newsfirstkannada.com

25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್‌ನಲ್ಲಿದ್ದ ಆರೋಪ.. ನಟಿ ತ್ರಿಷಾ ಕೊಟ್ಟ ರಿಯಾಕ್ಷನ್ ಏನು?

Share :

Published February 20, 2024 at 8:29pm

    ಜನರ ಗಮನ ಸೆಳೆಯಲು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರಾ?

    ಇದರ ವಿರುದ್ಧ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ

    ಅವಹೇಳನಕಾರಿ ಹೇಳಿಕೆಗೆ ತಮಿಳು ಚಿತ್ರರಂಗದಲ್ಲಿ ವ್ಯಾಪಕ ಖಂಡನೆ

ಚೆನ್ನೈ: 25 ಲಕ್ಷ ರೂಪಾಯಿಗೆ ನಟಿ ತ್ರಿಷಾ ಶಾಸಕರ ಜೊತೆ ರೆಸಾರ್ಟ್‌ಗೆ ಹೋಗಿದ್ದರು ಅಂತ ತಮ್ಮ ವಿರುದ್ಧ ನಾಲಿಗೆ ಹರಿಬಿಟ್ಟ ನಾಯಕನ ವಿರುದ್ಧ ನಟಿ ತ್ರಿಷಾ ಕೆಂಡಾಮಂಡಲರಾಗಿದ್ದಾರೆ. ಮಾಜಿ ಎಐಡಿಎಂಕೆ ನಾಯಕ ಎ.ವಿ ರಾಜು ಅವರ ವೈರಲ್ ವಿಡಿಯೋಗೆ ನಟಿ ತ್ರಿಷಾ ಅವರು ಪ್ರತಿಕ್ರಿಯೆ ನೀಡಿದ್ದು, ಕಾನೂನು ಕ್ರಮ ಕೈಗೊಳ್ಳುವ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಎ.ವಿ ರಾಜು ಅವರ ವೈರಲ್ ವಿಡಿಯೋ ಖಂಡಿಸಿರುವ ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಎ.ವಿ ರಾಜು ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದೇನೆ. ಇದು ನಿಜಕ್ಕೂ ಅಸಹ್ಯಕರವಾದದ್ದು. ಕೆಟ್ಟ ಮನುಷ್ಯರು ತಮ್ಮ ಕಡೆ ಜನರ ಗಮನ ಸೆಳೆಯಲು ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಇದರ ವಿರುದ್ಧ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಲೇ ಬೇಕಾಗಿದೆ. ಇನ್ನು ಮುಂದೆ ಈ ಮಾತುಗಳ ಬಗ್ಗೆ ನನ್ನ ಕಚೇರಿಯ ಕಾನೂನು ಘಟಕ ನೋಡಿಕೊಳ್ಳಲಿದೆ ಎಂದು ತ್ರಿಷಾ ಕಠಿಣ ಶಬ್ದಗಳಿಂದ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘25 ಲಕ್ಷಕ್ಕೆ ಶಾಸಕರ ಜೊತೆ ಮಲಗುತ್ತಿದ್ದ ನಟಿ ತ್ರಿಷಾ’- ತಮಿಳುನಾಡು ನಾಯಕನಿಂದ ವಿವಾದಾತ್ಮಕ ಹೇಳಿಕೆ

ತ್ರಿಷಾ ವಿರುದ್ಧ ನೀಡಿರೋ ಅವಹೇಳನಕಾರಿ ಹೇಳಿಕೆಗೆ ತಮಿಳು ಚಿತ್ರರಂಗದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ಹಲವರು ಕಲಾವಿದರ ಸಂಘಟನೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಬೇಕಾಬಿಟ್ಟಿಯಾಗಿ ಮಾತನಾಡುವ ನಾಯಕರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಬೇಕು ಎನ್ನುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್‌ನಲ್ಲಿದ್ದ ಆರೋಪ.. ನಟಿ ತ್ರಿಷಾ ಕೊಟ್ಟ ರಿಯಾಕ್ಷನ್ ಏನು?

https://newsfirstlive.com/wp-content/uploads/2023/11/trisha-1.jpg

Load More