಜ್ ರೇವಣ್ಣ ಅರೆಸ್ಟ್.. ಸಂತ್ರಸ್ತನ ದೇಹದ ಮೇಲೆ ಕಚ್ಚಿದ ಕಲೆಗಳು ಪತ್ತೆ
ಲೈಫ್ ಸೆಟ್ಲ್ ಮಾಡ್ತೀನಿ
ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಪರ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತ ಯುವಕ ಮತ್ತು ಸೂರಜ್ ರೇವಣ್ಣ ಭೇಟಿಯಾಗುತ್ತದೆ. ಬಳಿಕ ಸೂರಜ್ ನಂಬರ್ ಕೊಡು ಲೈಫ್ ಸೆಟ್ಲ್ ಮಾಡ್ತೀನಿ ಎಂದು ಹೇಳಿದ್ದಾರಂತೆ. ಅದರಂತೆ ಸೂರಜ್ ರೇವಣ್ಣ ನಂಬರ್ ಪಡೆದಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.
ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ.. ತಂದೆಯೊಂದಿಗೆ ವಾಸವಿದ್ದ ದೊಡ್ಡಮ್ಮನ ಹತ್ಯೆ
ತೋಟದ ಮನೆಗೆ ಆಹ್ವಾನ
ನಂಬರ್ ಪಡೆದ ಬಳಿಕ ಗುಡ್ ಇವ್ನಿಂಗ್ ಕಣೋ ಅಂತ ಲವ್ ಸಿಂಬಲ್ ಜೊತೆ ಮೆಸೇಜ್ ಮಾಡಿದ್ದಾರೆ. ಅದಕ್ಕೆ ಸಂತ್ರಸ್ತ ಯುವಕ ವೆರಿ ಗುಡ್ ಇವನಿಂಗ್ ಅಣ್ಣ ಎಂದು ಮೆಸೇಜ್ ಮಾಡಿದ್ದು, ಬಳಿಕ ಒಬ್ಬನನ್ನೇ ತೋಟದ ಮನೆಗೆ ಆಹ್ವಾನಿಸಿದ್ದಾರೆ.
2 ಕೋಟಿ ದುಡ್ಡಿನ ಆಮಿಷ
ಭಾನುವಾರ ಸಂಜೆ ಸಂತ್ರಸ್ತ ಸೂರಜ್ ರೇವಣ್ಣನ್ನು ಭೇಟಿಯಾಗಲು ಹೋದಾಗ ಬಲವಂತವಾಗಿ ಅಸಹಜವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಮಾತ್ರವಲ್ಲದೆ ಇದನ್ನು ಯಾರಿಗಾದ್ರೂ ಹೇಳಿದ್ರೆ ನಿನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರಂತೆ. ಜೊತೆಗೆ 2 ಕೋಟಿ ದುಡ್ಡು ಕೊಡುವ ಆಮಿಷವೊಡ್ಡಿದ್ದಾರೆಂದು ಸಂತ್ರಸ್ತನ ಆರೋಪಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್.. ನಟನಿಗೆ ನೀಡಿದ ಫೆಸಿಲಿಟಿ ಮಾತ್ರ..
ಕೊಲೆ ಮಾಡಲು ಸಂತ್ರಸ್ತನನ್ನು ಹುಡುಕಾಟ
ಒಪ್ಪದಿದ್ದಾಗ ಕೊಲೆ ಮಾಡಲು ಸಂತ್ರಸ್ತನನ್ನು ಹುಡುಕಾಟ ನಡೆದಿದೆ ಎನ್ನಲಾಗುತ್ತಿದೆ. ಕೊನೆಗೆ ಸಂತ್ರಸ್ತ ಬೆಂಗಳೂರಿಗೆ ಬಂದು ಡಿಜಿಗೆ ದೂರು ನೀಡಿದ್ದಾರೆ. ಜೊತೆಗೆ ಲೈಂಗಿಕ ದೌರ್ಜನ್ಯದ ವೈದ್ಯಕೀಯ ದಾಖಲಾತಿಯನ್ನೂ ಮಾಡಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ