2008ರಲ್ಲಿ ಭಾರತದ ಮೊದಲ ಚಂದ್ರಯಾನ ಉಡಾವಣೆ
Chandrayan-2ನಲ್ಲಿ ಲ್ಯಾಂಡರ್ ಜೊತೆಗೆ ಸಂಪರ್ಕ ಕಡಿತವಾಯಿತು
ಚಂದ್ರಯಾನ-1 ಉಡಾವಣೆಯ ಹಿನ್ನೋಟ ಹೀಗಿದೆ..
ಚಂದ್ರಯಾನ-3 ನೌಕೆ ಉಡಾವಣೆಗೆ ಕ್ಷಣಗಣನೆ. ಇಂದು ಮಧ್ಯಾಹ್ನ 02:35ಕ್ಕೆ ಸರಿಯಾಗಿ ಚಂದ್ರಯಾನ-3 ಉಡಾವಣೆಯಾಗಲಿದ್ದು, ಐತಿಹಾಸಿಕ ಸಾಧನೆಗೆ ಭಾರತ ಸಾಕ್ಷಿಯಾಗಲಿದೆ. ಅಂದಹಾಗೆಯೇ ಚಂದ್ರಯಾನ-1 ಮತ್ತು ಚಂದ್ರಯಾನ -2 ಉಡಾವಣೆ ಬಳಿಕ ಹೆಚ್ಚಿನ ಗಮನಹರಿಸಿಕೊಂಡು ಚಂದ್ರಯಾನ -3 ನೌಕೆ ಸಿದ್ಧಪಡಿಸಲಾಗಿದೆ. ಕೆಲವೇ ಹೊತ್ತಿನಲ್ಲಿ ಚಂದ್ರನತ್ತ ಭಾರತದ ಕನಸಿನ ನೌಕೆ ಚಿಮ್ಮಲಿದೆ.
ಚಂದ್ರಯಾನ-1 ಉಡಾವಣೆಯ ಹಿನ್ನೋಟ ಹೀಗಿದೆ..
2008ರಲ್ಲಿ ಭಾರತದ ಮೊದಲ ಚಂದ್ರಯಾನ ಉಡಾವಣೆ ಮಾಡಿತ್ತು. ಆಗಿನ ಚಂದ್ರಯಾನದಲ್ಲಿ ಆರ್ಬಿಟರ್ ಮಾತ್ರ ಒಳಗೊಂಡಿತ್ತು. 2008ರ ಮೊದಲ ಚಂದ್ರಯಾನ ಸಾಕಷ್ಟು ಯಶಸ್ಸು ಸಾಧಿಸಿತ್ತು.
ಆಗ ಚಂದ್ರನ ಮೇಲೆ ನೀರಿನ ಗಡ್ಡೆ, ಜಲ ಮೂಲಗಳನ್ನು ಪತ್ತೆ ಮಾಡಿತ್ತು.
ಚಂದ್ರಯಾನ-2 ನೌಕೆಯ ಹಿನ್ನೋಟ..
2019ರಲ್ಲಿ ಭಾರತದ ಎರಡನೇ ಚಂದ್ರಯಾನ-2 ಉಡಾವಣೆ ಮಾಡಿತ್ತು. ಆರ್ಬಿಟರ್, ಲ್ಯಾಂಡರ್, ರೋವರ್ ಸಹಿತ ಚಂದ್ರನತ್ತ ಉಡಾವಣೆ ಮಾಡಲಾಗಿತ್ತು. ಆದರೆ ಇಳಿಯುವಾಗ ಇಸ್ರೋ, ಲ್ಯಾಂಡರ್ ಜೊತೆಗೆ ಸಂಪರ್ಕ ಕಡಿತವಾಯಿತು.
ಇದರಿಂದಾಗಿ 2019ರ ಚಂದ್ರಯಾನ-2 ಭಾಗಶಃ ವೈಫಲ್ಯ ಕಂಡಿತು. ಆದರೆ ಆರ್ಬಿಟರ್ ಮಾತ್ರ ಚಂದ್ರನ ಮೇಲ್ಮೈನಿಂದ ಡಾಟಾ ಕಳಿಸಿತ್ತು.
ಭಾರತದ ಕನಸು ನನಸಾಗುವ ಸಮಯ
ಚಂದ್ರಯಾನ 2 ವೈಫಲ್ಯದ ಬಳಿಕ ಚಂದ್ರಯಾನ-3 ನೌಕೆ ಹಾರಲು ಸಿದ್ದವಾಗಿದೆ. ಒಂದು ವೇಲೆ ಇದು ಯಶಸ್ವಿಯಾದರೆ, ಭಾರತ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಲಿದೆ. ಮಾತ್ರವಲ್ಲದೆ, ಚಂದ್ರನಲ್ಲಿ ಲ್ಯಾಂಡರ್ ಇಳಿಸಿದ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
2ನೇ ವೈಫಲ್ಯದಿಂದ ಎಚ್ಚೆತ್ತುಕೊಂಡ ಭಾರತ ವಿಜ್ಞಾನಿಗಳು ಚಂದ್ರಯಾನ-3ಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದಾರೆ. ಹೀಗಾಗಿ ಸೌತ್ ಪೋಲ್ನಲ್ಲಿ ಸಂಶೋಧನೆ ಮಾಡುವ ಗುರಿಯನ್ನು ಭಾರತಹೊಂದಿದೆ.
ಬಹಳಷ್ಟು ದೇಶ ಸೌತ್ ಪೋಲ್ನಲ್ಲಿ ಲ್ಯಾಂಡರ್ ಇಳಿಸಲು ಯತ್ನ ನಡೆಸಿತ್ತು. ಆದರೆ ದಕ್ಷಿಣ ಧ್ರುವ ಕಠಿಣವಾದ, ಕನಿಷ್ಠ ಉಷ್ಣಾಂಶ ಇರುವ ಪ್ರದೇಶವಾಗಿದೆ. ಯಾವುದೇ ದೇಶ ಕೂಡ ಇದುವರೆಗೂ ಯಶಸ್ವಿಯಾಗಿಲ್ಲ. ಹೀಗಾಗಿ ಭಾರತದ ಚಂದ್ರಯಾನ-3 ನೌಕೆಯ ಬಗ್ಗೆ ಭಾರೀ ಕುತೂಹಲ ಕೆರಳಿದೆ.
ಲಾಂಚ್ ವೆಹಿಕಲ್ ಮಾರ್ಕ್-111
ಚಂದ್ರಯಾನಕ್ಕೆ ಆಂಧ್ರಪ್ರದೇಶದಿಂದ ಭಾರತದ ಮೂರನೇ ನೌಕೆ ಹೊರಡಲು ಸಜ್ಜಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ಮಾಡಲಿದ್ದಾರೆ. ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲಿದ್ದಾರೆ. ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ