newsfirstkannada.com

ಬಿಸಿ ನೀರು ಕುಡಿಯೋದರಿಂದ ಯಾವೆಲ್ಲಾ ಕಾಯಿಲೆಗಳು ತಡೆಯಬಹುದು? ಇಲ್ಲಿವೆ ಹೆಲ್ತ್​​ ಟಿಪ್ಸ್​..!

Share :

Published March 28, 2024 at 6:19am

    ಆಹಾರ ಜೀರ್ಣವಾಗಬೇಕು ಅಂದರೆ ಬಿಸಿನೀರು ಕುಡಿಯಬೇಕಾ..?

    ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ

    ಹಾಟ್​ ವಾಟರ್​ ಕುಡಿಯುವುದರಿಂದ ದೇಹಕ್ಕೆ ನಿಜವಾಗಿಯೂ ಉತ್ತಮವೇ?

ಈಗಿನ ಜನರು ಗಂಟೆಗಟ್ಟಲೇ ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ತಿಂದಿರುವ ಆಹಾರ ಹೊಟ್ಟೆಯಲ್ಲಿ ಕರಗುವುದು ತುಂಬಾ ಕಡಿಮೆ. ಇದು ನೇರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಎಂದರೆ ಒಂದು ಕಪ್​ ಬಿಸಿ ನೀರು ಸಾಕು. ಬಿಸಿ ನೀರು ಜೀರ್ಣಕಾರಿ ಸಮಸ್ಯೆಗಳನ್ನ ನಿವಾರಿಸುತ್ತದೆ. ನಿತ್ಯ ಬಿಸಿ ನೀರು ಕುಡಿದರೆ ಯಾವುದೇ ಆಹಾರ ಬೇಗ ಜೀರ್ಣವಾಗುತ್ತದೆ. ಒಂದು ಕಪ್ ಬಿಸಿನೀರಿನಿಂದ ಹಲವಾರು ಉಪಯೋಗಗಳು ಕೂಡ ಅವೆಂದರೆ..

ದೇಹ ಫಿಟ್ ಮತ್ತು ಆರೋಗ್ಯಕರ ಇರಲು ಬಿಸಿನೀರು ಪ್ರಮುಖ ಪಾತ್ರ ವಹಿಸುತ್ತದೆ. ಬೆಚ್ಚಗಿನ ನೀರನ್ನು ಕುಡಿಯುವುದು ತೂಕವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದು ದೇಹದ ಚಯಾಪಚಯವನ್ನು ಸುಧಾರಿಸಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದೆ ಆಗಲಿದೆ.

ಶೀತ ಅಥವಾ ನೆಗಡಿ ಆಗಿದ್ದರೆ ಬಿಸಿನೀರಿನ ಉಗಿಯಲ್ಲಿ ಮುಖವನ್ನಿಟ್ಟು ಉಸಿರಾಡುವುದರಿಂದ ಮೂಗಿನಲ್ಲಿನ ಸಮಸ್ಯೆ ದೂರವಾಗುತ್ತದೆ. ಶೀತಗಳು, ಸೀನುವುದು ಮತ್ತು ಅಲರ್ಜಿಯಂತ ಲಕ್ಷಣಗಳು ಮಾಯಾವಾಗುತ್ತಾವೆ.

ಬಿಸಿನೀರು ಬೆವರುವಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಮೂತ್ರ ವಿಸರ್ಜನೆಯನ್ನು ಉತ್ತೇಜಿಸುವ ಮೂಲಕ ದೇಹದಿಂದ ಕೆಟ್ಟ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ.

ಬಿಸಿನೀರನ್ನು ಕುಡಿಯುವುದರಿಂದ ಕರುಳಿನ ಚಲನೆಗೆ ಸಹಾಯವಾಗಿ ಹೊಟ್ಟೆಯ ಒಳಗೆ ಮಲ ಮತ್ತು ಮೂತ್ರ ವಿಸರ್ಜನೆ ಸರಾಗವಾಗಿ ಹೊರ ಬರಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸಲು ಮತ್ತು ಕ್ರಮಬದ್ಧತೆಯನ್ನು ಉತ್ತೇಜಿಸಲು ಬಿಸಿನೀರು ಕುಡಿಯುವುದು ಒಳ್ಳೆಯದು.

ಬಿಸಿನೀರನ್ನು ಕುಡಿಯುವುದರಿಂದ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ಸರಿಯಾಗಿ ಸಾಗುತ್ತದೆ.

ಸ್ನಾಯುಗಳ ಒತ್ತಡ ಮತ್ತು ಸ್ನಾಯುಗಳ ಸಡಿಲಿಕೆಯನ್ನು ಬಿಸಿನೀರು ನಿವಾರಿಸುತ್ತದೆ. ಸ್ನಾಯುಗಳು, ಸಂಧಿವಾತ ನೋವು ಮತ್ತು ಮಹಿಳೆಯರಲ್ಲಿ ಮುಟ್ಟಿನಂತವಕ್ಕೆ ಬಿಸಿನೀರು ಪರಿಹಾರ ನೀಡುತ್ತದೆ.

ಮನುಷ್ಯ ಬಿಸಿನೀರನ್ನು ಕುಡಿಯುವುದರಿಂದ ದೇಹದ ಚಯಾಪಚಯ ಸರಿಯಾಗಿ ನಡೆಯುತ್ತೆ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಸಂಯೋಜಿಸಿದಾಗ ತೂಕ ನಷ್ಟ ಪ್ರಯತ್ನಗಳಲ್ಲಿ ಹಾಟ್ ವಾಟರ್ ಮುಖ್ಯ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: RCB ದಾಖಲೆ ಮುರಿದ ಹೈದರಾಬಾದ್​​.. ಮುಂಬೈಗೆ ಬರೋಬ್ಬರಿ 278 ರನ್​ ಟಾರ್ಗೆಟ್

ರಾತ್ರಿಯಲ್ಲಿ ಬಿಸಿನೀರನ್ನು ಕುಡಿಯುವುದು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಿಸಿ ಅಥವಾ ತಣ್ಣನೆಯ ನೀರನ್ನು ಕುಡಿಯುವುದು, ನಿಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಹೈಡ್ರೇಟೆಡ್ ಆಗಿರಿಸುತ್ತದೆ. ಅದರಲ್ಲಿ ಬಿಸಿನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ಈ ಮೇಲೆ ತಿಳಿಸಿದಂತೆ ಇರುತ್ತದೆ. ಬಿಸಿನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವೇ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಸಿ ನೀರು ಕುಡಿಯೋದರಿಂದ ಯಾವೆಲ್ಲಾ ಕಾಯಿಲೆಗಳು ತಡೆಯಬಹುದು? ಇಲ್ಲಿವೆ ಹೆಲ್ತ್​​ ಟಿಪ್ಸ್​..!

https://newsfirstlive.com/wp-content/uploads/2024/03/HOT_WATER.jpg

Load More