ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು.. ತುಪ್ಪದಲ್ಲಿ ಕಲಬೆರಕೆ ಬೆರೆಸಿದ್ದು ಯಾರು? ಇಲ್ಲಿದೆ ಅಸಲಿ ವಿಷ್ಯ!

author-image
admin
Updated On
ಲಡ್ಡು ಕೊಬ್ಬು ಲಡಾಯಿ; ಆರೋಪ ಬೆನ್ನಲ್ಲೇ ಮಹತ್ವದ ನಿರ್ಣಯ ತೆಗೆದುಕೊಂಡ ಜಗನ್ ಪಕ್ಷ
Advertisment
  • ತಿಮ್ಮಪ್ಪನ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ತುಂಬಿಸಿದ್ದು ಯಾರು?
  • ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ಅಯ್ಯೋ ದೇವ್ರೇ!
  • ಗುಜರಾತ್‌ನ ಲ್ಯಾಬ್‌ನಲ್ಲಿ ಕಲಬೆರಕೆ ತುಪ್ಪ ದೃಢವಾಗಿದ್ದು ಹೇಗೆ?

ಅಪಚಾರ... ಮಹಾ ಅಪಚಾರ.. ವೈಕುಂಠವಾಸಿ ತಿಮ್ಮಪ್ಪನ ಪ್ರಸಾದದಲ್ಲಿ ದನದ ಕೊಬ್ಬು, ಹಂದಿ ಕೊಬ್ಬು ಬಳಸಿ ದೊಡ್ಡದೊಂದು ಅಪಚಾರ ಎಸಗಲಾಗಿದ್ಯಂತೆ. ತಿಮ್ಮಪ್ಪನ ಪ್ರಸಾದ ತಯಾರಿಕೆಗೆ ಕಲಬೆರೆಕೆ ತುಪ್ಪವನ್ನು ಬಳಸಿರೋ ಆಘಾತಕಾರಿ ಸಂಗತಿ ಬಯಲಾಗಿದೆ. ಮೊದಲು, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಆಘಾತಕಾರಿ ವಿಚಾರವನ್ನ ಸ್ಫೋಟಿಸಿದ್ರು. ಮರುದಿನವೇ ಲಡ್ಡುವಿನ ಸ್ಯಾಂಪಲ್‌ನ ಲ್ಯಾಬ್ ರಿಪೋರ್ಟ್ ಹೊರಬಿದ್ದಿದೆ. ಲಡ್ಡುವಿನಲ್ಲಿ ದನ, ಮೀನು ಮತ್ತು ಹಂದಿ ಕೊಬ್ಬು ಇರೋದು ಖಚಿತವಾಗಿದೆ. ಇದು ತಿಮ್ಮಪ್ಪನ ಅಸಂಖ್ಯ ಭಕ್ತರಲ್ಲಿ ದೊಡ್ಡ ಆಘಾತ ಮತ್ತು ಆತಂಕಕ್ಕೆ ನಾಂದಿ ಹಾಡಿದೆ. ಯಾಕಂದ್ರೆ, ಪರಮಪವಿತ್ರ ಪುಣ್ಯ ಕ್ಷೇತ್ರದ ಪ್ರಸಾದವನ್ನೇ ಕಲಬೆರಕೆ ಮಾಡಿ ಅಪವಿತ್ರಗೊಳಿಸಿದ್ದಾರೆ ಪಾಪಿಗಳು.

ಇದನ್ನೂ ಓದಿ: tirupati laddu: ತುಪ್ಪದಲ್ಲಿ ದನದ ಕೊಬ್ಬಿನ ತಪ್ಪು ಒಪ್ಪಿಕೊಂಡ TTD; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ 

ಯಾವ ಪ್ರಸಾದವನ್ನ ಪರಮ ಶ್ರೇಷ್ಠವೆಂದು ಕೈಮುಗಿದು ಅತ್ಯಂತ ಭಕ್ತಿ, ಭಯದಿಂದ ಸೇವಿಸುತ್ತಿದ್ದೆವೋ ಆ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ತುಂಬಿದ್ದಾರೆಂಬ ಶಾಕಿಂಗ್ ಸಂಗತಿ ಅಧಿಕೃತವಾಗಿ ಹೊರಬಿದ್ದಿದೆ. ವಿವಾದ ಭುಗಿಲೆದ್ದು ವ್ಯಾಪಕ ಆಕ್ರೋಶ ಸ್ಫೋಟಗೊಂಡ ಬಳಿಕ ಖುದ್ದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ವಾಮಲಾ ರಾವ್ ಈ ವಿಚಾರವನ್ನ ಒಪ್ಕೊಂಡಿದ್ದಾರೆ. ವೆಂಕಟೇಶ್ವರ ಪ್ರಸಾದವಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇರೋದು ದೃಢವಾಗಿದೆ ಅಂತ ಹೇಳಿ ಭಕ್ತರಿಗೆ ಬರಡಿಸಿಲು ಬಡಿಯುವಂತೆ ಮಾಡಿದ್ದಾರೆ.

publive-image

ಶ್ರೀನಿವಾಸನ ಪವಿತ್ರ ಕ್ಷೇತ್ರದ ಪರಮಶ್ರೇಷ್ಠ ಪ್ರಸಾದದೊಳಕ್ಕೆ ಪ್ರಾಣಿಗಳ ಕೊಬ್ಬು ತುಂಬಿ ಅಪವಿತ್ರಗೊಳಿಸಿದ್ಯಾರು? ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಿದ್ದರ ಹಿಂದೆ ಅನ್ಯಧರ್ಮಗಳ ಸಂಚಿದೆಯಾ? ಇಂಥಾದ್ದೊಂದು ಅಪಚಾರ ಎಸಗಿದ್ದರ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆಯಾ? ಇಂಥಾದ್ದೊಂದು ಮಹಾ ಪ್ರಮಾದ ಬೇಕಂತಲೇ ಮಾಡಿದ್ದಾ? ದುರುದ್ದೇಶವಿಟ್ಟುಕೊಂಡೇ ಪ್ರಾಣಿಕೊಬ್ಬು ತುಂಬಿ ದೇವರಿಗೆ, ಭಕ್ತರಿಗೆ ದ್ರೋಹ ಬಗೆದುಬಿಟ್ರಾ? ಎಲ್ಲಕ್ಕಿಂತ ಮುಖ್ಯಾವಾಗಿ.. ಪ್ರಾಣಿಕೊಬ್ಬು ತುಂಬಿದ ಲಡ್ಡುವನ್ನು ತಿಂದ ಭಕ್ತರು ಈಗೇನು ಮಾಡ್ಬೇಕು? ಅನ್ನೋ ಪ್ರಶ್ನೆಗಳು ಕಾಡುತ್ತಿದೆ.

publive-image

ತಿಮ್ಮಪ್ಪನ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ತುಂಬಿಸಿದ್ದು ಯಾರು?
ಅಪಚಾರ ಎಸಗಲು ಮಾಡಿದ್ದಾ? ಹಣದಾಸೆಗೆ ಮಾಡಿದ್ದಾ?
ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದ ಸಂದರ್ಭದಲ್ಲಿ ತಿಮ್ಮಪ್ಪನ ಪ್ರಸಾದವಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿ ಅಪಪ್ರಚಾರ ಮಾಡಿದ್ದಾರೆ. ಪ್ರಾಣಿಗಳ ಕೊಬ್ಬನ್ನು ತುಪ್ಪಕ್ಕೆ ಮಿಕ್ಸ್​ ಮಾಡಿ ಅದರಿಂದ ಪ್ರಸಾದದ ಲಡ್ಡು ತಯಾರಿಸಿದ್ದಾರೆ ಅಂತು ಚಂದ್ರಬಾಬು ನಾಯ್ಡು ದೊಡ್ಡ ಬಾಂಬ್ ಸಿಡಿಸಿದ್ರು. ಅದಾದ ಬಳಿಕ ಲ್ಯಾಬ್ ವರದಿ ಕೂಡ ಬಹಿರಂಗವಾಗಿತ್ತು. ಈಗ ಖುದ್ದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರೋ ಶ್ಯಾಮಲಾ ರಾವ್ ಸತ್ಯ ಒಪ್ಕೊಂಡಿದ್ದಾರೆ.

ನಾನು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡ ಬಳಿಕ ನನ್ನನ್ನು ಮುಖ್ಯಮಂತ್ರಿಗಳು ಕರೆಸಿಕೊಂಡಿದ್ರು. ತಿರುಪತಿ ಪ್ರಸಾದವಾದ ಲಡ್ಡು ಮತ್ತು ಅದಕ್ಕೆ ಬಳಸುವ ತುಪ್ಪದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ತಿಮ್ಮಪ್ಪನ ಲಡ್ಡು ಅತ್ಯಂತ ಪವಿತ್ರವಾದ, ಶ್ರೇಷ್ಠವಾದ ಪ್ರಸಾದ. ವೆಂಕಟೇಶ್ವರ ಸ್ವಾಮಿಗೆ ಲಡ್ಡುವನ್ನು ಪ್ರಸಾದವಾಗಿ ನೀಡಲಾಗುತ್ತೆ. ಹಾಗಾಗಿ, ಲಡ್ಡು ಪ್ರಸಾದದ ಗುಣಮಟ್ಟದಲ್ಲಿ ಯಾವುದೇ ರೀತಿಯ ಕೊರತೆ ಉಂಟಾದರೆ ಅದು ಅಪವಿತ್ರ ಮತ್ತು ಅಪಪ್ರಚಾರವೆಂದೇ ಪರಿಗಣಿಸಲಾಗುತ್ತೆ. ಹಾಗಾಗಿ, ವೆಂಕಟೇಶ್ವರ ಸ್ವಾಮಿ ದೇಗುಲದ ಪಾವಿತ್ರತೆ ಮತ್ತು ಲಡ್ಡು ಪ್ರಸಾದದ ಪಾವಿತ್ರತೆಯನ್ನು ಕಾಪಾಡಲು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಪರಿಶುದ್ಧವಾದ ಹಸುವಿನ ತುಪ್ಪವನ್ನು ಬಳಕೆ ಮಾಡುವಂತೆಯೂ ಸೂಚನೆ ನೀಡಿದ್ದರು.
- ಶ್ಯಾಮಲಾ ರಾವ್, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ

publive-image

ನೂರಾರು ವರ್ಷಗಳಿಂದ ಜಗತ್ತಲ್ಲಿ ಏನೇನೋ ಬದಲಾಯ್ತು.. ಆದ್ರೆ ತಿಮ್ಮಪ್ಪನ ಲಡ್ಡು ಪ್ರಸಾದದ ರುಚಿ ಮತ್ತು ಶಕ್ತಿ ಮಾತ್ರ ಬದಲಾಗಲೇ ಇಲ್ಲ ಅನ್ನೋ ಮಾತಿತ್ತು. ಆದ್ರೆ, ಕಳೆದ ಕೆಲ ಸಮಯದಿಂದ ತಿಮ್ಮಪ್ಪನ ಲಡ್ಡುವಿನ ಬಗ್ಗೆ ಭಕ್ತರಲ್ಲಿ ಸಣ್ಣದೊಂದು ಪ್ರಶ್ನೆ ಹುಟ್ಟಿತ್ತು. ಮೊದಲಿನ ರುಚಿ ಇಲ್ವಲ್ಲಾ? ಇದು ತಿಮ್ಮಪ್ಪನ ಪ್ರಸಾದ ಅಂತಲೇ ಅನ್ನಿಸ್ತಿಲ್ವಲ್ಲಾ ಅನ್ನೋ ಗುಮಾನಿ ಶುರುವಾಗಿತ್ತು. ಎಲ್ಲರೂ ತಮ್ಮ ತಮ್ಮಲ್ಲೇ, ತಮ್ಮವರ ನಡುವೆ ಈ ಬಗ್ಗೆ ಚರ್ಚೆ ಮಾಡ್ತಿದ್ರೆ ಹೊರತು. ದೊಡ್ಡಮಟ್ಟದಲ್ಲಿ ಧ್ವನಿ ಎತ್ತುತ್ತಿರಲಿಲ್ಲ. ಬಟ್, ಈ ಲಡ್ಡುವಿನ ಬಗೆಗಿನ ಚರ್ಚೆ ವಿಚಾರ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಕಿವಿಗೂ ಬಿದ್ದಿತ್ತು ಅನ್ಸತ್ತೆ. ತಕ್ಷಣವೇ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕರೆಸಿಕೊಂಡು ಚರ್ಚೆ ಮಾಡಿದ್ರಂತೆ. ಲಡ್ಡುವಿನ ಪಾವಿತ್ರ್ಯತೆ ಕೆಡಿಸಿರೋ ವಿಚಾರ ಬಯಲಾಗಿರೋದ್ರ ಮೊದಲ ಅಧ್ಯಾಯವೇ ಈ ಭೇಟಿ.

ತಿಮ್ಮಪ್ಪ ಕೇವಲ ಒಂದು ರಾಜ್ಯ, ಈ ದೇಶಕ್ಕೆ ಸೀಮಿತವಾದ ದೇವರಲ್ಲ. ವೆಂಕಟೇಶ್ವರನಿಗೆ ಜಗತ್ತಿನಾದ್ಯಂತ ಭಕ್ತರಿದ್ದಾರೆ. ಅದರಲ್ಲೂ, ತಿಮ್ಮಪ್ಪನ ಸನ್ನಿಧಿಗೆ ಬಂದು ಲಡ್ಡು ಸೇವಿಸಿ ಪರಮಾನಂದ ಪಡುವ ಕೋಟ್ಯಾಂತರ ಭಕ್ತಬಳಗವಿದೆ. ಅಂಥಾ ಪ್ರಸಾದದ ಕ್ವಾಲಿಟಿ ಕಡಿಮೆಯಾಗ್ತಿದೆ ಎಂಬ ಸುದ್ದಿಗಳು ಭಾರೀ ಕಸಿವಿಸಿ ಮಾಡಿದ್ವು. ಈ ವಿಚಾರದ ಬಗ್ಗೆ ಟಿಟಿಡಿ ಇಓ ಬಳಿ ಆಂಧ್ರ ಸಿಎಂ ಪ್ರಶ್ನೆ ಮಾಡಿದ್ರಂತೆ. ತಕ್ಷಣ ಅಲರ್ಟ್ ಆಗುವಂತೆ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ರಂತೆ.

ಪರಿಶುದ್ಧ ತುಪ್ಪವನ್ನು ನೀಡುವಂತೆ ಎಲ್ಲಾ ಕಾಂಟ್ರ್ಯಾಕ್ಟರ್‌ಗಳಿಗೂ ಸೂಚಿಸಿದೆವು. ಅಕಸ್ಮಾತ್ ಕಡಿಮೆ ಕ್ವಾಲಿಟಿ ತುಪ್ಪವನ್ನು ಪೂರೈಸಿದರೆ ಬ್ಲಾಕ್‌ಲಿಸ್ಟ್‌ಗೆ ಹಾಕುವುದಾಗಿ ಎಚ್ಚರಿಕೆ ಕೊಟ್ಟೆವು. ಆ ಬಳಿಕ ಎಲ್ಲರೂ ಉತ್ತಮ ಗುಣಮಟ್ಟದ ತುಪ್ಪವನ್ನೇ ನೀಡಲು ಪ್ರಾರಂಭಿಸಿದರು. ಆದರೆ, ತಮಿಳುನಾಡು ಮೂಲದ ಒಬ್ಬ ಸಪ್ಲೈಯರ್ ಮಾತ್ರ ಕಡಿಮೆ ಗುಣಮಟ್ಟದ ತುಪ್ಪವನ್ನು ಸಪ್ಲೈ ಮಾಡಿದರು. ಹಾಗಾಗಿ, ಅನುಮಾನ ಬಂದು ನಾವು ಆ ಸ್ಯಾಂಪಲ್ ಅನ್ನು ಗುಜರಾತ್‌ನ ಎನ್‌ಡಿಡಿಬಿ ಲ್ಯಾಬ್‌ಗೆ ಕಳುಹಿಸಿಕೊಟ್ಟೆವು.
- ಶ್ಯಾಮಲಾ ರಾವ್, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ವಾಮಲಾ ರಾವ್‌ರನ್ನು ಕರೆದು ಸೂಚನೆ ಕೊಟ್ಟ ಬಳಿಕ ಲಡ್ಡುವಿನ ಸ್ಯಾಂಪಲ್‌ಗಳನ್ನು ಕಳುಹಿಸಿಕೊಡಲಾಗುತ್ತೆ. ಅವುಗಳಲ್ಲಿ ಕೆಲವು ಲಡ್ಡುಗಳ ಸ್ಯಾಂಪಲ್‌ಗಳಲ್ಲಿ ಪ್ರಾಣಿಗಳ ಕೊಬ್ಬು ಇರೋದು ಪತ್ತೆಯಾಗುತ್ತೆ. ಆ ವರದಿ ನೋಡುತ್ತಲೇ ನಮಗೆಲ್ಲಾ ಶಾಕ್ ಆಯ್ತು ಎಂದಿದ್ದಾರೆ ಟಿಟಿಡಿ ಇಓ ಶ್ಯಾಮಲಾ ರಾವ್.

publive-image

ವರದಿ ನಿಜಕ್ಕೂ ಆಘಾತ ತಂದಿತ್ತು. ಲ್ಯಾಬ್ ವರದಿ ಪ್ರಕಾರ ಎರಡು ರೀತಿಯಲ್ಲಿ ಕಲಬೆರಕೆಯಾಗಿದೆ. ಒಂದು ಸಸ್ಯಜನ್ಯ ಕೊಬ್ಬಿನಿಂದ ಕಲಬೆರಕೆಯಾಗಿದೆ ಅನ್ನೋದು. ಮತ್ತೊಂದು, ಪ್ರಾಣಿಗಳ ಕೊಬ್ಬಿನಿಂದ ಕಲಬೆರಕೆಯಾಗಿದೆ ಅನ್ನೋದು ಗೊತ್ತಾಗಿದೆ.
- ಶ್ಯಾಮಲಾ ರಾವ್, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ

ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರಕೆಯಾಗಿರೋ ಸಂಗತಿ ಸ್ಫೋಟಗೊಂಡಿತು ಅನ್ನೋದು ಟಿಟಿಡಿ ಇಓ ಕೊಟ್ಟಿರೋ ಮಾಹಿತಿ. ಅಷ್ಟಕ್ಕೂ.. ಗುಜರಾತ್‌ನ ಆ ಲ್ಯಾಬ್ ರಿಪೋರ್ಟ್‌ನಲ್ಲಿರೋ ಪ್ರಮುಖ ಅಂಶಗಳು ಯಾವ್ಯಾವು ಅನ್ನೋದನ್ನೇ ತೋರಿಸ್ತೀವಿ ನೋಡಿ.

ಪ್ರಾಣಿ ಕೊಬ್ಬಿನ 'ಪ್ರಸಾದ'!
ಲ್ಯಾಬ್ ವರದಿಯಲ್ಲಿ ಕಲಬೆರಿಕೆ ತುಪ್ಪ ಎಂಬುದು ದೃಢಪಟ್ಟಿದೆ
ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ಹಂದಿಯ ಕೊಬ್ಬು
ಪಾಮಾಯಿಲ್, ಸೋಯಾಬಿನ್ ಎಣ್ಣೆ ಇರುವುದು ದೃಢಪಟ್ಟಿದೆ

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಹೇಳಿರುವಂತೆ ಈ ಹಿಂದೆ ಅಧಿಕಾರದಲ್ಲಿದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರ 5 ಕಂಪನಿಗಳಿಗೆ ತುಪ್ಪವನ್ನು ಪೂರೈಸೋದಕ್ಕೆ ಕಾಂಟ್ರ್ಯಾಕ್ಟ್ ನೀಡಿತ್ತು. ಆ ಪೈಕಿ ತಮಿಳುನಾಡು ಮೂಲದ ಎಆರ್ ಡೇರಿ ಲಿಮಿಟೆಡ್ ಹೆಸರಿನ ಕಂಪನಿಯು ಪೂರೈಸಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರೋದು ಧೃಢಪಟ್ಟಿದೆ. ಹಾಗಾದ್ರೆ, ತಮಿಳುನಾಡು ಮೂಲದ ಆ ಕಂಪನಿ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬೆರಕೆ ಮಾಡಿದ್ದು ಲಾಭ ಹೆಚ್ಚಿಸಿಕೊಳ್ಳೋ ದುರುದ್ದೇಶದಿಂದಲಾ? ಅಥವಾ ಇದರ ಹಿಂದೆ ಬೇರೆಯದ್ದೇ ಸಂಚಿದೆಯಾ? ಈ ಚರ್ಚೆ ಶುರುವಾಗಿರೋ ಹೊತ್ತಲ್ಲೇ ಆಂಧ್ರದ ಆಡಳಿತ ಪಕ್ಷವಾದ ಟಿಡಿಪಿ ಸಮೇತ ಹಲವರು ಜಗನ್ ಮೋಹನ್ ವಿರುದ್ಧವೇ ಹರಿಹಾಯ್ದಿದ್ದಾರೆ. ಜಗನ್ ಮೋಹನ್ ತಿರುಪತಿಯ ಪಾವಿತ್ರ್ಯತೆ ಹಾಳು ಮಾಡೋದಕ್ಕೆ ಇಂಥಾ ಸಂಚು ಮಾಡಿದ್ದಾರೆಂದು ನೇರ ಆರೋಪ ಮಾಡ್ತಿದ್ದಾರೆ.

publive-image

ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ತುಂಬಿ ದೇಗುಲಕ್ಕೆ ಅಪಪ್ರಚಾರ ಎಸಗಿದ್ದಾರೆಂಬ ಆರೋಪಗಳ ವಿರುದ್ಧ ವೈಎಸ್ ಜಗನ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೀತಿದೆ. ತಕ್ಷಣವೇ ತನಿಖೆಯ ಮೇಲ್ವಿಚಾರಣೆ ನಡೆಸಬೇಕು ಅಂತಾ ಆಂಧ್ರ ಹೈಕೋರ್ಟ್‌ಗೆ ಮನವಿ ಮಾಡ್ಕೊಂಡಿದ್ದಾರೆ. ಅಲ್ಲಾ, ಲ್ಯಾಬ್‌ ವರದಿಯಲ್ಲೇ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಇರೋದು ಧೃಢವಾಗಿರುವಾಗ.. ಜಗನ್ ಈ ರೀತಿ ಯಾಕ್ ಹೇಳ್ತಿದ್ದಾರೆ ಅನ್ನೋ ಪ್ರಶ್ನೆ ಹುಟ್ಬೋದು. ಬಟ್, ಟಿಟಿಡಿ ಯಾವ ಲ್ಯಾಬ್‌ನಿಂದ ಲಡ್ಡು ಸ್ಯಾಂಪಲ್ ಪರೀಕ್ಷೆ ಮಾಡಿಸಿದ್ಯೋ ಆ ಲ್ಯಾಬ್ ಬಗ್ಗೆಯೇ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಟಿಟಿಡಿ ಲಡ್ಡುಗಳ ಗುಣಮಟ್ಟ ಪರಿಶೀಲಿಸೋಕೆ 1800 ಕಿಮೀ ದೂರದಲ್ಲಿರೋ ಗುಜರಾತ್‌ನ ಲ್ಯಾಬ್‌ಗೆ ಏಕೆ ಕಳುಹಿಸಿಕೊಟ್ರು. ಬೇರ್ಯಾವುದೇ ಲ್ಯಾಬ್‌ಗಳು ಇರಲಿಲ್ವಾ ಎಂಬ ಅನುಮಾನದ ಮಾತುಗಳನ್ನಾಡ್ತಿದ್ದಾರೆ. ಬಟ್ ಈ ಪ್ರಶ್ನೆಗೂ ಕೂಡ ಟಿಟಿಡಿ ಇಓ ಸ್ಪಷ್ಟನೆ ನೀಡಿದ್ದಾರೆ. ಸ್ಥಳೀಯವಾಗಿ ಗುಣಮಟ್ಟ ಪತ್ತೆ ಹಚ್ಚೋ ಲ್ಯಾಬ್‌ಗಳು ಇರಲಿಲ್ಲ ಅಂತಾ ವಿವಾದದ ಜ್ವಾಲಾಮುಖಿ ಸ್ಫೋಟಗೊಳ್ಳೋ ಮೊದಲೇ ತಣ್ಣಗಾಗಿಸಿದ್ದಾರೆ. ಈ ಎಲ್ಲಾ ವಾದ-ಪ್ರತಿವಾದ, ವಾಕ್ಸಮರದ ನಡುವೆ ಎಲ್ಲರನ್ನೂ ಕಾಡುತ್ತಿರೋ ಆತಂಕ, ಕಳವಳ ಏನ್ ಗೊತ್ತಾ? ಪವಿತ್ರ ಲಡ್ಡು ಪ್ರಸಾದದಲ್ಲಿ, ತಿಮ್ಮಪ್ಪನ ಕ್ಷೇತ್ರದಲ್ಲಿ ಅಪಚಾರವಾಗಿದ್ದು. ಆ ಕೊಬ್ಬು ತುಂಬಿದ ಲಡ್ಡುಗಳನ್ನು ಇದಾಗಲೇ ಅಸಂಖ್ಯ ಭಕ್ತರು ಸೇವಿಸಿದ್ದು ಮುಂದೇನು ಅನ್ನೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment