newsfirstkannada.com

×

‘Horn OK Please’ ಎಂದು ಲಾರಿ, ಟ್ರಕ್ ಮೇಲೆ ಯಾಕೆ ಬರೆದಿರುತ್ತೆ.. ಇದರ ಇತಿಹಾಸ ಎಲ್ಲಿಂದ ಆರಂಭ?

Share :

Published October 1, 2024 at 11:33am

    ಹಾರ್ನ್​ ಓಕೆ ಪ್ಲೀಸ್ ಅನ್ನು ಮಹಾರಾಷ್ಟ್ರ ಬ್ಯಾನ್ ಮಾಡಿದ್ದು ಏಕೆ?

    ಓಕೆ ಎನ್ನುವ ಸೋಪ್ ಪ್ರಚಾರ ಮಾಡಲು ಆ ಕಂಪನಿ ಮಾಡಿತು

    ಓಕೆ ಪದದ ಮೇಲೆ ಬಲ್ಬ ಅನ್ನು ಅಳವಡಿಕೆ ಮಾಡುವುದು ಯಾಕೆ?

ಭಾರತದ ಲಾರಿ, ಬಸ್, ಟ್ರಕ್ ಹಾಗೂ ಟ್ಯಾಂಕರ್ ಸೇರಿದಂತೆ ವಿವಿಧ ವಾಹನಗಳ ಮೇಲೆ ‘Horn OK Please’ ಎಂದು ಬರೆಯಲಾಗಿರುತ್ತದೆ. ಆದರೆ ಇದು ಯಾಕೆ ಬರೆದಿರುತ್ತಾರೆ, ವಾಹನಗಳ ಮೇಲೆ ಇದನ್ನು ಬರೆದರೆ ಏನ್ ಉಪಯೋಗ, ಈ ರೀತಿ ಬರೆಯುವುದು ಯಾವಾಗಿನಿಂದ ಆರಂಭವಾಯಿತು ಎನ್ನುವ ಪ್ರಶ್ನೆಗಳು ಮೂಡಬಹುದು. ಒಂದು ವಾಹನವನ್ನು ಹಿಂದಿಕ್ಕುವಾಗ ಹಾರ್ನ್​ ಮಾಡುವುದನ್ನು ಇದು ಸೂಚಿಸುತ್ತದೆ. ಇದರ ಮೂಲ ಕೆದಕುತ್ತ ಹೋದರೆ..!

ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ.. ಪತ್ನಿಗೆ CM ಏನಂದ್ರು?

ಅತಿಯಾದ ಸೌಂಡ್ ಹಾಗೂ ಶಬ್ಧ ಮಾಲಿನ್ಯವನ್ನು ತಡೆಯಲು 2015ರಲ್ಲಿ ಮಹಾರಾಷ್ಟ್ರ ಸರ್ಕಾರ ಹಾರ್ನ್​ ಓಕೆ ಪ್ಲೀಸ್ ಎನ್ನುವುದನ್ನ ಬ್ಯಾನ್ ಮಾಡಿತು. ಇದಕ್ಕೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್​ ಕಾಂಗ್ರೆಸ್​​ನ ಸದಸ್ಯ ಬಾಲ ಮಲ್ಕಿತ್ ಸಿಂಗ್ ಸಪೋರ್ಟ್ ಮಾಡಿದರು. ಈ ಹಿಂದೆ ಇದರ ಅವಶ್ಯಕತೆ ಇತ್ತು. ಆದರೆ ಈಗ ಹಾರ್ನ್​ ಓಕೆ ಪ್ಲೀಸ್ ಬೇಕಾಗಿಲ್ಲ ಎಂದು ಅಭಿಪ್ರಾಯ ಪಟ್ಟರು. ಇವರು ಈ ರೀತಿ ಹೇಳುವುದಕ್ಕೂ ಕಾರಣ ಇದೆ.

ಓವರ್​ಟೇಕಿಂಗ್​ಗಾಗಿ ಹಾರ್ನ್​ ಓಕೆ ಪ್ಲೀಸ್
ಈ ಹಿಂದಿನ ಕಾಲದಲ್ಲಿ ಭಾರತದ ರಸ್ತೆಗಳು ಸಣ್ಣದಾಗಿ ಕಿರಿದಾಗಿ ಒಂದೇ ವಾಹನ ಹೋಗುವಷ್ಟು ಇದ್ದವು. ಹೀಗಾಗಿ ಇನ್ನೊಂದು ವಾಹನವನ್ನ ಹಿಂದಿಕ್ಕಿ ಹೋಗಲು ರಿಸ್ಕ್ ಆಗುತ್ತಿತ್ತು. ಮುಂದೆ ಹೋಗುವ ವಾಹನವನ್ನು ಹಿಂದಿಕ್ಕಲು ಆಗುತ್ತಿರಲಿಲ್ಲ. ಈ ವೇಳೆ ಮುಂದೆ ಹೋಗುವ ವಾಹನದ ಹಿಂಭಾಗದಲ್ಲಿ ‘OK’ ಎನ್ನುವುದರ ಮೇಲೆ ಬಲ್ಬ್​ ಅನ್ನು ಅಳವಡಿಸಿರುತ್ತಿದ್ದರು. ಹಿಂದೆ ಹೋಗುವ ವಾಹನ ಹಾರ್ನ್ ಮಾಡಿದಾಗ ಮುಂದಿನ ವಾಹನದ ಹಂಭಾಗದ ಬಲ್ಬ್​​ನಲ್ಲಿ ಲೈಟ್ (ಬೆಳಕು) ಬಂದರೆ ಸುಲಭವಾಗಿ ಓವರ್​ಟೇಕ್ ಮಾಡಿಕೊಂಡು ಹೋಗಬಹುದು ಎಂದರ್ಥ.

ಸುಲಭವಾಗಿ ಓವರ್​ಟೇಕ್ ಮಾಡಲು ಭಾರತದ ಸಾಕಷ್ಟು ಡ್ರೈವರ್​ಗಳು ಇದನ್ನು ಕಂಡುಕೊಂಡಿದ್ದರು. ಮೊದಲು ಇದು ಹಾರ್ನ್ ಪ್ಲೀಸ್ ಎಂದು ಇತ್ತು. ಆದರೆ ನಂತರ ಇದು ಹಾರ್ನ್​ ಓಕೆ ಪ್ಲೀಸ್​ ಎಂದಾಯಿತು. ಚಾಲನೆಯಲ್ಲಿ ಸಂವಹನಕ್ಕಾಗಿ ಸುಲಭವಾದ ಮಾರ್ಗ ಕಂಡುಕೊಂಡಿದ್ದರು. ಇದು ರಸ್ತೆ ಸುರಕ್ಷತೆಗೆ ಹೆಚ್ಚು ಅನುಕೂಲ ಆಗಿತ್ತು ಎನ್ನಬಹುದು.

OK ಸೀಮೆಎಣ್ಣೆಯನ್ನು ಸೂಚಿಸುತ್ತಾ.?
2ನೇ ಮಹಾಯುದ್ಧದ ಸಮಯದಲ್ಲಿ ವಿಶ್ವಕ್ಕೆ ಡೀಸೆಲ್ ಕೊರತೆಯ ಉಂಟಾಯಿತು. ಇದರಿಂದ ವಾಹನಗಳು ಸೀಮೆಎಣ್ಣೆಯಂತಹ ಇಂಧನದ ಮೊರೆ ಹೋದರು. ಇದರಿಂದ ಹೊಗೆ ಸಾಕಷ್ಟು ಬರುತ್ತಿತ್ತು. ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುವ ಚಾಲಕರು ಸವಾಲುಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಈ ವಾಹನ ಸೀಮೆಎಣ್ಣೆ ಇಂಧನದ ಮೂಲಕ ಚಾಲನೆಯಲ್ಲಿದೆ ಎನ್ನುವುದನ್ನ OK ಸೂಚನೆ ಕೊಡುತ್ತಿತ್ತು. ಇದರಿಂದ ಹಿಂದೆ ಹೋಗುತ್ತಿದ್ದ ವಾಹನ ಚಾಲಕರು ಎಚ್ಚರಗೊಳ್ಳುತ್ತಿದ್ದರು.

ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

‘OK’ ಸೋಪ್​ ಪ್ರಚಾರ ಮಾಡಲು ಟಾಟಾ ಕಂಪನಿ ಹೀಗೆ ಮಾಡಿತಾ?
ಈ ಹಿಂದೆ ಬಹುತೇಕ ವಾಹನಗಳನ್ನು ಪ್ರತಿಷ್ಠಿತ ಟಾಟಾ ಕಂಪನಿಯವೇ ಆಗಿರುತ್ತಿದ್ದವು. ಅಲ್ಲದೇ ಟಾಟಾ ಇತರೆ ತಯಾರಿಕ ಸಹ ಸಂಸ್ಥೆಗಳನ್ನು ಹೊಂದಿತ್ತು. ಇದರಲ್ಲಿ ಟಾಟಾ ಆಯಿಲ್ ಮಿಲ್ಸ್ ಲಿಮಿಟೆಡ್.Co (ಟಿಒಎಂಸಿಒ) ಕೂಡ ಒಂದು. ಇದು ಓಕೆ ಹೆಸರಿನಲ್ಲಿ ಸೋಪ್ ತಯಾರು ಮಾಡುತ್ತಿತ್ತು. ಇದನ್ನು ಕಮಲದ ಹೂವು ಇರುವ ಕವರ್ ಅನ್ನು ಹೊಂದಿತ್ತು. ಇದನ್ನು ಮಾರುಕಟ್ಟೆಗೆ ಬಿಟ್ಟಿತು. ಈ ಸೋಪ್ ಪ್ರಚಾರ ಮಾಡಲು ಲಾರಿಗಳ ಹಿಂದೆ ಓಕೆ ಎಂದು ಟಾಟಾ ಬರೆದಿದೆ. ಇಲ್ಲಿಂದರೆ ಓಕೆ ಅನ್ನು ‘ಹಾರ್ನ್​ ಪ್ಲೀಸ್​’ಗೆ ಸೇರಿಸಿದ್ದರಿಂದ ‘ಹಾರ್ನ್​ ಓಕೆ ಪ್ಲೀಸ್’ ಎಂದಾಯಿಗಿದೆ ಎಂದು ಹೇಳಲಾಗುತ್ತದೆ.

ಈ ಹಿಂದೆ ರಸ್ತೆ ಸುರಕ್ಷಿತಕ್ಕಾಗಿ ಹಾರ್ನ್​ ಓಕೆ ಪ್ಲೀಸ್ ಹುಟ್ಟಿಕೊಂಡಿತು. ಈಗ ದೇಶದ ಎಲ್ಲ ರಸ್ತೆಗಳು ಸುಧಾರಿಸಿದ್ದರಿಂದ, ದೊಡ್ಡ ದೊಡ್ಡದಾಗಿದ್ದರಿಂದ ಈ ಪದವನ್ನು ಅಷ್ಟಾಗಿ ಬಳಕೆ ಮಾಡುತ್ತಿಲ್ಲ. ಎಲ್ಲೋ ಕೆಲ ವಾಹನಗಳ ಮೇಲೆ ಇದನ್ನು ಕಾಣಬಹುದು. ಈಗ ಇದು ನೆನಪು ಮಾತ್ರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘Horn OK Please’ ಎಂದು ಲಾರಿ, ಟ್ರಕ್ ಮೇಲೆ ಯಾಕೆ ಬರೆದಿರುತ್ತೆ.. ಇದರ ಇತಿಹಾಸ ಎಲ್ಲಿಂದ ಆರಂಭ?

https://newsfirstlive.com/wp-content/uploads/2024/10/LORRY_2.jpg

Load More