ಸಂಬಂಧದಲ್ಲಿ ದೈಹಿಕ ಸ್ಪರ್ಶ ಎಷ್ಟು ಮುಖ್ಯ? ತಬ್ಬಿ ಮುದ್ದಾಡುವುದರಿಂದ ಆಗೋ ಲಾಭವೇನು?

author-image
Ganesh Nachikethu
Updated On
ಸಂಬಂಧದಲ್ಲಿ ದೈಹಿಕ ಸ್ಪರ್ಶ ಎಷ್ಟು ಮುಖ್ಯ? ತಬ್ಬಿ ಮುದ್ದಾಡುವುದರಿಂದ ಆಗೋ ಲಾಭವೇನು?
Advertisment
  • ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸುವ ಅತ್ಯಂತ ಸುಂದರವಾದ ಮಾರ್ಗ ಅಪ್ಪುಗೆ
  • ಭಾವನೆಗಳಿಂದ ಬಂಧಿಸಲ್ಪಟ್ಟ ಸಂಬಂಧದಲ್ಲಿ ಅಪ್ಪುಗೆ ಅನ್ನೋದು ಕಡ್ಡಾಯ!
  • ಇಬ್ಬರ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ಅಪ್ಪುಗೆ ಪಾತ್ರ ದೊಡ್ಡದು

'ಕಷ್ಟ ಮನುಷ್ಯನಿಗೆ ಬರದೇ, ಮರಕ್ಕೆ ಬರುತ್ತಾ' ಅನ್ನೋ ಮಾತೊಂದು ಇದೆ. ಯಾವಾಗಲೂ ಮನುಷ್ಯನಿಗೆ ಕಷ್ಟ ಇದ್ದಿದ್ದೇ. ನಮಗೆ ಕಷ್ಟಕಾಲದಲ್ಲಿ ಧೈರ್ಯ ತುಂಬೋರು ಬೇಕೇ ಬೇಕು. ಅದರಲ್ಲೂ ನಮ್ಮ ಪ್ರೀತಿ ಪಾತ್ರರಿಗೆ ಕಷ್ಟ ಬಂದಾಗ ಒಂದು ಅಪ್ಪುಗೆ ನೀಡಿ ಧೈರ್ಯ ಹೇಳೋದು ತುಂಬಾ ಮುಖ್ಯ. ಪ್ರೀತಿ-ಪ್ರೇಮ ಹಾಗೂ ಸ್ನೇಹ ಸಂಬಂಧಗಳಲ್ಲಿ ಅಪ್ಪುಗೆ ಪಾತ್ರ ದೊಡ್ಡದು. ನಾನು ನಿನ್ನೊಂದಿಗಿದ್ದೇನೆ ಎಂದು ಹೇಳುವ ಭಾವನೆ ಮೂಡಿಸುವುದೇ ಒಂದು ಅಪ್ಪುಗೆ. ಅದರಲ್ಲೂ ಸಾಂಸಾರಿಕ ಜೀವನದಲ್ಲಿ, ಪ್ರೀತಿಯಲ್ಲಿ ಏನಾದ್ರೂ ಸಮಸ್ಯೆ ಬಂದಾಗ ತಬ್ಬಿ ಮುದ್ದಾಡುವುದು ಬಹಳ ಮುಖ್ಯ.

ತಂದೆ-ತಾಯಿ ಮಕ್ಕಳನ್ನು ಹಗ್‌ ಮಾಡುವುದು. ಕಷ್ಟದಲ್ಲಿರೋ ಸ್ನೇಹಿತರಿಗೆ ಅಪ್ಪುಗೆ ಕೊಡುವುದು. ಆಪ್ತರ, ಸಂಗಾತಿಯ, ಹಿತೈಷಿಗಳ ಅಪ್ಪುಗೆ ಹಲವು ಇವೆ. ಎಲ್ಲವೂ ಆಪ್ತ ಭಾವನೆಯನ್ನು ವ್ಯಕ್ತಪಡಿಸುತ್ತವೆ. ಈ ರೀತಿ ಅಪ್ಪುಗೆಯಿಂದ ಆಗೋ ಪ್ರಯೋಜನೆಗಳು ಏನು ಅನ್ನೋ ಸ್ಟೋರಿ ಇಲ್ಲಿದೆ!

ಅಪ್ಪುಗೆಯಿಂದ ಆಗೋ ಪ್ರಯೋಜನೆಗಳು ಇವು..!

1. ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸುವ ಅತ್ಯಂತ ಸುಂದರವಾದ ಮಾರ್ಗ ಅಪ್ಪುಗೆ
2. ಭಾವನೆಗಳಿಂದ ಬಂಧಿಸಲ್ಪಟ್ಟ ಸಂಬಂಧದಲ್ಲಿ ಅಪ್ಪುಗೆ ಅನ್ನೋದು ಕಡ್ಡಾಯ!
3. ಇಬ್ಬರ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ಅಪ್ಪುಗೆ ಪಾತ್ರ ದೊಡ್ಡದು
4. ಅಪ್ಪುಗೆ ಸದಾ ನಿಮ್ಮ ಮತ್ತು ತಬ್ಬಿಕೊಂಡವರ ಮನಸ್ಸನ್ನು ಶಾಂತಗೊಳಿಸುತ್ತದೆ
5. ಪ್ರೀತಿ ಪಾತ್ರರಿಂದ ಒಂದು ಅಪ್ಪುಗೆ ಪಡೆಯೋದು ಆರೋಗ್ಯಕ್ಕೆ ಒಳ್ಳೆಯದು
6. ಒಂದು ಅಪ್ಪುಗೆ ನಮ್ಮನ್ನು ಯಾವುದೇ ಒತ್ತಡದಿಂದ ಆದ್ರೂ ಹೊರ ತರುತ್ತೆ
7. ನಿಮ್ಮ ಪ್ರೀತಿ ಪಾತ್ರರನ್ನು ಅಪ್ಪಿಕೊಳ್ಳುವುದು ನಿಮ್ಮ ಹೃದಯಕ್ಕೆ ಒಳ್ಳೆಯದು
8. ಅಪ್ಪುಗೆ ಹೃದಯ ಬಡಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
9. ಅಪ್ಪಿಕೊಳ್ಳುವುದು ಎಂಡಾರ್ಫಿನ್‌ಗಳ ಬಿಡುಗಡೆಗೆ ಸಹಾಯ ಮಾಡುತ್ತದೆ
10. ಎಂಡಾರ್ಫಿನ್‌ಗಳ ರಿಲೀಸ್​ ಆದಮೇಲೆ ನಿಮ್ಮ ಒತ್ತಡ ಕಡಿಮೆ ಆಗಲಿದೆ
11. ಅಷ್ಟೇ ಎಲ್ಲ ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸಲಿದೆ ಎನ್ನಬಹುದು
12. ಹಗ್‌ ಮಾಡುವುದು ಆರೋಗ್ಯಕರ ಸಂಬಂಧ ಸೃಷ್ಟಿಗೆ ಸಹಕಾರಿಯಾಗುತ್ತದೆ
13. ಒಂದು ಹಗ್​ ಪ್ರೀತಿಯ, ಕಾಳಜಿಯ ಭಾವನೆಯನ್ನು ಮೂಡಿಸುತ್ತದೆ
14. ಅಪ್ಪುಗೆ ಒಂಟಿತನದ ಭಾವನೆಯನ್ನು ಸೆಕೆಂಡಿನಲ್ಲಿ ನಿವಾರಿಸುತ್ತದೆ
15. ಇದರಿಂದಾಗಿ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ

ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ಕೆಲಸ ಮಾಡಲೇಬೇಕು; ನೀವು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment