newsfirstkannada.com

BIGG BOSS: ಬಿಗ್‌ಬಾಸ್‌ ಮನೆಯಲ್ಲಿ ನಮ್ರತಾ ಇಮೇಜ್ ಡ್ಯಾಮೇಜ್ ಆಗ್ತಿದ್ಯಾ? ಏನಾಯ್ತು ಗೊತ್ತಾ?

Share :

Published January 18, 2024 at 2:45pm

Update January 18, 2024 at 2:48pm

    ಸ್ನೇಹಿತರ ಮಾತಿನಿಂದ ಬಿಗ್‌ಬಾಸ್‌ ಮನೆಯಲ್ಲಿ ಕುಗ್ಗಿ ಹೋದ ನಮ್ರತಾ

    ಆ ಮಾತುಗಳನ್ನು ಕೇಳಿ ನಮ್ರತಾಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ

    ಬಿಗ್​ಬಾಸ್​ ರೂಲ್ಸ್ ಪ್ರಕಾರ ಇವೆಲ್ಲ ಮಾಡೋ ಹಾಗೇ ಇಲ್ವಲ್ಲಾ?

ಬಿಗ್​ಬಾಸ್​ ಸೀಸನ್‌ 10ರ ರಿಯಾಲಿಟಿ ಶೋನಲ್ಲಿ ವಾರದಿಂದ ವಾರಕ್ಕೆ ಹೊಸ, ಹೊಸ ಟ್ವಿಸ್ಟ್‌ಗಳನ್ನು ಕೊಡಲಾಗುತ್ತಿದೆ. ಈ ವಾರ ಎಲಿಮಿನೇಟ್ ಆದ ಸ್ಪರ್ಧಿಗಳನ್ನ ಮನೆಗೆ ವಾಪಸ್​ ಕರೆಸೋದ್ರ ಜೊತೆಗೆ ಟಾಸ್ಕ್​ ಕೂಡ ಆಯೋಜನೆ ಮಾಡಲಾಗಿತ್ತು. ಆದ್ರೆ ಎಲಿಮಿನೇಟ್ ಆದ ಸ್ಪರ್ಧಿಗಳು ಮನೆಗೆ ಬಂದಿರೋದು ಮನೆ ಒಳಗಿನ ಕೆಲ ಸ್ಪರ್ಧಿಗಳಿಗೆ ಇಷ್ಟವೇ ಆಗಿಲ್ಲ. ಅದರಲ್ಲೂ ಇತ್ತೀಚೆಗೆ ಖುಷಿಯಾಗಿದ್ದ ನಮ್ರತಾ ಅಂತೂ ನೀವೆಲ್ಲ ಮನೆ ಒಳಗೆ ಯಾಕೆ ಬಂದ್ರಿ ಅಂತ ಕಣ್ಣೀರು ಹಾಕೋದ್ರ ಜೊತೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್​ಬಾಸ್​ ಮನೆಗೆ ಬಂದ ಎಲಿಮಿನೇಟೆಡ್ ಸ್ಪರ್ಧಿಗಳು ಮನೆ ಒಳಗಿನ ಸ್ಪರ್ಧಿಗಳಿಗೆ ಟಿಪ್ಸ್ ಕೊಡ್ತಿದ್ದಾರೆ. ನೀನು ಆಟ ಹೀಗೆ ಆಡು ಹಾಗೇ ಆಡು. ಅವರ ಜೊತೆ ಸೇರಬೇಡ ಇವರ ಜೊತೆ ಸೇರಬೇಡ ಅಂತ ಕಿವಿಮಾತು ಹೇಳ್ತಿದ್ದಾರೆ. ಅಂತೆಯೇ ನಮ್ರತಾಗೆ ಕೂಡ ಅವರ ಸ್ನೇಹಿತರಾದ ಇಶಾನಿ, ರಕ್ಷಕ್, ಮೈಕಲ್, ಸ್ನೇಹಿತ್ ಕೂಡ ಕೆಲ ಮಾತುಗಳನ್ನು ಹೇಳಿದ್ದಾರೆ. ಆ ಮಾತುಗಳನ್ನು ಕೇಳಿ ನಮ್ರತಾಗೆ ಆಕಾಶವೇ ಕಳಚಿ ಬಿದ್ದಂತೆ ಆಗಿದೆ. ಅಕ್ಷರಶಃ ನಮ್ರತಾ ಕುಗ್ಗಿ ಹೋಗಿದ್ದಾರೆ.

ಇನ್ನು, ಇಶಾನಿ ಹಾಗೂ ಮೈಕಲ್ ಕೂಡ ನಮ್ರತಾ ಅವರಿಗೆ ಕಾರ್ತಿಕ್ ಜೊತೆ ಹೆಚ್ಚು ಸಮಯ ಕಳೆಯಬೇಡ ಅದು ಹೊರಗೆ ನೆಗೆಟಿವ್ ಆಗಿ ಕಾಣ್ತಿದೆ ಎಂದಿದ್ದಾರೆ. ಇದಾದ ನಂತರ ಸ್ನೇಹಿತ್ ಕೂಡ ಬಂದು ನಾನು ನಿಮಗೆ ಈಗ ಏನು ಹೇಳಲ್ಲ. ಹೊರಗೆ ಬಂದ ಮೇಲೆ ನಿಮಗೆ ಎಲ್ಲಾ ಅರ್ಥವಾಗುತ್ತೆ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೇ ಮಾತಾಡಿದ್ದಾರೆ. ಇಷ್ಟೇ ಆದ್ರೆ ಪರವಾಗಿಲ್ಲ. ನಿನಗಾಗಿ ನಾನು ಹೊರಗೆ ಫೈಟ್ ಮಾಡ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ. ಈ ಮಾತನ್ನೆಲ್ಲ ಕೇಳಿದ ನಮ್ರತಾ ಕಂಪ್ಲೀಟ್ ಬ್ರೇಕ್ ಡೌನ್ ಆಗಿದ್ದಾರೆ.

ಇದನ್ನೂ ಓದಿ: BBK10: ಕೊನೆಗೂ ಕಿಚ್ಚ ಸುದೀಪ್ ಕ್ಷಮೆ ಕೇಳಿದ ರಕ್ಷಕ್‌ ಬುಲೆಟ್‌; ಏನಿದು ಕಿರಿಕ್‌? ಅಸಲಿಗೆ ಆಗಿದ್ದೇನು?

ನಾನು ಅಂಥ ತಪ್ಪು ಏನು ಮಾಡಿದೆ.. ಹೊರಗೆ ನನ್ನ ಕ್ಯಾರೆಕ್ಟರ್ ಬಗ್ಗೆ ನೆಗೆಟಿವ್ ಆಗಿದ್ಯಾ ಎಂದು ಗಳಗಳನೆ ಅತ್ತಿದ್ದಾರೆ. ಅಷ್ಟೇ ಅಲ್ಲದೇ ಕಾರ್ತಿಕ್​ಗೆ ಹೊರಗೆ ಗರ್ಲ್​ ಫ್ರೆಂಡ್​ ಇದ್ದಾಳೆ ಹೀಗಿರುವಾಗ ನಾನ್ಯಾಕೆ ಅವರಿಗೆ ಬೀಳಲಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನುಳಿದಿರುವುದು ಎರಡೇ ವಾರ ಇಂಥ ಸಮಯದಲ್ಲಿ ಈ ಹೈಡ್ರಾಮಾದ ಅವಶ್ಯಕತೆ ಇತ್ತಾ? ಸ್ಪರ್ಧಿಗಳು ಹೇಗೋ ತಮಗೆ ತೋಚಿದ್ದು ಮಾಡುತ್ತಾ ಬಂದಿದ್ರು. ಈಗ ಅವರ ಆಟದ ಶೈಲಿ, ಅವರ ಬಿಹೇವಿಯರ್ ಎಲ್ಲವೂ ಬದಲಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಆದ್ರೆ ವೀಕ್ಷಕರಲ್ಲಿ ಸದ್ಯ ಮೂಡಿರೋ ಬಹುದೊಡ್ಡ ಅನುಮಾನ ಏನಂದ್ರೆ ಮನೆಗೆ ಬಂದ ಅತಿಥಿಗಳು ಸ್ಪರ್ಧಿಗಳಿಗೆ ಇವೆಲ್ಲ ಹೇಳಬೇಕಿತ್ತಾ? ಬಿಗ್​ಬಾಸ್​ ರೂಲ್ಸ್ ಪ್ರಕಾರ ಇವೆಲ್ಲ ಮಾಡೋ ಹಾಗೇ ಇಲ್ವಲ್ಲಾ? ಈ ಸೀಸನ್​ನಲ್ಲಿ ಮಾತ್ರ ಇದೆಲ್ಲ ಯಾಕೆ ಅಂತ ಪ್ರಶ್ನೆ ಮಾಡ್ತಿದ್ದಾರೆ. ಜೊತೆಗೆ ಸ್ಪರ್ಧಿಗಳ ಮನಸ್ಸು ಹಾಳು ಮಾಡುವ ಕೆಲಸ ಮಾಡಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಬಿಗ್‌ಬಾಸ್‌ ಮನೆಯಲ್ಲಿ ನಮ್ರತಾ ಇಮೇಜ್ ಡ್ಯಾಮೇಜ್ ಆಗ್ತಿದ್ಯಾ? ಏನಾಯ್ತು ಗೊತ್ತಾ?

https://newsfirstlive.com/wp-content/uploads/2024/01/namrataha-Snehit-Bigg-Boss.jpg

Load More