newsfirstkannada.com

ಅಮೃತವರ್ಷಿಣಿ ನಟಿ ಸ್ವಾತಿ ಬದುಕಿ ಬಂದಿದ್ದೇ ಪವಾಡವಂತೆ.. ಏನಾಯ್ತು?

Share :

Published February 23, 2024 at 4:50pm

Update February 23, 2024 at 4:39pm

  ಅಮೃತವರ್ಷಿಣಿ ಸೀರಿಯಲ್​ ಮೂಲಕ ಫ್ಯಾನ್ಸ್ ಗಳಿಸಿಕೊಂಡ ನಟಿ ಸ್ವಾತಿ

  ತಮ್ಮ ಜೀವನದ ಕತ್ತಲೆಯ ಕ್ಷಣಗಳನ್ನ ನೆನೆದು ಗಳಗಳನೇ ಕಣ್ಣೀರಿಟ್ಟ ನಟಿ

  ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸ್ವಾತಿಗೆ ಆಸರೆಯಾಗಿದ್ದು ಯಾರು?

ಅಮೃತವರ್ಷಿಣಿ ಸೀರಿಯಲ್​ ಮೂಲಕ ನಟಿ ಸ್ವಾತಿ ಅವರು ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಸದ್ಯ ನಟಿ ಸ್ವಾತಿ ಕನ್ನಡ, ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರನ್ನ ಅಮೃತವರ್ಷಿಣಿ ವರ್ಷಾ ಅಂತಲೇ ಜನರು ಗುರುತಿಸುತ್ತಾರೆ. ಸದ್ಯ ಸ್ವಾತಿ ಅಮೃತಧಾರೆ ಸೀರಿಯಲ್​ನಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನು ಓದಿ: ಮಾಡಿದ್ರೆ ರಾಜ್‌ಕುಮಾರ್ ಕುಟುಂಬದ ಜೊತೆ ಸಿನಿಮಾ ಮಾಡ್ಬೇಕು.. ದರ್ಶನ್ ಮಾತಿನ ಬಳಿಕ ಉಮಾಪತಿ ಹೀಗಂದಿದ್ದು ಯಾಕೆ?

ನಟಿ ಸ್ವಾತಿ ಪಕ್ಕದ್ಮನೆಯ ಹುಡುಗ ಅನಿಲ್​ ಅವರನ್ನು ಇಷ್ಟಪಟ್ಟಿದ್ದರು. 9ನೇ ಕ್ಲಾಸ್​ನಲ್ಲೇ ಅನಿಲ್​ ಅವರು ಸ್ವಾತಿಗೆ ಪ್ರಪೋಸ್​ ಕೂಡ ಮಾಡಿದ್ದರಂತೆ. ಆದ್ರೇ ಈ ವಿಚಾರ ಸ್ವಾತಿ ಮನೆಯಲ್ಲಿ ಒಪ್ಪಿಗೆ ಇರಲಿಲ್ವಂತೆ. ಪ್ರೀತಿ ವಿಷಯ ಒಂದು​ ಕಡೆ ಆದ್ರೇ, ಸ್ವಾತಿ ಅವರಿಗೆ ವಿಚಿತ್ರ ಕಾಯಿಲೆ ಶುರುವಾಗಿತ್ತಂತೆ. ನಟಿ ಬುದುಕಿ ಉಳಿದಿದ್ದೇ ಒಂದು ಪವಾಡವಂತೆ. ಈ ವಿಷ್ಯವನ್ನ ಸುವರ್ಣ ಸೂಪರ್​ ಸ್ಟಾರ್​ ವೇದಿಕೆಯಲ್ಲಿ ಹೇಳಿ ಕಣ್ಣೀರಿಟ್ಟಿದ್ದಾರೆ ಸ್ವಾತಿ.

ಹೌದು, ಸ್ವಾತಿ ತಾವು ಡಿಗ್ರಿಯಲ್ಲಿರುವಾಗಿ ಕ್ಯೂಬರ್​ಕಿಲೋಸಿಸ್ ಮೆನಾಜಿಟಿಸ್ ಅನ್ನೋ ಡೆಡ್ಲಿ ಡಿಸೀಸ್​ಗೆ ತುತ್ತಾಗಿದ್ದರಂತೆ. ಈ ಕಾಯಿಲೆ ಬಂದ್ರೆ ಒಂದು ಕಿವುಡು ಅಥವಾ ಕುರುಡತನ ಬರೋದು ಪಕ್ಕವಂತೆ. ಇಂತಹ ಕಾಯಿಲೆ ಬಂದಾಗ ತಾವು ಪ್ರೀತಿ ಮಾಡ್ತಿದ್ದ ಅನೀಲ್​ ಅವರ ಸಹಾಯದಿಂದ ಜೀವದ ಅವಘಡಗಳಿಂದ ಪಾರಾಗಿದ್ದಾರಂತೆ ಸ್ವಾತಿ. ತಮ್ಮ ಜೀವನದ ಕತ್ತಲೆಯ ಕ್ಷಣಗಳನ್ನ ನೆನೆದು ಕಣ್ಣೀರಿಟ್ಟಿದ್ದಾರೆ ಸ್ವಾತಿ. ಸದ್ಯ ಸ್ವಾತಿ ವೈಯಕ್ತಿಕ ಬದುಕಿನಲ್ಲಿ ಸುಖವಾಗಿದ್ದಾರೆ. ಈ ಮುದ್ದಾದ ಜೋಡಿಗೆ ಮಗಳಿದ್ದಾಳೆ. ಜೊತೆಗೆ ಸೀರಿಯಲ್​ನಲ್ಲೂ ಬ್ಯುಸಿಯಾಗಿದ್ದಾರೆ. ಅನಿಲ್​ ಅವರು ಕೂಡ ನಟ. ಸುವರ್ಣದಲ್ಲಿ ಬರ್ತಿದ್ದ ‘ಓ ಮುದ್ದು ಮನಸ್ಸೇ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದ ಸ್ವಾತಿಗೆ ಆಸರೆ ಆಗಿ ನಿಂತ ಅನಿಲ್​ ಅವ್ರ ಪ್ರೀತಿ ನಿಜಕ್ಕೂ ಮಾದರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೃತವರ್ಷಿಣಿ ನಟಿ ಸ್ವಾತಿ ಬದುಕಿ ಬಂದಿದ್ದೇ ಪವಾಡವಂತೆ.. ಏನಾಯ್ತು?

https://newsfirstlive.com/wp-content/uploads/2024/02/actress-swathi-2.jpg

Load More