/newsfirstlive-kannada/media/post_attachments/wp-content/uploads/2024/10/OFFICE-WORKING.jpg)
ಕೊರೊನಾ ಅವಧಿ ನಂತರ ವರ್ಕ್​ ಫ್ರಮ್ ಹೋಂ ಸಂಸ್ಕೃತಿ ಹೆಚ್ಚಾಗಿದೆ. ಜನರು ಒಂದೇ ಸ್ಥಳದಲ್ಲಿ ಗಂಟೆಗಟ್ಟಲೇ ಕೂತು ಕೆಲಸ ಮಾಡಿ ಕಚೇರಿಯ ದಿನವನ್ನು ಕಳೆಯುತ್ತಾರೆ. ಒಂದು ವೇಳೆ ನಿಮ್ಮ ಪರಿಸ್ಥಿತಿ ಕೂಡ ಅದೇ ಆಗಿದ್ದರೆ ಇಂದೇ ಜಾಗರೂಕರಾಗಿರಿ. ಇಲ್ಲದಿದ್ದರೆ ನೀವು ಕೂಡ ಡೆಡ್ ಬಡ್ ಸಿಂಡ್ರೋಮ್‌ಗೆ (DBS: Dead butt syndrome) ಬಲಿಯಾಗಬಹುದು!
ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸೊಂಟವು ಕೆಲಸ ಮಾಡುವುದನ್ನು ಮರೆತುಬಿಡುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡೆಡ್ ಬಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ:ಬ್ಲ್ಯೂ ಬೆರಿಽ, ನೆಲ್ಲೆಕಾಯಿ; ಚರ್ಮದ ಆರೋಗ್ಯಕ್ಕೆ ಇವೆರಡರಲ್ಲಿ ಯಾವುದು ಬೆಸ್ಟ್?
ಅಂದರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ದೀರ್ಘಕಾಲದವರೆಗೆ ನಿರಂತರವಾಗಿ ಕೆಲಸ ಮಾಡೋದು ಅಪಾಯಕಾರಿ. 45 ನಿಮಿಷಗಳಿಗಿಂತ ಹೆಚ್ಚು ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಡೇಂಜರ್. ಇದರಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಇವುಗಳಲ್ಲಿ ಡೆಡ್ ಬಟ್ ಸಿಂಡ್ರೋಮ್ ಕೂಡ ಒಂದು.
ಲಕ್ಷಣಗಳು ಏನೇನು..?
- ಬೆನ್ನು, ಮೊಣಕಾಲುಗಳಲ್ಲಿ ತೀವ್ರ ನೋವು
- ಹಿಪ್ ಸ್ಟ್ರೈನ್
- ಸೊಂಟದ ಕೆಳಗಿನ ಭಾಗದಲ್ಲಿ ಜುಮ್ಮೆನಿಸುವಿಕೆ
- ಸೊಂಟದ ಸುತ್ತಲೂ ಮರಗಟ್ಟುವಿಕೆ, ಸುಡುವಿಕೆ ಮತ್ತು ನೋವು
ಪರಿಹಾರ ಏನು?
- ಕಚೇರಿಯಲ್ಲಿ ಮೆಟ್ಟಿಲುಗಳನ್ನು ಬಳಸಿ, ಲಿಫ್ಟ್​ನಿಂದ ದೂರ ಇರಿ
- ಪ್ರತಿ 30-45 ನಿಮಿಷಗಳಿಗೊಮ್ಮೆ ಆಸನದಿಂದ ಎದ್ದು ನಿಂತು ಓಡಾಡಿ
- ಕಾಲು ಚಾಚಿ ಕುಳಿತುಕೊಳ್ಳುವುದು ಪ್ರಯೋಜನಕಾರಿಯಾಗಿದೆ
- ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ
- ಕಚೇರಿಯಲ್ಲಿ ಸಮಯ ಸಿಕ್ಕಾಗ ಆಗಾಗ ಸ್ವಲ್ಪ ನಡೆಯಿರಿ
ಇದನ್ನೂ ಓದಿ:ಆರ್​ಸಿಬಿಗೆ ಕಳೆದ ಬಾರಿಯಂತೆ ಮತ್ತೆ ಅದೇ ಪ್ರಶ್ನೆ ಎದುರಾಗಿದೆ; ಕೊಹ್ಲಿ ಮತ್ತು .. ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us