/newsfirstlive-kannada/media/post_attachments/wp-content/uploads/2024/07/darshan61.jpg)
ವಾಲ್ಮೀಕಿ ನಿಗಮದ ಹಗರಣ ಹಾಗೂ ಮೈಸೂರಿನ ಮೂಡಾದಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣ ತೀವ್ರ ಸದ್ದು ಮಾಡ್ತಿದೆ. ಈ ನಡುವೆ ಸಿದ್ದರಾಮಯ್ಯ ಸರ್ಕಾರ ತನ್ನ ವಿರುದ್ಧದ ಆರೋಪಗಳನ್ನು ಮುಚ್ಚಿಹಾಕಲು ನಟ ದರ್ಶನ್ ಪ್ರಕರಣಕ್ಕೆ ಹೆಚ್ಚು ಒತ್ತು ನೀಡ್ತಿರೋ ಆರೋಪ ಕೇಳಿಬಂದಿದೆ. ಬಿಜೆಪಿ ನಾಯಕರ ಬೌನ್ಸರ್​ಗೆ ರಾಜ್ಯ ಸರ್ಕಾರ ತಿರುಗೇಟು ನೀಡುವ ಯತ್ನ ನಡೆಸಿದೆ.
/newsfirstlive-kannada/media/post_attachments/wp-content/uploads/2024/06/Siddaramaiah-On-Nandini-Milk-Price.jpg)
ಇದನ್ನೂ ಓದಿ:ದೊಡ್ಮನೆಯಿಂದ ಆಚೆ ಬಂದ ಅರ್ಮಾನ್ ಮಲಿಕ್ ​ಹೆಂಡತಿ; ಅಸಲಿ ಕಾರಣ ಬಿಚ್ಚಿಟ್ಟ ಪಾಯಲ್ ಮಲಿಕ್
ಗ್ಯಾರಂಟಿ ಹಳಿಗಳ ಮೇಲೆ ನಡೆಯುತ್ತಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ಜಾತಿಗೊಬ್ಬ ಡಿಸಿಎಂ ಹಾಗೂ ಸಿಎಂ ಹುದ್ದೆಗಾಗಿ ಜಟಾಪಟಿ ತಾರಕಕ್ಕೇರಿದೆ. ಈ ನಡುವೆ ವಾಲ್ಮೀಕಿ ನಿಗಮದ ಹಗರಣ ಹಾಗೂ ಮೈಸೂರಿನ ಮೂಡಾದಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಈ ಮಧ್ಯೆ ಸರ್ಕಾರ ತನ್ನ ತಪ್ಪುಗಳನ್ನು ಮರೆಮಾಚಲು ಜನರ ಗಮನ ಬೇರೆ ಕಡೆ ಸಳೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
/newsfirstlive-kannada/media/post_attachments/wp-content/uploads/2024/03/CT-Ravi-On-Congress.jpg)
ಸಿಎಂ ಸಿದ್ದರಾಮಯ್ಯ ಸರ್ಕಾರ ಹರ್ಷದ ಅನುಭವಿಸುವ ಹೊತ್ತಿಗೆ ಹಗರಣ ಉರುಳು ಬೆನ್ನುಬಿದ್ದಿದೆ. ವಾಲ್ಮೀಕಿ ಹಾಗೂ ಮೂಡಾ ಹಗರಣಗಳು ಸರ್ಕಾರದ ಮುಖಕ್ಕೆ ಮಸಿ ಬಳಿದಿವೆ. ಅದರಲ್ಲೂ ವಾಲ್ಮೀಕಿ ನಿಗಮದ ಹಗರಣ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಇದೇ ಹೊತ್ತಲ್ಲಿ ಹೊಸ ಬಾಂಬ್ ಸಿಡಿಸಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಸರ್ಕಾರ ತಮ್ಮ ವಿರುದ್ಧದ ಆರೋಪಗಳನ್ನು ಮರೆಮಾಚಲು ದರ್ಶನ್​ ಕೇಸ್​​​ಗೆ ಪ್ರಚಾರ ನೀಡಲಾಗ್ತಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ಕೇಸ್​ಗೆ ಕೊಡ್ತಿರೋ ಗಮನವನ್ನು ವಾಲ್ಮೀಕಿ ಹಗರಣಕ್ಕೆ ಯಾಕೆ ಕೊಡ್ತಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ.
ವಾಲ್ಮೀಕಿ ನಿಗಮ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದನ್ನ ಮುಚ್ಚಿಹಾಕಲು ಸಿಎಂ ಹಾಗೂ ಡಿಸಿಎಂ ರಾಜಕೀಯ ನಾಟಕ ಆಡುತ್ತಿದ್ದಾರೆ. ಮೈಸೂರು ಮುಡಾದಲ್ಲಿ ಬೇಲಿಯೇ ಎದ್ದು ಹೊಲ ಮೇದಾಂತಾಗಿದೆ. ಸಾವಿರಾರು ಕೋಟಿ ಬೆಲೆ ಬಾಳುವ ಮುಡಾ ಆಸ್ತಿ ಕಳ್ಳರ ಪಾಲಾಗಿದೆ. 69ನೇ ಇಸವಿಯಲ್ಲಿ ಭೂಮಿ ಕಳೆದುಕೊಂಡವರು ಇವತ್ತಿಗೆ ಜ್ಞಾನೋದಯವಾಗಿ ಅರ್ಜಿ ಕೊಟ್ಟಿದ್ದಾರಂತೆ. ಮುಡಾದವರು ಲಕ್ಷ ಲಕ್ಷ ಅಡಿಯನ್ನ ಬಿಟ್ಟು ಕೊಟ್ಟಿದ್ದಾರೆ. ಮುಡಾ ಲೋಟಿಯನ್ನ ನೋಡಿದರೇ ಚಾಲ್ಸ್ ಶೋಬರಾಜ್‌ನದ್ದೂ ಏನು ಹಗರಣ ಇಲ್ಲ ಅಂದುಕೊಳ್ಳುತ್ತಾರೆ.
ಸಿ.ಟಿ.ರವಿ, ಎಂಎಲ್​ಸಿ
ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರೋ ಗೃಹಸಚಿವ ಡಾ. ಜಿ ಪರಮೇಶ್ವರ್​ ಸರ್ಕಾರದ ಪ್ರತಿಯೊಂದು ಕೆಲಸಗಳು ನಡೀತಿವೆ, ಯಾವುದು ನಿಂತಿಲ್ಲ, ವಾಲ್ಮೀಕಿ ನಿಗಮದ ಹಗರಣ ತನಿಖೆ ನಡೀತಿದ್ದು ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ ಅಂತ ಮತ್ತದೇ ಮಾತನ್ನೇ ಮತ್ತೆ ಜಪಿಸಿದ್ದಾರೆ.
/newsfirstlive-kannada/media/post_attachments/wp-content/uploads/2023/12/G-Parameshwar.jpg)
ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐ ಕೂಡಾ ನಡೆಸ್ತಿದೆ. ನಮ್ಮವರೂ ತನಿಖೆ ಮಾಡ್ತಿದ್ದಾರೆ. ಆದ್ಯತೆ ವಿಚಾರದಲ್ಲಿ ಸಮಸ್ಯೆ ಆಗಿಲ್ಲ. ಅವರವರ ವ್ಯಾಖ್ಯಾನಗಳು ಅವು. ಅವರವರಲ್ಲೇ ಅವರ ಹೇಳಿಕೆಗಳು ವಿಭಿನ್ನವಾಗಿವೆ. ಬೊಮ್ಮಾಯಿ ಒಂದು ಹೇಳಿಕೆ ಕೊಟ್ಟರೆ, ಸಿ ಟಿ ರವಿ ಇನ್ನೊಂದು ಹೇಳಿಕೆ ಕೊಡ್ತಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ. ಅಭಿವೃದ್ಧಿ ಆಗ್ತಿಲ್ಲ ಬಿಜೆಪಿಯವ್ರು ಹೇಳ್ತಾರೆ. ಹೇಳೋದು ಅವರ ಕೆಲಸ. ಆದ್ರೆ ಸರ್ಕಾರ ಅಭಿವೃದ್ಧಿ ಮರೆತಿಲ್ಲ. ಜನರಿಗಾಗಿ ಏನೆಲ್ಲ ಮಾಡಬೇಕೋ ಎಲ್ಲ ಕೆಲಸ ಮಾಡ್ತಿದ್ದೇವೆ. ಗ್ಯಾರಂಟಿಗಳೂ ಮುಂದುವರೆದಿವೆ, ಯಾವುದೂ ನಿಂತಿಲ್ಲ.
ಗೃಹಸಚಿವ ಡಾ. ಜಿ ಪರಮೇಶ್ವರ್​
ಒಟ್ಟಾರೆ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಇರಿಸಿದ್ದ ವಾಲ್ಮೀಕಿ ನಿಗಮದ ಹಣ ಯಾರ ಖಜಾನೆ ಸೇರಿದೆ ಅನ್ನೋದ್ರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಿದೆ. ನಿಗಮದ ಹಣ ಮರಳಿ ನಿಗಮಕ್ಕೆ ಸೇರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us