ಯಾವ್ಯಾವ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ ಸೂರ್ಯ ಗ್ರಹಣ? ಭಾರತದ ಮೇಲೆ ಬೀರೋ ಪ್ರಭಾವವೇನು?

author-image
Gopal Kulkarni
Updated On
ಯಾವ್ಯಾವ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ ಸೂರ್ಯ ಗ್ರಹಣ? ಭಾರತದ ಮೇಲೆ ಬೀರೋ ಪ್ರಭಾವವೇನು?
Advertisment
  • ವಿವಿಧ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಮೇಲೆ ಗ್ರಹಣ ಪ್ರಭಾವ?
  • ರಾಜ್ಯ ರಾಜಕಾರಣದ ಮೇಲೆಯೂ ಪರಿಣಾಮ ಬೀರುತ್ತಾ ಸೂರ್ಯ ಗ್ರಹಣ?
  • ಭಾರತದಲ್ಲಿ ಗ್ರಹಣ ಗೋಚರವಾಗದಿದ್ದರೂ ಅದರ ಪ್ರಭಾವ ಹೇಗಿರಲಿದೆ?

ಅಕ್ಟೋಬರ್ 2ನೇ ತಾರೀಖು ಜರುಗುತ್ತಿರೋ ಬೆಂಕಿ ಉಂಗುರ ಸೂರ್ಯ ಗ್ರಹಣದತ್ತ ಇಡೀ ಜಗತ್ತೇ ಕುತೂಹಲ ಮತ್ತು ಆತಂಕದಿಂದ ನೋಡ್ತಿದೆ. ಅದರಲ್ಲೂ, ಸೂರ್ಯನನ್ನು ದೇವರ ರೂಪದಲ್ಲಿ ಪೂಜಿಸೋ ಭಾರತೀಯರಂತೂ ಸೂರ್ಯಗ್ರಹಣದ ಮೇಲೆ ಇನ್ನಿಲ್ಲದ ಭಯ, ಆಂತಕದ ಚರ್ಚೆಯಲ್ಲಿ ತೊಡಗಿದ್ದಾರೆ. ಹಾಗಾದ್ರೆ, ಅಕ್ಟೋಬರ 2ರ ಬೆಂಕಿ ಸೂರ್ಯ ಗ್ರಹಣ ಭಾರತದ ಮೇಲೆ, ಕರ್ನಾಟಕದ ಪ್ರಭಾವ ಬೀರುತ್ತಾ? ಈ ಪ್ರಶ್ನೆಗೆ ಉತ್ತರ ಸಿಗಬೇಕು ಅಂದ್ರೆ ಸೂರ್ಯ ಗ್ರಹಣ ಎಲ್ಲಿ ಗೋಚರವಾಗುತ್ತೆ? ಯಾವ ಸಮಯದಲ್ಲಿ ಸೂರ್ಯನಿಗೆ ಗ್ರಹಣ ಹಿಡಿಯಲಿದೆ ಅನ್ನೋದು ನೋಡ್ತಾ ಹೋಗುವುದಾದ್ರೆ.

ಇದನ್ನೂ ಓದಿ:iPhone​ ಆರ್ಡರ್​ ಮಾಡಿದ ಗ್ರಾಹಕನಿಂದ ಕೊ*ಲೆಯಾದ ಡೆಲಿವರಿ ಬಾಯ್​; ಗೋಣಿಯಲ್ಲಿ ತುಂಬಿಸಿ ಕಾಲುವೆಗೆ ಎಸೆದ

ದಕ್ಷಿಣ ಅಮೆರಿಕಾ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೋ, ಉತ್ತರ ಅಮೆರಿಕಾ ಹಾಗೂ ನ್ಯೂಜಿಲೆಂಡ್​ನಲ್ಲಿ ಈ ಗ್ರಹಣ ಸ್ಪಷ್ಟವಾಗಿ ಕಾಣಿಸಲಿದೆ. ಆದ್ರೆ ಭಾರತದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಪ್ರಭಾವವಂತೂ ಇದ್ದೇ ಇದೆ. ಈ ದೇಶಗಳಲ್ಲಿ ಸೂರ್ಯ ಗ್ರಹಣ ಗೋಚರವಾಗುತ್ತೆ. ಭಾರತದಲ್ಲಿ ಈ ಬೆಂಕಿ ಉಂಗುರ ಸೂರ್ಯ ಗ್ರಹಣ ಗೋಚರಿಸೋದಿಲ್ಲ. ಇನ್ನು, ಭಾರತದಲ್ಲಿ ಈ ಬೆಂಕಿ ಉಂಗುರ ಸೂರ್ಯ ಗ್ರಹಣ ಯಾಕೆ ಗೋಚರಿಸೋದಿಲ್ಲ ಅನ್ನೋದರ ಬಗ್ಗೆಯೂ ವಿವರವಾಗಿ ನೋಡೋಣ.

publive-image

ಹಾಗಾದ್ರೆ, ಭಾರತದಲ್ಲಿ ಬೆಂಕಿ ಉಂಗುರ ಸೂರ್ಯನ ದರ್ಶನ ಆಗೋಲ್ವಾ.? ಗ್ರಹಣ ನಮ್ಮ ಕಣ್ಣಿಗೆ ಕಾಣಿಸೋಲ್ಲ. ಕಣ್ಣಿಗೆ ಕಾಣಿಸೋಲ್ಲ, ಗೋಚರಿಸೋದಿಲ್ಲ ಅಂದಮಾತ್ರಕ್ಕೆ ಗ್ರಹಣದ ಪ್ರಭಾವ ಇರೋಲ್ಲ ಅನ್ನೋಕಾಗಲ್ಲ. ಗ್ರಹಣದ ಪ್ರಭಾವ ಜಗತ್ತಿನ ಯಾವುದೇ ಒಂದು ದೇಶದ ಮೇಲಾದ್ರೂ ಕೂಡ ಜಗತ್ತಿಗೆಲ್ಲಾ ಅದರ ಪ್ರಭಾವ ಉಂಟಾಗುತ್ತೆ. ಇನ್ನು ಭಾರತದಲ್ಲಿ ಗ್ರಹಣ ಯಾಕೆ ಗೋಚರವಾಗುವುದಿಲ್ಲ ಎಂಬುದರ ವಿವರವನ್ನು ನಾವು ನಿಮಗೆ ಕೊಡುತ್ತೇವೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು.. ಅಸಲಿಗೆ ಆಗಿದ್ದೇನು?

publive-image

ಅಕ್ಟೋಬರ್ 2 ಸೂರ್ಯ ಗ್ರಹಣ ಜರುಗೋ ಸಂದರ್ಭದಲ್ಲಿ ಸೂರ್ಯ ಭೂಮಿಯ ಮತ್ತೊಂದು ದಿಕ್ಕಿನಲ್ಲಿರ್ತಾರೆ. ನಮ್ಮಲ್ಲಿ ಆ ಸಂದರ್ಭದಲ್ಲಿ ರಾತ್ರಿಯಾಗಿರುತ್ತೆ. ಗ್ರಹಣದ ಆರಂಭದಿಂದ ಗ್ರಹಣ ಮೋಕ್ಷದವರೆಗಿನ ಸಮಯದ ಅಂತರ ಭರ್ತಿ 6 ಗಂಟೆ 4 ನಿಮಿಷ ಎಂದು ಅಂದಾಜಿಸಲಾಗಿದೆ. ಇನ್ನು, ಜಗತ್ತಿಗೆ, ಭಾರತಕ್ಕೆ ಈ ಸೂರ್ಯಗ್ರಹಣದ ಮೇಲೆ ಅತಿದೊಡ್ಡ ಆತಂಕ ಹುಟ್ಟಿರೋದಕ್ಕೆ ಪ್ರಮುಖ ಕಾರಣವೇನು ಗೊತ್ತಾ? ಈ ಸೂರ್ಯಗ್ರಹಣ ಆ ಎರಡು ಸಾಗರಗಳಲ್ಲೂ ಗೋಚರವಾಗಲಿದೆ. ಕನ್ನಡಿಯಂತಾ ಸಾಗರದ ಜಲರಾಶಿಯಲ್ಲಿ ಬೆಂಕಿ ಉಂಗುರ ಪ್ರತ್ಯಕ್ಷವಾಗಲಿದೆ. ಇದುವೇ ಅತಿದೊಡ್ಡ ಭಯಕ್ಕೆ ನಾಂದಿ ಹಾಡಿದೆ!

publive-image

ಈಗ ಜಗತ್ತಿನ ನಾನಾ ದೇಶಗಳಲ್ಲಿ ಯುದ್ಧ ಸಂಘರ್ಷವಿದೆ. ಇಸ್ರೇಲ್‌ ದೇಶವಂತೂ ಸಿರಿಯಾ, ಪ್ಯಾಲಸ್ತೇನ್, ಇರಾನ್ ದೇಶಗಳನ್ನ ಸರ್ವನಾಶ ಮಾಡಿಯೇ ತೀರುವ ಪಣತೊಟ್ಟಿದೆ. ನಿತ್ಯ ನಿರಂತರ ಸಾವಿರಾರು ಬಾಂಬ್‌ಗಳನ್ನು ಹಾಕಿ ಧ್ವಂಸ ಮಾಡ್ತಿದೆ. ಮತ್ತೊಂದು ಕಡೆ ರಷ್ಯಾ ಅಧ್ಯಕ್ಷನ ಹಾವಳಿ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ದೇಶದ ಪಕ್ಕದಲ್ಲೇ ಇರೋ ಕ್ರಿಮಿ ಚೀನಾದ ಕುತಂತ್ರ. ಈಗ ಅಮೆರಿಕದಲ್ಲಿ ಮಹಾಚುನಾವಣೆ ಬೇರೆ ನಡೀತಿದೆ. ನವೆಂಬರ್‌ ನಲ್ಲಿ ಚುನಾವಣೆ ನಡೆದು ಹೊಸ ಅಧ್ಯಕ್ಷನ ಆಯ್ಕೆಯಾಗಲಿದೆ. ಅಮೆರಿಕ ಅಧ್ಯಕ್ಷ ಯಾರಾಗ್ತಾರೆ ಅನ್ನೋದ್ರ ಮೇಲೆಯೇ ಜಗತ್ತಿನ ಏಳುಬೀಳುಗಳ ಭವಿಷ್ಯವೂ ನಿಂತಿದೆ. ಇವೆಲ್ಲವುಗಳ ಮೇಲೆ ಸೂರ್ಯ ಗ್ರಹಣ ಪ್ರಭಾವ ಹೇಗಿರಲಿದ್ಯೋ ಅನ್ನೋದೆ ಎಲ್ಲರ ಆತಂಕಭರಿತ ಪ್ರಶ್ನೆ!

ಬೆಂಕಿ ಸೂರ್ಯ ಗ್ರಹಣ ಜರುಗುವ ಸಮಯ ಯಾವುದು?

publive-image
ಮೊದಲೇ ಹೇಳಿದ ಹಾಗೆ ಭಾರತದಲ್ಲಿ ಈ ಬೆಂಕಿ ಉಂಗುರ ಸೂರ್ಯ ಗ್ರಹಣ ಗೋಚರಿಸುತ್ತಿಲ್ಲ. ಅರ್ಥಾತ್, ಸೂರ್ಯ ಗ್ರಹಣ ಜರುಗುವ ವೇಳೆ ಭಾರತದಲ್ಲಿ ರಾತ್ರಿ ಸಮಯವಾಗಿರುತ್ತೆ. ಅಕ್ಟೋಬರ್ ಎರಡನೇ ತಾರೀಖು ಭಾರತೀಯ ಕಾಲಮಾನ ರಾತ್ರಿ 9 ಗಂಟೆ 13 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ. ಅಲ್ಲಿಂದ 6 ಗಂಟೆ 40 ನಿಮಿಷಗಳ ಕಾಲ ಇರುವ ಗ್ರಹಣ ಮೋಕ್ಷಗೊಳ್ಳಲಿದೆ. ಅಂದ್ರೆ, ಸೂರ್ಯ ಗ್ರಹಣದ ಮೋಕ್ಷ ಕಾಲಕ್ಕೆ ನಾವು ಅಕ್ಟೋಬರ್ 3 ನೇ ತಾರೀಖಿಗೆ ಕಾಲಿಟ್ಟಿರುತ್ತೇವೆ. ಅರ್ಥಾತ್, ಭಾರತೀಯ ಕಾಲಮಾನ ಮುಂಜಾನೆ 3 ಗಂಟೆ 17 ನಿಮಿಷಕ್ಕೆ ಸೂರ್ಯ ಗ್ರಹಣ ಅಂತ್ಯಗೊಳ್ಳಲಿದೆ.

publive-image

ಒಟ್ಟಾರೆ, ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಸಂಘರ್ಷ, ದಿನಕ್ಕೊಂದು ಹಗರಣಗಳು ಸ್ಫೋಟಗೊಳ್ತಿರೋ ಹೊತ್ತಲ್ಲೇ ಸೂರ್ಯಗ್ರಹಣ ಜರುಗುತ್ತಿದೆ. ರಾಜಕೀಯ ನಾಯಕರ ಮೇಲೆ ಸೂರ್ಯನ ಪ್ರಭಾವ ಹೇಗಿರಲಿದೆ ಎಂಬ ಚರ್ಚೆ ಶುರುವಾಗಿದೆ.
ಆದ್ರೆ, ಸೂರ್ಯಗ್ರಹಣ ಅನ್ನೋದು ಒಂದು ವೈಜ್ಞಾನಿಕ ವಿದ್ಯಮಾನ. ಅದರಿಂದ ಶುಭ, ಅಶುಭ ಉಂಟಾಗೋಕೆ ಸಾಧ್ಯನಾ? ಇದೆಲ್ಲಾ ಒಂದು ಮೌಢ್ಯ ಅಂತಾ ಹಲವರು ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ:‘Horn OK Please’ ಎಂದು ಲಾರಿ, ಟ್ರಕ್ ಮೇಲೆ ಯಾಕೆ ಬರೆದಿರುತ್ತೆ.. ಇದರ ಇತಿಹಾಸ ಎಲ್ಲಿಂದ ಆರಂಭ?

ಆದ್ರೆ, ಈ ಭೂಮಿ ನಿಂತಿರೋದೆ ಗುರುತ್ವಾಕರ್ಷಣೆ ಮೇಲೆ. ಗುರುತ್ವಾಕರ್ಷಣೆ ಈ ಸರ್ವಸ್ವದ ಪ್ರತಿಯೊಂದು ಅಣು ಅಣುವಿನ ಮೇಲೂ ಪ್ರಭಾವ ಬೀರುತ್ತೆ. ನಮ್ಮ ದೇಹ ಸೃಷ್ಟಿಯಾಗಿರೋದು ಕೂಡ ಆ ಅಣುಗಳಿಂದಲೇ. ಹಾಗಾಗಿ, ಗ್ರಹ, ನಕ್ಷತ್ರಗಳಿಂದ ನಮ್ಮ ಮೇಲೆ ಪ್ರಭಾವ, ಪರಿಣಾಮ ಇರೋಲ್ಲ ಅನ್ನೋದೂ ಕೂಡ ಒಂದು ಮೌಢ್ಯವೇ ಆಗುತ್ತೆ. ಹಾಗಾಗಿ, ಯಾವುದನ್ನು ಎಷ್ಟು ನಂಬಬೇಕು.. ಯಾವುದನ್ನು ಎಷ್ಟು ಆಚರಿಸಬೇಕು ಎಂಬುದರ ಅರಿವು ಕೂಡ ಎಲ್ಲರಿಗೂ ಇರಬೇಕು ಅನ್ನೋದು ವಿಜ್ಞಾನಿಗಳು ಮತ್ತು ಜ್ಯೋತಿಷ್ಯಾಸ್ತ್ರ ಪಂಡಿತರ ಅಭಿಪ್ರಾಯ. ಅದೇನೇ ಇರ್ಲಿ.. ಈಗ ಜಗತ್ತಿನ ಚಿತ್ತ ಅಕ್ಟೋಬರ್ 2 ರ ಸೂರ್ಯಗ್ರಹಣದತ್ತ, ಅದರಿಂದಾಗೋ ಪರಿಣಾಮಗಳ ಮೇಲೆ ನೆಟ್ಟಿರೋದಂತೂ ಸತ್ಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment