/newsfirstlive-kannada/media/post_attachments/wp-content/uploads/2024/05/prajwal3.jpg)
ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಬೆಳಕಿಗೆ ಬಂದು ಬರೋಬ್ಬರಿ ಒಂದು ತಿಂಗಳ ಕಳೆದ ನಂತರ ಪ್ರಜ್ವಲ್ ರೇವಣ್ಣರ ಬಂಧನವಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ 34 ದಿನಗಳ ಬಳಿಕ ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆಯೇ SIT ಮಹಿಳಾ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಹಾಸನದಲ್ಲಿ ಪೆನ್ಡ್ರೈವ್ ಹಂಚಿಕೆಯಿಂದ ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗುವವರೆಗೆ ಏನೆಲ್ಲಾ ಬೆಳವಣಿಗೆಗಳು ನಡೆದವು ಅನ್ನೋ ವಿವರ ಇಲ್ಲಿದೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಅರೆಸ್ಟ್.. ಅವರ ಇಂದಿನ ರಾಶಿ ಭವಿಷ್ಯ ಹೇಗಿದೆ?
- ಏಪ್ರಿಲ್ 21ರ ಸಂಜೆ ಹಾಸನದಲ್ಲಿ ಪೆನ್ಡ್ರೈವ್ ಹಂಚಿಕೆ
- ಏಪ್ರಿಲ್ 22ರಂದು ಕೆಲ ವಿಡಿಯೋಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಟ
- ಏಪ್ರಿಲ್ 23ರಂದು ಮತ್ತಷ್ಟು ವಿಡಿಯೋಗಳು ಎಲ್ಲೆಡೆ ಶೇರ್ ಆಗಿವೆ
- ಏಪ್ರಿಲ್ 23ರ ಸಂಜೆ ಹಾಸನ ಸಿಇಎನ್ ಪೊಲೀಸ್ ಠಾಣೆಗೆ ದೂರು
- ನವೀನ್ ಗೌಡ ಸೇರಿ ಹಲವರ ವಿರುದ್ಧ ವಿಡಿಯೋ ಹಂಚಿಕೆ ವಿಚಾರವಾಗಿ ದೂರು ದಾಖಲು
- ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಮತದಾನ ಮಾಡಿ ಕ್ಯಾಮೆರಾ ಮುಂದೆ ಬಂದಿದ್ದ ಪ್ರಜ್ವಲ್ ರೇವಣ್ಣ
- ಏಪ್ರಿಲ್ 26ರ ಸಂಜೆ ಕೆ ಆರ್ ನಗರ ಹತ್ತಿರದ ಸಂಬಂಧಿ ಸಾವಿಗೆ ಹೋಗಿ ವಾಪಸ್
- ಏಪ್ರಿಲ್ 27 ಬೆಂಗಳೂರಿನಿಂದ ಜರ್ಮನಿಗೆ ತೆರಳಿದ್ದ ಪ್ರಜ್ವಲ್ ರೇವಣ್ಣ
- ಏಪ್ರಿಲ್ 27ರ ಸಂಜೆ ಅಶ್ಲೀಲ ವಿಡಿಯೋ ಹಾಗೂ ಪೆನ್ಡ್ರೈವ್ ತನಿಖೆಗೆ SIT ರಚನೆ
- ಸಿಎಂ ಸಿದ್ದರಾಮಯ್ಯ ಅವರಿಂದ ಎಸ್ಐಟಿ ರಚನೆಗೆ ಆದೇಶ ಸೂಚನೆ
- ಎಡಿಜಿಪಿ ಬಿಕೆ ಸಿಂಗ್, ಎಸ್ಪಿಗಳಾದ ಸೀಮಾ ಲಾಟ್ಕರ್ ಮತ್ತು ಸುಮನಾ ಡಿ ಪೆನ್ನೆಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ
- ಏಪ್ರಿಲ್ 28ರಂದು ಸಂತ್ರಸ್ತೆಯಿಂದ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮಾಜಿ ಸಚಿವ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಕೇಸ್ ದಾಖಲು
- ಸಂತ್ರಸ್ತೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ ಆರೋಪ ಉಲ್ಲೇಖ
- ಹೊಳೆನರಸೀಪುರ ಟೌನ್ ಠಾಣೆಯಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಎಫ್ಐಆರ್ ದಾಖಲು
- ಏಪ್ರಿಲ್ 28 ಹೊಳೆನರಸೀಪುರ ಪ್ರಕರಣ ಸಂಬಂಧ ಎಸ್ಐಟಿಗೆ ಪಡೆದು ತನಿಖೆ
- ಏಪ್ರಿಲ್ 29ರಂದು ಮಹಿಳೆ ವಿಚಾರಣೆ ನಡೆಸಿ, ಕೋರ್ಟ್ನಲ್ಲಿ 164 ಹೇಳಿಕೆ ದಾಖಲು
- ಏಪ್ರಿಲ್ 30ರಂದು ಪ್ರಜ್ವಲ್ ರೇವಣ್ಣಗೆ 24 ಗಂಟೆಯೊಳಗೆ ಎಸ್ಐಟಿ ಮುಂದೆ ಹಾಜರಾಗಲು ನೋಟಿಸ್
- ಮೇ 1ರಂದು ಎಸ್ಐಟಿಗೆ ಪ್ರಜ್ವಲ್ ರೇವಣ್ಣರಿಂದ ವಕೀಲರ ಮೂಲಕ ಒಂದು ವಾರ ಕಾಲಾವಕಾಶ ಕೋರಿ ಪತ್ರ
ಆದರೆ, ಕಾಲಾವಕಾಶ ನೀಡದೆ ಕೂಡಲೇ ಹಾಜಾರುಗುವಂತೆ ಎಸ್ಐಟಿ ಸೂಚನೆ - ಮೇ 1ರಂದು ಪ್ರಜ್ವಲ್ ರೇವಣ್ಣ ವಿರುದ್ದ ಮತ್ತೊಂದು ಕೇಸ್ ದಾಖಲು
- ಮೇ 2ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದ ಎಸ್ಐಟಿ
- ಮೇ 4ರಂದು ಪ್ರಜ್ವಲ್ ರೇವಣ್ಣ ಪತ್ತೆಗಾಗಿ ಇಂಟರ್ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ ಎಸ್ಐಟಿ
- ಮೇ 7ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿಯಲ್ಲಿ ಮತ್ತೊಂದು ಅತ್ಯಾಚಾರ ಕೇಸ್
- ಮೇ 18ರಂದು ನ್ಯಾಯಾಲಯದ ಮೂಲಕ ಅರೆಸ್ಟ್ ವಾರಂಟ್ ಪಡೆದ ಎಸ್ಐಟಿ
- ಮೇ 24ರಂದು ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸಲು ಕೇಂದ್ರ ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ
- ಮೇ 25ರಂದು ಎಂಇಎಯಿಂದ ಪಾಸ್ಫೋರ್ಟ್ ರದ್ದು ಪ್ರಕ್ರಿಯೆ ಪರಿಶೀಲನೆ ಬಳಿಕ ಪ್ರಜ್ವಲ್ ರೇವಣ್ಣಗೆ ಷೋಕಾಸ್ ನೋಟಿಸ್
- ಮೇ 27ರಂದು ವಿದೇಶದಿಂದ ಪ್ರಜ್ವಲ್ ರೇವಣ್ಣ ವಿಡಿಯೋ ರಿಲೀಸ್
- ಮೇ 31ರಂದು ಬೆಂಗಳೂರಿಗೆ ವಾಪಸ್ ಆಗೋದಾಗಿ ಪ್ರಜ್ವಲ್ ಮಾಹಿತಿ
- ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗೋದಾಗಿ ವಿಡಿಯೋ ಬಿಡುಗಡೆ
- ಮೇ 31ಕ್ಕೆ ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಜ್ವಲ್ ರೇವಣ್ಣ
- ಲುಕ್ ಔಟ್ ನೋಟಿಸ್, ವಾರೆಂಟ್ ಇದ್ದರಿಂದ ಏರ್ಪೋರ್ಟ್ನಲ್ಲೇ ಪ್ರಜ್ವಲ್ ರೇವಣ್ಣ ಅರೆಸ್ಟ್
- ಸಿಐಡಿಯಲ್ಲಿ ಎಸ್ಐಟಿ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ, ಹಾಗೂ ಎರಡು ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ವಿಚಾರಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ