newsfirstkannada.com

ಒಬ್ಬರಾದ ಮೇಲೆ ಮತ್ತೊಬ್ಬರು.. ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿಗೆ ಕಾರಣವೇನು?

Share :

Published February 7, 2024 at 9:17pm

  ಭವಿಷ್ಯದ ಕನಸು ಹೊತ್ತು ಅಮೆರಿಕಾಗೆ ಹೋಗುವ ವಿದ್ಯಾರ್ಥಿಗಳು

  ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನಿಗೂಢವಾಗಿ ಸಾವು

  ಸುಮ್ನೆ ಮನೆಗೆ ಹೋಗುತ್ತಿದ್ದವರ ಮೇಲೆ ದುಷ್ಕರ್ಮಿಗಳ ಅಟ್ಯಾಕ್‌!

ನವದೆಹಲಿ: ಭವಿಷ್ಯದ ಕನಸು ಹೊತ್ತು ಭಾರತದ ಸಾವಿರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದ ಫ್ಲೈಟ್ ಹತ್ತುತ್ತಾರೆ. ವಿದ್ಯಾಭ್ಯಾಸ ಮುಗಿಸಿ ಸೇಫ್ ಆಗಿ ವಾಪಸ್ ಬಂದ್ರೆ ಸಂತೋಷ. ಇಲ್ಲದಿದ್ರೆ ಹೆತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಸುರಿಸಬೇಕಾಗುತ್ತೆ. ಇತ್ತೀಚೆಗೆ ಅಮೆರಿಕಾದಲ್ಲಿ ಸಂಭವಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಾವಿನ ಸರಣಿ ನಿಲ್ಲುತ್ತಲೇ ಇಲ್ಲ. ಈ ಸಾವಿನ ಸರಮಾಲೆ ನಿಜಕ್ಕೂ ಬೆಚ್ಚಿ ಬೀಳುವಂತೆ ಮಾಡುತ್ತಿದೆ.

ಪ್ಲೀಸ್ ಹೆಲ್ಪ್ ಮೀ.. ಪ್ಲೀಸ್ ಹೆಲ್ಪ್ ಮೀ ಬ್ರೋ.. ಅಬ್ಬಾ.. ಜಸ್ಟ್ 10 ಸೆಕೆಂಡ್‌ನಲ್ಲಿ ನಡೆದಿರೋ ಡೆಡ್ಲಿ ಅಟ್ಯಾಕ್‌ ಇದು. ಭಾರತೀಯ ಮೂಲದ ವಿದ್ಯಾರ್ಥಿ ಬಾಯಿ, ಮುಖದ ತುಂಬಾ ರಕ್ತ ಸೋರಿಕೊಂಡು ಬೇಡಿಕೊಳ್ತಾ ಇದ್ದಾರೆ. ಈತನ ಹೆಸರು ಸೈಯದ್ ಮಜಾಹಿರ್ ಅಲಿ. ಚಿಕಾಗೋದ ಉತ್ತರ ಕ್ಯಾಂಪ್ಬೆಲ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಭಯಾನಕ ದಾಳಿ ನಡೆದಿದೆ. ಸುಮ್ನೆ ಮನೆಗೆ ಹೋಗುತ್ತಿದ್ದವನನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾರೆ. ನಾನು ಮನೆಗೆ ವಾಪಸ್ ಆಗಿದ್ದಾಗ 4 ಜನ ಸೇರಿ ನನ್ನ ಮೇಲೆ ದಾಳಿ ಮಾಡಿ, ಪಂಚ್ ಮಾಡಿದ್ದಾರೆ. ಹೇಗೆಂದರೆ ಹಾಗೇ ಒದ್ದು ನನ್ನ ಬಳಿ ಇದ್ದ ಮೊಬೈಲ್‌ ಕಿತ್ತುಕೊಂಡು ಓಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಬಾಯಿ, ಮುಖದಲ್ಲಿ ರಕ್ತ ಸುರಿಯುತ್ತಿದ್ದರು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ರಕ್ಷಣೆಗಾಗಿ ಅಂಗಲಾಚಿದ್ದಾನೆ.

ನನ್ನ ಗಂಡನ ಜೀವ ಉಳಿಸಲು ಸಹಾಯ ಮಾಡಿ
ಕೇಂದ್ರ ವಿದೇಶಾಂಗ ಸಚಿವರಿಗೆ ಅಲಿ ಪತ್ನಿ ಮನವಿ

ಸೈಯದ್ ಮಜಾಹಿರ್ ಅಲಿ ಚಿಕಾಗೋದ ಇಂಡಿಯಾನಾ ವೆಸ್ಲೇ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಮಾಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಅವರ ಕುಟುಂಬ ಈ ಘಟನೆ ದೃಶ್ಯ ನೋಡಿ ಆಘಾತಕ್ಕೆ ಒಳಗಾಗಿದೆ. ಅಲಿ ಅವರ ಪತ್ನಿ ಫಾತಿಮಾ ರಿಜ್ವಿ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಅವರಿಗೆ ಪತ್ರ ಬರೆದಿದ್ದಾರೆ. ನನ್ನ ಗಂಡನ ಸುರಕ್ಷತೆ ಬಗ್ಗೆ ನನಗೆ ತುಂಬಾ ಭಯವಾಗುತ್ತಿದೆ. ಗಾಯಗೊಂಡಿರುವ ನನ್ನ ಗಂಡನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: VIDEO: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಬಾಯಲ್ಲಿ ರಕ್ತ ಬರುವಂತೆ ಹಲ್ಲೆ; ಕಾರಣವೇನು..?

2 ವಾರದಲ್ಲೇ 4 ಭಾರತೀಯ ವಿದ್ಯಾರ್ಥಿಗಳ ಸಾವು
ಅಮೆರಿಕಾದಲ್ಲಿ ನಾಪತ್ತೆಯಾದವರ ಶವ ನಿಗೂಢವಾಗಿ ಪತ್ತೆ!

ಸೈಯದ್ ಮಜಾಹಿರ್ ಅಲಿ ಸದ್ಯ ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 2 ವಾರದಲ್ಲೇ 4 ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ.

ಜನವರಿ 29, ವಿವೇಕ್ ಸೈನಿ
ಅಮೆರಿಕಾದ ಜಾರ್ಜಿಯಾದಲ್ಲಿ 25 ವರ್ಷದ ವಿವೇಕ್ ಸೈನಿ ಅವರ ಬರ್ಬರ ಹತ್ಯೆಯಾಗಿತ್ತು. ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸೈನಿ ವ್ಯಾಸಂಗದ ಜೊತೆಗೆ ಪಾರ್ಟ್‌ ಟೈಮ್‌ ಕೆಲಸ ಕೂಡ ಮಾಡುತ್ತಿದ್ದರು.

ಜನವರಿ 30, ನೀಲ್ ಆಚಾರ್ಯ
ಇಂಡಿಯಾನಾ ರಾಜ್ಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ನೀಲ್ ಆಚಾರ್ಯ ಅವರು ಜನವರಿ 30ರಂದು ನಾಪತ್ತೆಯಾಗಿದ್ದರು. ಇದಾದ 2 ದಿನದ ಬಳಿಕ ನಿರ್ಜನ ಪ್ರದೇಶದ ರಸ್ತೆಯಲ್ಲಿ ನೀಲ್ ಆಚಾರ್ಯ ಅವರು ಶವವಾಗಿ ಪತ್ತೆಯಾಗಿದ್ದಾರೆ.

ಫೆಬ್ರವರಿ 01, ಶ್ರೇಯಸ್ ರೆಡ್ಡಿ ಬೆನಿಗರ್
ಹೈದರಾಬಾದ್‌ ಮೂಲದ 19 ವರ್ಷದ ಶ್ರೇಯಸ್ ರೆಡ್ಡಿ ಅವರು ಓಹಿಯೋದ ಲಿಂಡ್‌ನರ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶ್ರೇಯಸ್ ಸಾವಿನ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ.

ಫೆಬ್ರವರಿ 05, ಸಮೀರ್ ಕಾಮತ್
ಸಮೀರ್ ಕಾಮತ್ ಎಂಬ ವಿದ್ಯಾರ್ಥಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಮಾಡಲು ಅಮೆರಿಕಾಕ್ಕೆ ಹೋಗಿದ್ದರು. 23 ವರ್ಷದ ಕಾಮತ್ ಅವರ ಮೃತದೇಹ ಕಳೆದ ಫೆಬ್ರವರಿ 5ರಂದು ಪತ್ತೆಯಾಗಿದೆ. ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕಾದಲ್ಲಿ ಸಾವನ್ನಪ್ಪುತ್ತಿದ್ದಾರೆ. ಬೆಟ್ಟದಷ್ಟು ಕನಸು ಕಂಡು ಅಮೆರಿಕಾ ಫ್ಲೈಟ್ ಹತ್ತಿದ ವಿದ್ಯಾರ್ಥಿಗಳು ಅತ್ಯಂತ ಚಿಕ್ಕ ವಯಸ್ಸಿಗೆ ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ. ಈ ಸಾವಿನ ಬಳಿಕ ಅಮೆರಿಕಾದಲ್ಲಿರುವ ಭಾರತೀಯರು ವಾಪಸ್ ಸ್ವದೇಶಕ್ಕೆ ಬರುವ ಮಾತನಾಡಿದ್ದಾರೆ.

ಭಾರತೀಯ ವಿದ್ಯಾರ್ಥಿಗಳ ಸಾವಿಗೆ ಕಾರಣವೇನು? 

ಅಮೆರಿಕನ್ನರಲ್ಲಿ ಅತಿಯಾದ ಗನ್ ವ್ಯಾಮೋಹ ಇದೆ
18 ವರ್ಷ ಮೇಲ್ಪಟ್ಟವರಿಗೆಲ್ಲಾ ಸಿಗುತ್ತೆ ಗನ್ ಲೈಸೆನ್ಸ್
ಹದಿ ಹರಿಯದವರ ಕೈಯೆಲ್ಲೆಲ್ಲಾ ಗನ್‌ ಸಿಗೋ ಚಾನ್ಸ್
ಬ್ಲಾಕ್ ಮಾರ್ಕೆಟ್‌ನಲ್ಲೂ ಕೂಡ ಗನ್‌ಗಳ ಮಾರಾಟ
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶೂಟೌಟ್‌ಗಳು
ಆಫ್ರಿಕಾ ಮೂಲದ ವಲಸಿಗರು ಹಣ, ಚಿನ್ನಕ್ಕಾಗಿ ಹತ್ಯೆ
ಮಾನಸಿಕ ಅಸ್ವಸ್ಥನಿಂದಲೂ ಮಾರಣಾಂತಿಕವಾಗಿ ಹಲ್ಲೆ
ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಬರ್ಬರ ಕೊಲೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಬ್ಬರಾದ ಮೇಲೆ ಮತ್ತೊಬ್ಬರು.. ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿಗೆ ಕಾರಣವೇನು?

https://newsfirstlive.com/wp-content/uploads/2024/02/US-Indian-Students.jpg

Load More