newsfirstkannada.com

VIDEO: ಕೋವಿಶೀಲ್ಡ್‌ ಸೈಡ್ ಎಫೆಕ್ಟ್ ಏನು? ಡಾ. ಸಿ.ಎನ್ ಮಂಜುನಾಥ್ ಬಿಚ್ಚಿಟ್ರು ಅಸಲಿ ಕಾರಣ

Share :

Published May 2, 2024 at 8:58pm

Update May 2, 2024 at 8:59pm

    ವಾಕ್ಸೀನ್ ಕಂಡು ಹಿಡಿಯದಿದ್ರೆ ಕೋಟ್ಯಾಂತರ ಭಾರತೀಯರು ಸಾವು

    ಹೃದಯದ ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ರೆ ಹೃದಯಾಘಾತ ಆಗಬಹುದು

    ಆರೋಗ್ಯವಾಗಿರಲು ಹವ್ಯಾಸ, ಅಭ್ಯಾಸಗಳು ಸರಿಯಾಗಿರಬೇಕು

ಬೆಂಗಳೂರು: ಕೊರೊನಾ ಮಹಾಮಾರಿಯ ಆತಂಕದಿಂದ ಹೊರ ಬಂದ ಜನರನ್ನ ಇದೀಗ ಕೋವಿಶೀಲ್ಡ್ ಭಯ ಆವರಿಸಿದೆ. ಲಂಡನ್ ಕೋರ್ಟ್‌ನಲ್ಲಿ ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಅಸ್ಟ್ರಾಜೆನೆಕಾ ಸತ್ಯ ಒಪ್ಪಿಕೊಂಡಿದೆ. ಈ ಸತ್ಯ ಬಯಲಾದ ಮೇಲೆ ದೇಶಾದ್ಯಂತ ಭಯದ ಕಾರ್ಮೋಡ ಕವಿಯುವಂತೆ ಮಾಡಿದೆ. ಜೀವ ಉಳಿಸಲು ತೆಗೆದುಕೊಂಡ ಲಸಿಕೆಯಿಂದಲೇ ಹಿಂಗಾದ್ರೆ ಹೆಂಗೆ ಅಂತ ಜನ ಆತಂಕ ಭರಿತ ಪ್ರಶ್ನೆ ಎತ್ತಿದ್ದಾರೆ.

ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಇದೀಗ ಸಾಕಷ್ಟು ಭಯ ಸೃಷ್ಟಿಸಿದೆ. ಸೈಡ್ ಎಫೆಕ್ಟ್ ಆಗದಂತೆ ಪರ್ಯಾಯ ಔಷಧಿಯನ್ನು ಈಗಿನಿಂದಲೇ ಕಂಡು ಹಿಡಿಯಬೇಕೆಂಬ ಕೂಗು ಕೇಳಿ ಬರುತ್ತಾ ಇದೆ. ಕೋವಿಶೀಲ್ಡ್ ಭಯ ಜನರಲ್ಲಿ ಆವರಿಸಿರುವಾಗ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಅವರು ನ್ಯೂಸ್ ಫಸ್ಟ್ ಚಾನೆಲ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್ ಸೈಡ್ ಎಫೆಕ್ಟ್.. ಪುನೀತ್ ರಾಜ್ ಕುಮಾರ್ ವ್ಯಾಕ್ಸಿನ್‌ ಫೋಟೋ ವೈರಲ್‌; ತೀವ್ರ ಆಕ್ರೋಶ! 

ಕೋವಿಶೀಲ್ಡ್ ಸೈಡ್ ಎಫೆಕ್ಟ್ ಬಗ್ಗೆ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್ ಅವರು, ಮೊದಲು ನಾವು ವಾಕ್ಸೀನ್ ಅನ್ನು ಕಂಡು ಹಿಡಿದವರೂ ಹಾಗೂ ವ್ಯಾಕ್ಸೀನ್‌ ತಯಾರಿಕೆ ಮಾಡಿದವರಿಗೆ ಅಭಿನಂದನೆ ಸಲ್ಲಿಸಬೇಕು. ಇವತ್ತು ವ್ಯಾಕ್ಸೀನ್ ಕೊಡದೇ ಇದ್ದಿದ್ರೆ ಕೋಟ್ಯಾಂತರ ಮಂದಿ ಸಾವನ್ನಪ್ಪುತ್ತಿದ್ದರು. ಭಾರತ ದೇಶದಲ್ಲಿ 80 ಕೋಟಿ ಜನರಿಗೆ ಸುಮಾರು 270 ಕೋಟಿ ಲಸಿಕೆಗಳನ್ನು ಕೊಡಲಾಗಿದೆ.

ವಾಕ್ಸೀನ್ ಕೊಟ್ಟ ಮೇಲೆ ಕೊರೊನಾ 3, 4ನೇ ಅಲೆ ಬಂದರೂ ಸಾವಿನ ಸಂಖ್ಯೆ ಹೆಚ್ಚಾಗಲಿಲ್ಲ. ವಾಕ್ಸೀನ್ ಕಂಡು ಹಿಡಿಯದಿದ್ರೆ ಕೋಟ್ಯಾಂತರ ಜನ ಭಾರತ ದೇಶದಲ್ಲೇ ಸಾವನ್ನಪ್ಪುತ್ತಿದ್ದರು. ವ್ಯಾಕ್ಸೀನ್ ತೆಗೆದುಕೊಂಡ ಪ್ರತಿ 10 ಲಕ್ಷ ಜನರಲ್ಲಿ 6-7ರಲ್ಲಿ ರಕ್ತ ಹೆಪ್ಪುಗಟ್ಟಬಹುದು. ಹೃದಯದ ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ರೆ ಹೃದಯಾಘಾತ ಆಗಬಹುದು. ಬ್ರೈನ್ ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ರೆ ಸ್ಟ್ರೋಕ್ ಆಗಬಹುದು. ಈ ಮಾಹಿತಿ ಏನು ಹೊಸದಲ್ಲ. ಇದರ ಸೈಡ್ ಎಫೆಕ್ಟ್ ನಮಗೆ ಮೊದಲೇ ಗೊತ್ತಿತ್ತು.

ಒಂದು ಒಳ್ಳೆಯ ಔಷಧ ಅಂದ್ರೆ ಬೆನಿಫಿಟ್‌ 99.99ರಷ್ಟು 0.05ರಷ್ಟು ರಿಸ್ಕ್ ಇದೆ. ರಿಸ್ಕ್‌ಗಿಂತ ಬೆನಿಫಿಟ್ 1000 ಪಟ್ಟು ಹೆಚ್ಚಿದೆ. ನಾವು ವಾಕ್ಸೀನ್ ತೆಗೆದುಕೊಂಡು ಈಗಾಗಲೇ 3 ವರ್ಷಗಳಾಗಿದೆ. ಕೊರೊನೊ ಬರೋದಕ್ಕೂ ಮೊದಲು ಕೂಡ ಶೇಕಡಾ 30 ರಷ್ಟು ಹೃದಯಾಘಾತ 40 ವರ್ಷಕ್ಕಿಂತ ಚಿಕ್ಕ ವಯಸ್ಸಿನವರಲ್ಲೇ ಆಗುತ್ತಾ ಇತ್ತು. ಕೊರೊನಾಗೂ ಮೊದಲೇ ಭಾರತ ದೇಶದಲ್ಲಿ ಯುವಕರು, ಮಧ್ಯ ವಯಸ್ಕರಲ್ಲಿ ಹೃದಯಾಘಾತ ಆಗುವುದು ಶೇಕಡಾ 22ರಷ್ಟು ಜಾಸ್ತಿ ಆಗಿದೆ.

ಇದನ್ನೂ ಓದಿ: ಶಾಕಿಂಗ್​ ನ್ಯೂಸ್​: ಫೇಶಿಯಲ್ ಮಾಡಿಸಿಕೊಂಡ 3 ಮಹಿಳೆಯರಲ್ಲಿ HIV ಪಾಸಿಟಿವ್​​.. ಹೇಗಾಯ್ತು? 

ಈ ಎಲ್ಲಾ ಕಾರಣದಿಂದ ಕೋವಿಶೀಲ್ಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಹವ್ಯಾಸ, ಅಭ್ಯಾಸಗಳು ಸರಿಯಾಗಿರಬೇಕು. ಧೂಮಪಾನ, ಮಧ್ಯಪಾನ ಮಾಡಬಾರದು. ಸಕ್ಕರೆ ಕಾಯಿಲೆ ಇದ್ದರೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ದೈಹಿಕ ವ್ಯಾಯಾಮ ಜಾಸ್ತಿ ಇರಬೇಕು. ಹಣ್ಣು, ತರಕಾರಿಯನ್ನು ಹೆಚ್ಚು ಸೇವಿಸಬೇಕು. ಕೋವಿಶೀಲ್ಡ್‌ ವ್ಯಾಕ್ಸೀನ್‌ ಎಫೆಕ್ಟ್ ತಗೊಂಡು 3 ವರ್ಷಗಳಾಗಿದೆ. ನಾವು ಸೇಫ್ ಎಂದು ಡಾ.ಸಿ. ಎನ್‌ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೋವಿಶೀಲ್ಡ್‌ ಸೈಡ್ ಎಫೆಕ್ಟ್ ಏನು? ಡಾ. ಸಿ.ಎನ್ ಮಂಜುನಾಥ್ ಬಿಚ್ಚಿಟ್ರು ಅಸಲಿ ಕಾರಣ

https://newsfirstlive.com/wp-content/uploads/2024/02/CN_MANJUNATH.jpg

Load More