ಹಿರಿಯ ನಟಿ ಮೈ ಮೇಲೆ ಬಂದ ದೈವ; ದರ್ಶನ್​ಗೋಸ್ಕರ ಪೂಜೆ ಮಾಡಿಸಿದ್ರೆ ತಪ್ಪೇನು? ಏನಿದರ ಅಸಲಿಯತ್ತು?

author-image
admin
Updated On
ನಾಗದೇವರ ದರ್ಶನ.. ನೋಡ ನೋಡ್ತಿದ್ದಂಗೆ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಏನಿದರ ವಿಶೇಷ?
Advertisment
  • ಸಂಕಷ್ಟದಲ್ಲಿರೋ ಚಿತ್ರರಂಗಕ್ಕೆ ಮರುಚೈತನ್ಯ ನೀಡೋ ಪ್ರಯತ್ನ!
  • ದರ್ಶನ್‌ಗೋಸ್ಕರ ಪೂಜೆ ಮಾಡಿದ್ರೆ ತಪ್ಪೇನು; ಗಿರಿಜಾ ಲೋಕೇಶ್
  • ಕಲಾವಿದರ ಸಂಘದಲ್ಲಿ ನಾಗಾರಾಧನೆ, ಪೂಜೆ, ಹೋಮ, ಹವನ!

ಕಲಾವಿದರ ಸಂಘದಲ್ಲಿ ನಡೆದ ಹೋಮ-ಹವನದಲ್ಲಿ ಎಲ್ಲರೂ ನಾಗಾರಾಧನೆ ಮುಗಿಸಿ ನಾಗದೈವದ ನುಡಿಗಳನ್ನು ಕೇಳಿಸಿಕೊಳ್ತಿದ್ದ ಹೊತ್ತಲ್ಲಿ ಹಿರಿಯ ನಟಿ ಮೇಲೆ ದೈವದ ಆವಾಹನೆಯಾಗಿತ್ತು. ಈ ಸಂಬಂಧಪಟ್ಟಂತೆ ಖುದ್ದು ಹಿರಿಯ ನಟಿ ಜ್ಯೋತಿಯವರೇ ಅಚ್ಚರಿ ವಿಚಾರವೊಂದನ್ನು ಹೊರಗೆಡವಿದ್ದಾರೆ.

ಇದನ್ನೂ ಓದಿ: ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು? 

ಚಿತ್ರರಂಗದ ಒಳಿತಾಗಾಗಿ ಕಲಾವಿದರು ಅನುಭವಿಸುತ್ತಿರೋ ಕಷ್ಟವನ್ನು ನಿವಾರಿಸೋದಕ್ಕೆ ಕಲಾವಿದರ ಸಂಘ ಮಹಾಪೂಜೆಗಳನ್ನು ನಡೆಸಿದೆ. ನಾಗಾರಾಧನೆ ವೇಳೆ ಹಿರಿಯ ನಟಿ ಜ್ಯೋತಿಯವರ ಮೇಲೆ ದೈವದ ಆವಾಹನೆಯಾಗಿದ್ದು ಎಲ್ಲರನ್ನೂ ಆಶ್ಚರ್ಯಚಕಿತಗೊಳ್ಳುವಂತೆ ಮಾಡಿದೆ. ಯಾಕಂದ್ರೆ, ಜ್ಯೋತಿಯಂತಹ ಖ್ಯಾತ ಹಿರಿತೆರೆ ಹಾಗೂ ಕಿರುತೆರೆ ಕಲಾವಿದೆಯನ್ನ ಎಲ್ರೂ ಈ ರೀತಿ ನೋಡಿದ್ದು ಇದೇ ಮೊದಲು.

publive-image

ತಮ್ಮ ಮೇಲೆ ನಾಗದೈವದ ಆವಾಹನೆಯ ಬಗ್ಗೆ ಮಾತನಾಡಿರೋ ಹಿರಿಯ ನಟಿ ಜ್ಯೋತಿ ಕೆಲವೊಂದು ಅಚ್ಚರಿಯ ವಿಚಾರಗಳನ್ನು ಹೊರಗೆಡವಿದ್ದಾರೆ. ಈ ಹಿಂದೆಯೂ ಪೂಜೆ ಪುನಸ್ಕಾರ ಮಾಡೋ ಸಂದರ್ಭದಲ್ಲಿ ಅದರಲ್ಲೂ ದೇವಿ ಆರಾಧನೆ, ನಾಗ ಆರಾಧನೆ ಸಮಯದಲ್ಲಿ ದೇವರು ಮೈ ಮೇಲೆ ಬಂದಿತ್ತು. ಮುಂದೆ ಒಳ್ಳೆಯದಾಗುತ್ತೆ ಎಂಬುದರ ಸೂಚಕವಿದು ಅಂತಾ ಖುದ್ದು ಅವ್ರೇ ತಮ್ಮ ಮೇಲೆ ದೈವದ ಆವಾಹನೆ ಇದೇ ಮೊದಲಲ್ಲ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಒಗ್ಗಟ್ಟಿನ ಬಗ್ಗೆ ನಾಗದೇವರ ಪ್ರಶ್ನೆ.. ಕಲಾವಿದರ ಸಂಘದ ಹೋಮಕ್ಕೆ ಗೈರು ಯಾಕೆ? ರಾಕ್​ಲೈನ್ ವೆಂಕಟೇಶ್‌ ಹೇಳಿದ್ದೇನು?

ತಮಗೆ, ಮೊದಲಿಂದಲೂ ದೈವದ ಆವಾಹನೆ ಆಗುತ್ತಿತ್ತು. ಈಗಲೂ ಆಗಿದೆ. ಇದು ಒಳ್ಳೆಯ ಸೂಚನೆ' ಅಂತಾ ಹಿರಿಯ ನಟಿ ಜ್ಯೋತಿಯವರು ಹೇಳಿಕೊಂಡಿದ್ದಾರೆ. ಅಲ್ಲದೆ, ದೇವರ ಆವಾಹನೆ ವೇಳೆ ತಮಗಾಗುವ ಅನುಭವವನ್ನೂ ತೆರೆದಿಟ್ಟಿದ್ದಾರೆ.

publive-image

ಕನ್ನಡ ಚಿತ್ರರಂಗದ ಒಳಿತಾಗಿಗಾಗಿ ಈ ನಾಗಾರಾಧನೆ, ಪೂಜೆ, ಹೋಮ, ಹವನಗಳನ್ನು ನಡೆಸಲಾಗಿದೆ ಎಂದು ಕಲಾವಿದರ ಸಂಘ ಹೇಳಿಕೊಂಡಿದೆ. ಪೂಜೆ ಬಳಿಕ ನಾಗದೈವ ಸಲಹೆ, ಸೂಚನೆ ಎಚ್ಚರಿಕೆಗಳನ್ನು ನೀಡಿದೆ. ಅವುಗಳನ್ನು ಚಾಚೂತಪ್ಪದೆ ಪಾಲಿಸೋದಕ್ಕೆ ಕಲಾವಿದರ ಸಂಘ ಮುಂದಾಗಿದೆ. ಈ ಜಾಗದಲ್ಲಿ ನಿರಂತರ ಪೂಜೆ ನಡೆಯಬೇಕು, ದೀಪ ಬೆಳಗಬೇಕು ಎಂತಲೂ ನಾಗದೈವ ಹೇಳಿದೆ.

ಇದನ್ನೂ ಓದಿ:ನಾಗದರ್ಶನ.. ಕಲಾವಿದರ ಸಂಘದಲ್ಲಿ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಯಾರು ಈ ಜ್ಯೋತಿ? ಹಿನ್ನೆಲೆ ಏನು?

ಕಲಾವಿದರ ಸಂಘದಲ್ಲಿ ನಡೆದ ಪೂಜೆಯ ನೇತೃತ್ವ ವಹಿಸಿದ್ದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ನಾಗದೈವ ನೀಡಿರೋ ಎಚ್ಚರಿಕೆಗಳ ಬಗ್ಗೆ ಮಾತನಾಡಿದ್ದಾರೆ. ಕಷ್ಟ ಪರಿಹಾರಕ್ಕೆ ದೈವರ ಸೂಚನೆಗಳನ್ನು ಅನುಸರಿಸೋದಾಗಿ ಹೇಳಿದ್ದಾರೆ.

publive-image

ದರ್ಶನ್​ಗೋಸ್ಕರ ಪೂಜೆ ಮಾಡಿಸಿದ್ರೆ ತಪ್ಪೇನು?
ಈ ಪೂಜೆ, ಹೋಮ, ನಾಗಾರಾಧನೆ ಎಲ್ಲವೂ ದರ್ಶನ್‌ರಿಗಾಗಿ ಎಂಬ ಮಾತುಗಳು ಕೇಳಿಬಂದಿದ್ವು. ಇಷ್ಟು ದಿನ ಇಲ್ಲದ ಪೂಜೆ, ಹವನ ಈಗ ದಿಢೀರಂತ ಮಾಡ್ತಿರೋದಕ್ಕೆ ಕಾರಣ ದರ್ಶನ್‌ ಕೇಸ್ ಅಂತಲೂ ಚರ್ಚೆಗಳಾಗಿದ್ವು. ಈ ಸಂಬಂಧಪಟ್ಚಂತೆ ವಿರೋಧದ ಕೂಗುಗಳೂ ಕೇಳಿ ಬಂದಿದ್ವು. ಆದ್ರೆ, ಈ ಪೂಜೆ ದರ್ಶನ್‌ಗಾಗಿಯಲ್ಲ ಅಂತಾ ರಾಕ್‌ಲೈನ್ ವೆಂಕಟೇಶ್ ಅವರು ಸ್ಪಷ್ಟಪಡಿಸಿದ್ದಾರೆ.
ಒಂದೊಮ್ಮೆ ದರ್ಶನ್‌ ಅವರಿಗೋಸ್ಕರವೇ ಪೂಜೆ ಮಾಡಿಸಿದ್ರೆ ತಪ್ಪೇನು ಅಂತಾ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಅಚ್ಚರಿ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ದರ್ಶನ್ ಕಷ್ಟದಲ್ಲಿ ಸಿಲುಕಿಕೊಂಡಾಗ ಮಾಡ್ಬೇಕಲ್ವಾ ಎಂದು ಹೇಳೋ ಮೂಲಕ ಹೋಮ, ಪೂಜೆ ನಡೆದಿದ್ದು ದರ್ಶನ್‌ಗೋಸ್ಕರವಾ ಎಂಬ ಚರ್ಚೆ ಮತ್ತೆ ಶುರುವಾಗುವಂತೆ ಮಾಡಿದ್ದಾರೆ.

publive-image

ಕಲಾವಿದರ ಸಂಘದಲ್ಲಿ ನಡೆದಿರೋ ಈ ಪೂಜೆ, ಹೋಮದಿಂದಾಗಿ ಎಲ್ಲರೂ ಒಟ್ಟಿಗೆ ಸೇರುವಂತಾಗಿದೆ ಅಂತಾ ಚಿತ್ರರಂಗದ ಅನೇಕರು ಮಾತಾಡಿಕೊಳ್ತಿದ್ದಾರೆ. ಚಿತ್ರರಂಗದಲ್ಲಿ ಈಗ ಒಗ್ಗಟ್ಟಿನ ಕೊರತೆಯಿದ್ದು. ಈ ಪೂಜೆ, ಹೋಮ, ನಾಗಾರಾಧನೆಗಳಿಂದ ಒಗ್ಗಟ್ಟು ಮೂಡುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನನ್ನ ಕೋಪಕ್ಕೆ ಬಲಿ ಆಗ್ಬೇಡಿ.. ಕಲಾವಿದರ ಸಂಘದಲ್ಲಿ ದೈವ ನಾಗದರ್ಶನದ ಪ್ರಶ್ನೆ; ಅಸಲಿಗೆ ಆಗಿದ್ದೇನು?

ಹೀಗೆ.. ಸಮಸ್ಯೆಗಳು, ಸಂಘರ್ಷಗಳು, ಸಂಕಷ್ಟಗಳು ಚಿತ್ರರಂಗವನ್ನು ಆಕ್ರಮಿಸಿಕೊಂಡಿರೋದನ್ನು ಪ್ರತಿಯೊಬ್ಬ ಕಲಾವಿದರು ಒಪ್ಪಿಕೊಳ್ತಾರೆ. ಯಾವುದೇ ಸಮಸ್ಯೆಯಿದ್ದರೂ ಅದನ್ನು ಪರಿಹರಿಸಿಕೊಳ್ಳೋಕೆ ದೇವರ ಅಭಯ ಬೇಕು ಎಂಬ ಕಾರಣಕ್ಕೆ ಈ ಪೂಜೆ ನಡೆಸಿದ್ದಾರೆ. ನಾಗದೈವ ಕಲಾವಿದರಿಗೆ ಸೂಚನೆ, ಸಲಹೆ ನೀಡೋ ಮೂಲಕ ಶುಭವಾಗುವಂತೆ ದೈವನಿರ್ಣಯ ನೀಡಿದೆ.

publive-image

ಕಲಾವಿದರ ಸಂಘ ಬಹುಸಮಯದ ಬಳಿಕ ಇಂಡಸ್ಟ್ರಿಯಲ್ಲಿ ಆಗ್ತಿರೋ ಸಮಸ್ಯೆಗಳ ಪರಿಹಾರಕ್ಕೆ ಪೂಜೆಯ ಮೊರೆ ಹೋಗಿದೆ. ಸಂಕಷ್ಟದಲ್ಲಿರೋ ಚಿತ್ರರಂಗಕ್ಕೆ ಮರುಚೈತನ್ಯ ನೀಡೋದು ಇವರೆಲ್ಲರ ಗುರಿಯಾಗಿದೆ. ಆದ್ರೆ.. ಪೂಜೆ, ಹೋಮ, ಹವನದ ಜೊತೆಯಲ್ಲಿ ಮುಂದಿನ ದಾರಿಯ ಬಗ್ಗೆ ಚಾಣಾಕ್ಷ ಹೆಜ್ಜೆಗಳನ್ನು ಇಡಬೇಕು ಎಂಬ ಅಭಿಪ್ರಾಯಗಳೂ ಕೇಳಿಬರ್ತಿವೆ.

ಚಿತ್ರರಂಗದ ಒಳಿತಿಗಾಗಿ ಕಲಾವಿದರು ಈಗಲಾದ್ರೂ ದಾರಿಗಳನ್ನು ಹುಡುಕುತ್ತಿರೋದು ಖುಷಿ ವಿಚಾರ. ದೈವಶಕ್ತಿಯ ಮೊರೆ ಹೋಗಿರೋ ಕಲಾವಿದರ ಸಂಘ.. ಪರಸ್ಪರ ಕೂತು ಚರ್ಚಿಸಿ ಉತ್ತಮ ಹೆಜ್ಜೆಗಳನ್ನು ಇಡಲಿ ಎಂಬ ಮಾತುಗಳು ಕೇಳಿಬರ್ತಿವೆ. ಚಿತ್ರರಂಗದ ಮೆರುಗು ಮತ್ತೆ ಮರುಕಳಿಸಲಿ ಅನ್ನೋದು ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment