newsfirstkannada.com

ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್‌ ಸಾವಿಗೆ ಕಾರಣವೇನು?

Share :

Published April 14, 2024 at 2:01pm

  ಸೌಂದರ್ಯ ಜಗದೀಶ್ ಮಗಳ ಮದುವೆಗೆ ಆಗಮಿಸಿದ್ದ ಹಲವು ತಾರೆಯರು

  ನಿರ್ಮಾಪಕರ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್‌ಗೆ ಒಳಗಾದ ಸ್ಯಾಂಡಲ್‌ವುಡ್‌

  ಮಗಳ ಮದುವೆ ಟೈಂನಲ್ಲಿ ಅವರ ವೈಯಕ್ತಿಕ ನೋವುಗಳು ನುಂಗಿಕೊಂಡಿದ್ರಾ?

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ದಿಢೀರ್ ಸಾವು ಇಡೀ ಸ್ಯಾಂಡಲ್‌ವುಡ್‌ಗೆ ಶಾಕಿಂಗ್ ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದ ಸೌಂದರ್ಯ ಜಗದೀಶ್ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಕೆಲವೇ ತಿಂಗಳ ಹಿಂದೆ ನಿರ್ಮಾಪಕ ಸೌಂದರ್ಯ ಜಗದೀಶ್ ತನ್ನ ಮಗಳ ಮದುವೆ ಮಾಡಿದ್ದರು. ಆರತಕ್ಷತೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಆಗಮಿಸಿದ್ದರು. ನವವಧು-ವರರಿಗೆ ಆತ್ಮೀಯ ಶುಭಾಶಯವನ್ನು ಕೋರಿದ್ದರು. ಸೌಂದರ್ಯ ಜಗದೀಶ್ ಮಗಳ ಮದುವೆಗೆ ಆಗಮಿಸಿದ್ದ ಸ್ಯಾಂಡಲ್‌ವುಡ್‌ ತಾರೆಯರು ಇಂದು ಅವರ ಸಾವಿನ ಸುದ್ದಿ ಕೇಳಿ ದಿಗ್ಭ್ರಾಂತರಾಗಿದ್ದಾರೆ.

ಇದನ್ನೂ ಓದಿ: VIDEO: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ಸುತ್ತ ಅನುಮಾನ.. ಅಸಲಿಗೆ ನಡೆದಿದ್ದೇನು?

ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಹಲವಾರು ಮಂದಿ ಜಗದೀಶ್ ಯಾವಾಗಲೂ ನಗು ಮುಖದಲ್ಲಿ ಇರುತ್ತಿದ್ದ ವ್ಯಕ್ತಿ. ಈ ವಯಸ್ಸಿಗೆ ನಿಧನರಾಗ್ತಾರೆ ಅಂದುಕೊಂಡಿರಲಿಲ್ಲ. ಅವ್ರು ತುಂಬಾ ಜಂಟಲ್ ಮನ್ ಆಗಿದ್ದವರು. ಅವರಿಗೆ ಹೀಗೆ ಆಗುತ್ತೆ ಅಂದುಕೊಂಡಿರಲಿಲ್ಲ. ಮಗಳ ಮದುವೆ ಟೈಂನಲ್ಲಿ ಅವರ ವೈಯಕ್ತಿಕ ನೋವುಗಳು ಏನಿತ್ತು ಅಂತ ನಮಗೆ ಗೊತ್ತಾಗಲಿಲ್ಲ. ಕಷ್ಟ ಪಟ್ಟು ಶ್ರೀಮಂತ ಆದ ನಿರ್ಮಾಪಕ. ಒಂಚೂರು ಅಹಂಕಾರ ಇಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅವರು ಒಂದೊಳ್ಳೆ ಕೊಡುಗೆ ಕೊಟ್ಟಿದ್ದಾರೆ ಎಂದು ಸ್ಮರಿಸಿಕೊಂಡಿದ್ದಾರೆ.

ಸದ್ಯ ಜಗದೀಶ್ ಕುಟುಂಬಸ್ಥರಿಂದ ದೂರು ಪಡೆದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆತ್ಮಹತ್ಯೆ ಬಗ್ಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು, ಸೌಂದರ್ಯ ಜಗದೀಶ್ ಅವರ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಸಿನಿಮಾ ರಂಗದ ಹಲವು ನಟ, ನಟಿಯರು ಸೌಂದರ್ಯ ಜಗದೀಶ್ ಅವರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್‌ ಸಾವಿಗೆ ಕಾರಣವೇನು?

https://newsfirstlive.com/wp-content/uploads/2024/04/Soundarya-Jagadish-2.jpg

Load More