newsfirstkannada.com

×

ಕಬಿನಿ ಡ್ಯಾಂ ಭರ್ತಿಗೆ 6 ಅಡಿ ಬಾಕಿ.. ರಾಜ್ಯದಲ್ಲಿ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

Published July 24, 2023 at 9:15am

Update July 24, 2023 at 9:25am

    ರಾಜ್ಯದಾದ್ಯಂತ ಸುರಿಯುತ್ತಿರುವ ನಿರಂತರ ಮಳೆ

    ವರುಣಾರ್ಭಟಕ್ಕೆ ಭರ್ತಿಯಾಗುತ್ತಿವೆ ಕೆರೆ ಕಟ್ಟೆಗಳು

    ಕಬಿನಿ ಜಲಾಶಯದ ಒಳಹರಿವು ಹೆಚ್ಚಳ, ಶೀಘ್ರದಲ್ಲೇ ಭರ್ತಿಯಾಗುವ ಸಾಧ್ಯತೆ

ರಾಜ್ಯದಾದ್ಯಂತ ನಿರಂತರ ಮಳೆಯಾಗುತ್ತಿದೆ. ಈ ಹಿನ್ನಲೆ ಹಲವೆಡೆ ಅವಾಂತರ ಸೃಷ್ಟಿಯಾದರೆ, ಇನ್ನು ಕೆಲವೆಡೆ ಭಯದ ವಾತವರಣದಲ್ಲಿ ಜನರಿದ್ದಾರೆ. ಮಳೆಯ ಅವಾಂತರದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ವರುಣಾರ್ಭದಿಂದ ಕೆರೆ, ನದಿಗಳು ಸಹ ತುಂಬಿ ಹರಿಯುತ್ತಿವೆ. ಹೀಗಿರುವಾಗ ರಾಜ್ಯದಲ್ಲಿ ಅಣೆಕಟ್ಟುಗಳ ನೀರಿನ ಮಟ್ಟ ಹೇಗಿದೆ? ಒಳ ಹರಿವು ಎಷ್ಟಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಕಬಿನಿ

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ಕಬಿನಿ ಜಲಾಶಯ ಭರ್ತಿಗೆ ಆರೇ ಅಡಿ ಬಾಕಿ ಇದೆ. ಕೇರಳದ ವೈನಾಡು ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ.

ಕಬಿನಿ ಗರಿಷ್ಠ ಮಟ್ಟ: 2284 ಅಡಿ
ಇಂದಿನ ಮಟ್ಟ: 2278.31 ಅಡಿ
ಗರಿಷ್ಠ ಸಂಗ್ರಹಣಾ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ಸಂಗ್ರಹ: 16.09
ಒಳಹರಿವು: 20,749 ಕ್ಯುಸೆಕ್
ಹೊರ ಹರಿವು: 3,333 ಕ್ಯುಸೆಕ್

ಇನ್ನು ಕಬಿನಿ ಭರ್ತಿಯಾದರೆ ರಾಜ್ಯದಲ್ಲಿ ಮೊದಲು ಭರ್ತಿ ಆದ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಮತ್ತೊಂದೆಡೆ ನೀರಿಲ್ಲದೆ ಈ ಬಾರಿ ಕುಸಿತ ಕಂಡಿದ್ದ ಜಲಾಶಯ ಇದಾಗಿದ್ದು, ಕೇವಲ 50 ಅಡಿಗೆ ಕುಸಿದಿತ್ತು. ಕಳೆದ ವರ್ಷ ಇದೇ ದಿನಕ್ಕೆ ಬಾಗಿನ ಅರ್ಪಣೆ ಮಾಡಲಾಗಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಬಾಗಿನ ಅರ್ಪಿಸಿದ್ದರು.

ಅಂದಹಾಗೆಯೇ ಮಳೆ ಇಲ್ಲದೆ ಈ ಬಾರಿ ಜಲಾಶಯ ಭರ್ತಿ ಆಗೋದು ಅನುಮಾನ ಎಂದು ಸಾರ್ವಜನಿಕರು ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಮಳೆ ಕೊರತೆಯಿಂದ ರೈತರು, ಜನ ಜಾನುವಾರು ಕಂಗಾಲಾಗಿದ್ದರು. ಆದರೀಗ ನಿರಂತರ ಮಳೆಯಿಂದಾಗಿ ಕಬಿನಿ ಭರ್ತಿಗೆ ಆರೇ ಅಡಿ ಬಾಕಿ ಇದೆ.

ಕೆಆರ್​​ಎಸ್​​ ಡ್ಯಾಂ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾದ ಹಿನ್ನೆಲೆ. KRS ಡ್ಯಾಂಗೆ ಈ ವರ್ಷದಲ್ಲೆ ಮೊದಲ ಬಾರಿ ಒಳ ಹರಿವಿನ ಪ್ರಮಾಣ ಭಾರಿ ಏರಿಕೆಯಾಗಿದೆ. 12 ಗಂಟೆಯ ಅವಧಿಯಲ್ಲಿ ಕೆ.ಆರ್‌.ಎಸ್ ಡ್ಯಾಂ‌ನ 3 ಅಡಿ ಭರ್ತಿಯಾಗಿದೆ. ಕಳೆದ 12 ಗಂಟೆ ಹಿಂದೆ 92.60ರಷ್ಟು ಡ್ಯಾಂ ಭರ್ತಿಯಾಗಿದೆ. ಒಟ್ಟಿನಲ್ಲಿ 95 ಅಡಿ ಡ್ಯಾಂ ನೀರು ಏರಿಕೆ ಕಂಡಿದೆ.

ಡ್ಯಾಂನಲ್ಲಿ 19.139 ಟಿಎಂಸಿ ನೀರು ಶೇಖರಣೆ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 95.00 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 19.139 ಟಿಎಂಸಿ
ಒಳ ಹರಿವು – 29,552 ಕ್ಯೂಸೆಕ್
ಹೊರ ಹರಿವು – 5297 ಕ್ಯೂಸೆಕ್

ಹೇಮಾವತಿ ಜಲಾಶಯ

ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳು
ಜಲಾಶಯದ ಇಂದಿನ ಮಟ್ಟ 2903.05 ಅಡಿಗಳು
ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ ಪ್ರಮಾಣ 21.729 ಟಿಎಂಸಿ
ಒಳಹರಿವು 23142 ಕ್ಯೂಸೆಕ್
ಹೊರಹರಿವು 200 ಕ್ಯೂಸೆಕ್

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

ಗರಿಷ್ಠ ಸಂಗ್ರಹ ಸಾಮರ್ಥ್ಯ:123.715ಟಿಎಂಸಿ
ಇಂದಿನ ಸಂಗ್ರಹ :62.534ಟಿಎಂಸಿ
ಒಳಹರಿವು : 1,14,445ಕ್ಯೂಸೆಕ್
ಹೊರ ಹರಿವು:- 6761ಕ್ಯೂಸೆಕ್

ಭದ್ರಾ ಜಲಾಶಯ

ಉತ್ತಮ ಮಳೆ ಹಿನ್ನೆಲೆ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಒಂದೇ ದಿನದಲ್ಲಿ 4.5 ಅಡಿ ನೀರು ಹೆಚ್ಚಳಕಂಡಿದೆ.
186 ಅಡಿಯ ಡ್ಯಾಂ ನಲ್ಲಿ ಪ್ರಸ್ತುತ 149.5 ಅಡಿ ನೀರು ಸಂಗ್ರಹವಾಗಿದೆ
ಒಂದೇ ದಿನಕ್ಕೆ 145 ಅಡಿಯಿಂದ 149.5 ಅಡಿಗೆ ಹೆಚ್ಚಿದ ನೀರಿನ ಸಂಗ್ರಹವಾಗಿದೆ
39,348 ಕ್ಯೂಸೆಕ್ ನೀರು ಹರಿದು ಬರುತ್ತಿದೆ
ಜಲಾಶಯದಿಂದ 170 ಕ್ಯೂಸೆಕ್ ನೀರು ಹೊರಕ್ಕೆ ಹೋಗುತ್ತಿದೆ
ಭದ್ರಾ ಡ್ಯಾಂ ಭರ್ತಿಗೆ ಬೇಕು ಇನ್ನೂ 30 ಅಡಿ ನೀರು ಬೇಕು

ಕೃಷ್ಣಾ ನದಿ

ಮಹಾರಾಷ್ಟ್ರದಲ್ಲಿ ಮುಂದುವರೆದ ಮಹಾ ಮಳೆಯಿಂದಾಗಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಕಲ್ಲೋಳ‌ ಬ್ಯಾರೇಜ್ ನಲ್ಲಿ ಕೃಷ್ಣಾಗೆ 101742 ಕ್ಯೂಸೇಕ್ ನಷ್ಟು ಒಳಹರಿವು ಹೆಚ್ಚಾಗಿದೆ. ದೂದ್​ಗಂಗಾ ನದಿಯ ಒಳಹರಿವಿನ ಪ್ರಮಾಣದಲ್ಲೂ ಸಹ ಗಣನೀಯ ಏರಿಕೆಕಂಡಿದ್ದು, 24992 ಕ್ಯೂಸೇಕ್ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇನ್ನು ಬಾಗಲಕೋಟೆಯ ಹಿಪ್ಪರಗಿ ಜಲಾಶಯದಿಂದ 95300 ಕ್ಯೂಸೇಕ್ ನೀರು ಹೊರಕ್ಕೆ ಹೋಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಬಿನಿ ಡ್ಯಾಂ ಭರ್ತಿಗೆ 6 ಅಡಿ ಬಾಕಿ.. ರಾಜ್ಯದಲ್ಲಿ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/Kabini-Dam.jpg

Load More