/newsfirstlive-kannada/media/post_attachments/wp-content/uploads/2024/06/DARSHAN-JAIL-2.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ತಿಂಗಳೊಳಗೆ ದರ್ಶನ್ ಸೊರಗಿ ಹೋಗಿದ್ದಾರೆ. ಜೈಲೂಟಕ್ಕೆ ಬೇಸತ್ತು ಮನೆ ಊಟಕ್ಕಾಗಿ ಮನವಿ ಮಾಡಿದ್ದಾರೆ. ಆದ್ರೀಗ ಅದಕ್ಕೂ ಹೈಕೋರ್ಟ್ ತಣ್ಣೀರೆರಚಿದೆ.
ಶೂಟಿಂಗ್, ಪಾರ್ಟಿ, ಮೋಜು ಮಸ್ತಿ, ಫಾರಿನ್ ಟೂರ್, ಫ್ರೆಂಡ್ಸ್ ಜೊತೆ ಟ್ರಿಪ್. ರುಚಿ ರುಚಿಯಾದ ಊಟ ತಿನ್ಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್ ಜೈಲು ಹಕ್ಕಿ ಆಗಿದ್ದೇ ಆಗಿದ್ದು, ಸೆರೆಮನೆ ವಾಸಕ್ಕೆ ಒಗ್ಗಿಕೊಳ್ಳೋಕೆ ಆಗದೇ ಒದ್ದಾಡ್ತಿದ್ದಾರೆ.
ಇದನ್ನೂ ಓದಿ: ಜೈಲೂಟ ತಿಂದ್ರೆ ಅತಿಸಾರ.. ಮನೆ ಊಟ, ಬಟ್ಟೆ.. ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ಬೇಡಿಕೆಗಳೇನು?
ಮನೆ ಊಟಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ದರ್ಶನ್‌ಗೆ ನಿರಾಸೆ
ಮುಂದಿನ ಗುರುವಾರದವರೆಗೂ ದರ್ಶನ್‌ಗೆ ಜೈಲೂಟವೇ ಗತಿ
ಪರಪ್ಪನ ಅಗ್ರಹಾರದ ಜೈಲೂಟಕ್ಕೆ ಒಗ್ಗಿಕೊಳ್ಳದೇ A2 ದರ್ಶನ್ ಪರದಾಡ್ತಿದ್ದಾರೆ. ಅದು ಯಾವ ಪರಿ ಅಂದ್ರೆ ಅತಿಸಾರ, ಫುಡ್ ಪಾಯ್ಸನ್ ಜೊತೆಗೆ ದೇಹದ ತೂಕ ಬೇರೆ ಇಳಿಕೆ ಆಗುತ್ತಾ ಇದ್ಯಂತೆ. ಹೀಗಾಗಿ ದರ್ಶನ್ ಮನೆ ಊಟಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಆದ್ರೀಗ ದರ್ಶನ್‌ಗೆ ಕೋರ್ಟ್ ನಿರಾಸೆ ಮೂಡಿಸಿದ್ದು, ಮುಂದಿನ ಗುರುವಾರದವರೆಗೂ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ.
ದರ್ಶನ್ ರಿಟ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಜುಲೈ 18ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
ದರ್ಶನ್ ಪರ ವಕೀಲರು ಮನೆ ಊಟ, ಹಾಸಿಗೆ ಮತ್ತು ಪುಸ್ತಕಕ್ಕೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದ್ರಿವತ್ತು ಹೈಕೋರ್ಟ್ ರಿಟ್ ಅರ್ಜಿ ಮುಂದೂಡಿದೆ. ಜುಲೈ 18ಕ್ಕೆ ರಿಟ್ ಅರ್ಜಿ ಮುಂದೂಡಿದ್ದು, ಸದ್ಯಕ್ಕೆ ದರ್ಶನ್ ಮಾಡಿದ್ದ ಮನೆ ಊಟ, ಚಮಚ, ಬಟ್ಟೆ, ಪುಸ್ತಕದ ಬೇಡಿಕೆ ಈಡೇರೋದು ಕಷ್ಟವಾಗಿದೆ.
ಇದನ್ನೂ ಓದಿ: ಜೈಲೂಟಕ್ಕೆ ಪರದಾಟ.. ದರ್ಶನ್‌ಗಾಗಿ ಡ್ರೈ ಫ್ರೂಟ್ಸ್ ತಂದ ಅಕ್ಕ, ಬಾವನಿಗೆ ಬಿಗ್ ಶಾಕ್; ಪೊಲೀಸ್ರು ಮಾಡಿದ್ದೇನು?
ದರ್ಶನ್‌ಗೆ ಜೈಲಿನ ಊಟ ತಿಂದಾಗ ಅತಿಸಾರ ಅಂದ್ರೆ ಭೇದಿ ಆಗುತ್ತಿದೆ. ಜೈಲಿನ ಆಹಾರ ಒಗ್ಗದೇ ಫುಡ್ ಪಾಯ್ಸನಿಂಗ್ ಆಗ್ತಿದೆ. ಜೈಲಿನ ಆಹಾರ ಸೂಕ್ತವಲ್ಲ ಅಂತ ವೈದ್ಯರೇ ಹೇಳಿದ್ದಾರೆ. ಭೇದಿಯಿಂದ ದರ್ಶನ್ ತೂಕವೂ ಕಡಿಮೆಯಾಗುತ್ತಿದೆ. ಒಂದ್ವೇಳೆ ಹೀಗೆ ಮುಂದುವರಿದ್ರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ಅನಾರೋಗ್ಯಕ್ಕೂ ಎಡೆಮಾಡಿಕೊಡುವ ಸಾಧ್ಯತೆ ಇದೆ. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ ಅಂತ ರಿಟ್ ಅರ್ಜಿಯಲ್ಲಿ ಕೋರಲಾಗಿತ್ತು. ಆದ್ರೀಗ ರಿಟ್ ಅರ್ಜಿ ವಿಚಾರಣೆಯನ್ನ ಹೈ ಕೋರ್ಟ್ ಜುಲೈ 18ಕ್ಕೆ ಮುಂದೂಡಿ ದರ್ಶನ್‌ಗೆ ನಿರಾಸೆ ಮೂಡಿಸಿದೆ.
ಕೋರ್ಟ್ ಪ್ರಶ್ನೆ ಏನು?
ಜೈಲು ಅಧಿಕಾರಿಗಳಿಗೆ ಈ ಬಗ್ಗೆ ಕೋರಿಕೆ ಸಲ್ಲಿಸಿದ್ದೀರಾ?
ವಿಚಾರಣಾಧೀನ ಕೋರ್ಟ್ನಲ್ಲಿ ಕೋರಿಕೆ ಸಲ್ಲಿಸಿದ್ದೀರಾ?
ಮೊದಲು ಜೈಲಿನ ನಿಯಮಗಳನ್ನ ಕೋರ್ಟ್ಗೆ ತೋರಿಸಿ
ಜೈಲಿನಲ್ಲಿ ಪರಿಷ್ಕರಣೆ ನಿಯಮ ಅನ್ನೋದು ಇದೆ ಅಲ್ವಾ?
ಆ ನಿಯಮಗಳನ್ನ ಮೊದಲು ನ್ಯಾಯಾಲಯಕ್ಕೆ ತೋರಿಸಿ
ನಿಯಮ ತೋರಿಸಿದ ಬಳಿಕ ನಾವು ಆದೇಶ ನೀಡಬಹುದು
ಈ ಕೇಸ್ ಸಂಬಂಧಿಸಿದ ನಿಬಂಧನೆಗಳನ್ನ ಸಲ್ಲಿಕೆ ಮಾಡಿ
ನಿದ್ದೆ ಇಲ್ಲದೆ, ಊಟ ಇಲ್ಲದೆ ಸೊರಗಿರೋ ದರ್ಶನ್ ಮನೆ ಊಟಕ್ಕಾಗಿ ಚಡಪಡಿಸುತ್ತಿದ್ದಾರೆ. ಆದ್ರೀಗ ಕೋರ್ಟ್ ರಿಟ್ ಅರ್ಜಿ ವಿಚಾರಣೆ ಮುಂದೂಡಿದ್ದು, ಸದ್ಯಕ್ಕೆ ದಾಸನಿಗೆ ಜೈಲೂಟವೇ ಗತಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ