newsfirstkannada.com

ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್​​ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?

Share :

Published June 17, 2024 at 11:06am

    ಬುದ್ಧಿವಂತಿಕೆಯಿಂದ ಫೋನ್ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ

    ವೃದ್ಧರು, ವಯಸ್ಕರು, ಮಕ್ಕಳು ಎಷ್ಟು ಗಂಟೆ ಫೋನ್ ಬಳಸಬಹುದು?

    ಅತಿಯಾದ ಫೋನ್ ಬಳಕೆಯಿಂದ ಏನೆಲ್ಲ ತೊಂದರೆ ಆಗುತ್ತದೆ..?

ನಮ್ಮ ಬದುಕಿನಲ್ಲಿ ಫೋನ್ ವಿಶೇಷ ಪಾತ್ರವನ್ನು ನಿಭಾಯಿಸುತ್ತದೆ.. ಇಡೀ ದಿನ ಫೋನ್‌ನಲ್ಲಿ ಬ್ಯುಸಿಯಾಗಿರುತ್ತೇವೆ.. ಒಂದೇ ಒಂದು ನಿಮಿಷವೂ ಫೋನ್ ಕೈಯಲ್ಲಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಚಡಪಡಿಸುತ್ತೇವೆ.. ಇದು ನಮ್ಮ ದಿನಚರಿಯ ಒಂದು ದೊಡ್ಡ ಭಾಗ.. ಫೋನ್ ಇಲ್ಲದೇ ಬದುಕುವುದೇ ಕಷ್ಟಕರ.. ಈ ಅತಿಯಾದ ಫೋನ್ ಬಳಕೆಯು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಕ್ಕಳು, ಹದಿಹರೆಯದವರಿಗೆ..
ಮಕ್ಕಳು ಮತ್ತು ಹದಿಹರೆಯದವರು ದಿನಕ್ಕೆ 2 ಗಂಟೆಗಳಿಗಿಂತ ಹೆಚ್ಚು ಕಾಲ ಫೋನ್ ಬಳಸಬಾರದು ಎಂದು ತಜ್ಞರು ಹೇಳುತ್ತಾರೆ. ಫೋನ್​ಗಳ ಬಳಕೆಯಿಂದ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಿದ್ರೆಯನ್ನು ಹಾಳುಮಾಡಬಹುದು ಎನ್ನುತ್ತಾರೆ. ಜೊತೆಗೆ ಅತಿಯಾದ ಫೋನ್ ಬಳಕೆ ದೈಹಿಕ ಚಟುವಟಿಕೆಗಳಿಂದ ದೂರವಿಡುತ್ತದೆ. ಇದು ದೈಹಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಪರಿಣಾಮ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತೆ ಅನ್ನೋದು ತಜ್ಞರ ವಾದ.

ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ

ವಯಸ್ಕರಿಗೆ..!
ದಿನಕ್ಕೆ 3 ರಿಂದ 4 ಗಂಟೆಗಳ ಕಾಲ ಫೋನ್ ಬಳಸುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಅಗತ್ಯ ಮತ್ತು ಅನುಗುಣವಾಗಿ ಫೋನ್ ಬಳಕೆ ಮಾಡಬೇಕು. ನಿಮ್ಮ ಕೆಲಸವು ಫೋನ್ ಅಥವಾ ಕಂಪ್ಯೂಟರ್‌ನ ಮೇಲೆ ಅವಲಂಬಿತವಾಗಿದ್ದರೆ ಮಧ್ಯದಲ್ಲಿ ವಿರಾಮ ತೆಗೆದುಕೊಳ್ಳಬೇಕು. ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು. ಅತಿಯಾದ ಫೋನ್ ಬಳಕೆ ಕಣ್ಣಿನ ಆಯಾಸ, ತಲೆನೋವು ಮತ್ತು ಒತ್ತಡಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಇದನ್ನೂ ಓದಿ:ದರ್ಶನ್​ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?

ವಯಸ್ಸಾದವರಿಗೆ..
ವಯಸ್ಸಾದವರು ಸೀಮಿತ ಅವಧಿಗೆ ಫೋನ್‌ಗಳನ್ನು ಬಳಸಬೇಕು. ವಿಶೇಷವಾಗಿ ಅವರಿಗೆ ಕಣ್ಣು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಫೋನ್ ಬಳಸೋದನ್ನೇ ಕಡಿಮೆ ಮಾಡಬೇಕು. ದಿನಕ್ಕೆ 1 ರಿಂದ 2 ಗಂಟೆಗಳ ಕಾಲ ಫೋನ್ ಬಳಸಿದರೆ ಪರವಾಗಿಲ್ಲವಂತೆ.

ಅತಿಯಾದ ಫೋನ್ ಬಳಕೆಯ ಅನಾನುಕೂಲಗಳು..!

  • ಕಣ್ಣಿನ ಆಯಾಸ ಮತ್ತು ನೋವು
  • ನಿದ್ರೆಯ ಕೊರತೆ
  • ಮಾನಸಿಕ ಒತ್ತಡ
  • ಸಾಮಾಜಿಕ ಜೀವನದ ಕೊರತೆ
  • ದೈಹಿಕ ಚಟುವಟಿಕೆಯ ಕೊರತೆ

ಇದನ್ನೂ ಓದಿ:‘ಸಿಟ್ಟು ಬಂದ್ರೆ ಏನ್ಮಾಡ್ತಾಳೆ ಅಂತಾ ಅವಳಿಗೂ ಗೊತ್ತಿರಲ್ಲ..’ ಪವಿತ್ರ ಗೌಡಳ ಇನ್ನೊಂದು ಮುಖ ಅನಾವರಣ

ನೀವು ಮಾಡಬೇಕಾಗಿರೋದು ಏನು?

  1. ಫೋನ್ ಬಳಕೆಗೆ ನೀವು ಒಂದು ಟೈಂ ಹಾಕಿಕೊಳ್ಳಿ. ದಿನಕ್ಕೆ ಎಷ್ಟು ದಿನ ಫೋನ್ ಬಳಸಬೇಕು ಅನ್ನೋದನ್ನು ನಿರ್ಧರಿಸಿ ಅದರಂತೆ ನಡೆದುಕೊಳ್ಳಿ
  2. ಪ್ರತಿ 20 ರಿಂದ 30 ನಿಮಿಷಗಳ ನಂತರ 5 ರಿಂದ 10 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳಿ. ಇದು ಕಣ್ಣುಗಳಿಗೆ ಮಾತ್ರವಲ್ಲ ಮನಸ್ಸಿಗೂ ವಿಶ್ರಾಂತಿ ನೀಡುತ್ತದೆ.
  3. ನೀಲಿ ಬೆಳಕನ್ನು ತಪ್ಪಿಸಿಕೊಳ್ಳಿ.. ಫೋನ್‌ಗಳಿಂದ ಬರುವ ನೀಲಿ ಬೆಳಕು ಕಣ್ಣುಗಳಿಗೆ ಹಾನಿಕಾರಕ.
  4. ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಿ.. ಯೋಗ, ನಡಿಗೆ ಅಥವಾ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಿಗಾಗಿ ಸಮಯ ಮೀಸಲಿಡಿ..
  5. ಫೋನ್ ಬುದ್ಧಿವಂತಿಕೆಯಿಂದ ಬಳಸಿ ಮತ್ತು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ.

ಇದನ್ನೂ ಓದಿ:ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾದ ಆರೋಪಿಯೂ ಅರೆಸ್ಟ್.. ಮತ್ತೊಬ್ಬ ದರ್ಶನ್ ಆಪ್ತ ಲಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್​​ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?

https://newsfirstlive.com/wp-content/uploads/2024/06/Mobile.jpg

Load More