ಆಹಾ ನನ್ನ ಮದುವೆಯಂತೆ.. ಅಬ್ದು ರೋಝಿಕ್‌ಗೆ ಕೈ ಕೊಟ್ಟಳಾ ಆ ಹುಡುಗಿ; ಕಾರಣವೇನು? VIDEO

author-image
admin
Updated On
ಆಹಾ ನನ್ನ ಮದುವೆಯಂತೆ.. ಅಬ್ದು ರೋಝಿಕ್‌ಗೆ ಕೈ ಕೊಟ್ಟಳಾ ಆ ಹುಡುಗಿ; ಕಾರಣವೇನು? VIDEO
Advertisment
  • ಏಪ್ರಿಲ್‌ನಲ್ಲಿ ಅಬ್ದುಗೆ 19 ವರ್ಷದ ಅಮಿರಾ ಜೊತೆ ಎಂಗೇಜ್‌ಮೆಂಟ್
  • ಅಬ್ದು ಪ್ರೀತಿಸುತ್ತಿದ್ದ ಅಮಿರಾ ಮುಖವನ್ನು ರಿವೀಲ್ ಮಾಡಿರಲಿಲ್ಲ
  • ಅಬ್ದು, ಅಮಿರಾ ಬೇರೆಯಾಗಲು ಮುಖ್ಯ ಕಾರಣ ಏನು ಗೊತ್ತಾ?

ತನ್ನ ಮುಗ್ಧತೆ ಹಾಗೂ ಕ್ಯೂಟ್‌ನೆಸ್‌ನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದ ಅಬ್ದು ರೋಝಿಕ್ ಲವ್ ಬ್ರೇಕಪ್‌ ಆಗಿದೆ. ನನಗೆ ಎಂಗೇಜ್‌ಮೆಂಟ್ ಆಯ್ತು.. ನಾನು ಮದುವೆ ಆಗುತ್ತಿದ್ದೇನೆ ಎಂದು ಅನೌನ್ಸ್ ಮಾಡಿದ್ದ ಅಬ್ದು ಈಗ ತಾನೇ ಮದುವೆ ಕ್ಯಾನ್ಸಲ್ ಆದ ಕಾರಣವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ನೋಡ್ತಾ ಇರು ನಿನ್ನ ಗರ್ಭಿಣಿ ಮಾಡ್ತೀನಿ.. ವರುಣ್ ಆರಾಧ್ಯ, ರೀಲ್ಸ್ ರಾಣಿ ಚಾಟಿಂಗ್ ರಹಸ್ಯ ಬಯಲು! 

ಅಬ್ದು ರೋಝಿಕ್ ತಜಕೀಸ್ತಾನದ ಫೇಮಸ್ ಸಿಂಗರ್‌. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಅಬ್ದು ಹಿಂದಿಯ ಬಿಗ್‌ ಬಾಸ್ ಸೀಸನ್ 16ರ ಸ್ಪರ್ಧಿ ಕೂಡ ಹೌದು. ಅಬ್ದುಗೆ ಈಗ 20 ವರ್ಷ ವಯಸ್ಸು.
ಕಳೆದ ಏಪ್ರಿಲ್ ತಿಂಗಳಲ್ಲಿ ಅಬ್ದು 19 ವರ್ಷದ ಅಮಿರಾ ಎಂಬಾಕೆಯ ಜೊತೆ ಎಂಗೇಜ್‌ಮೆಂಟ್ ಆಗುವ ವಿಷಯ ತಿಳಿಸಿದ್ದರು. ಅಬ್ದು ಪ್ರೀತಿಸುತ್ತಿದ್ದ ಅಮಿರಾ ಮುಖವನ್ನು ರಿವೀಲ್ ಮಾಡಿರಲಿಲ್ಲ. ಆದ್ರೆ ಅಮಿರಾ ಓಲ್ಡ್ ಶಾರ್ಜಾದ ನಿವಾಸಿ ಎನ್ನಲಾಗಿತ್ತು.

publive-image

ಅಬ್ದು ಕಳೆದ ಜುಲೈ ತಿಂಗಳಲ್ಲೇ ಮದುವೆಯಾಗಬೇಕಿತ್ತು. ಆದರೆ ದುಬೈನಲ್ಲಿ ಐತಿಹಾಸಿಕ ಬಾಕ್ಸಿಂಗ್ ಫೈಟ್ ನಡೆಯುತ್ತಿದ್ದರಿಂದ ಮುಂದೂಡಿಕೆ ಮಾಡಲಾಗಿತ್ತು. ಇದೀಗ ತನ್ನ ಮದುವೆ ಮುರಿದು ಬಿದ್ದಿದೆ ಅನ್ನೋ ಸುದ್ದಿಯನ್ನ ಅಬ್ದು ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾವಿಬ್ಬರು ಬೇರೆಯಾಗಲು ಮುಖ್ಯ ಕಾರಣ ಕಲ್ಚರಲ್ ಡಿಫರೆನ್ಸಸ್ ಅಂದ್ರೆ ಸಾಂಸ್ಕೃತಿಕವಾಗಿ ಭಿನ್ನಾಭಿಪ್ರಾಯ ಮೂಡಿದೆ. ನನಗೂ ಈ ನಿರ್ಧಾರ ಕೈಗೊಳ್ಳುವುದು ಬಹಳ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.


">September 18, 2024

ಅಬ್ದು ರೋಝಿಕ್‌ ಹೇಳಿದ್ದೇನು?
ಹಾಯ್ ಗಾಯ್ಸ್.. ಎಲ್ಲರೂ ಹೇಗಿದ್ದೀರಾ. ಎಷ್ಟೊಂದು ಜನ ಲವ್ ಬ್ರೇಕಪ್ ಬಗ್ಗೆ ಕೇಳುತ್ತಾ ಇದ್ದೀರಾ. ಹೌದು ಜೀವನದಲ್ಲಿ ಹೀಗೆಲ್ಲಾ ಆಗುತ್ತೆ. ನಾವು ಬಹಳಷ್ಟು ಸಮಯ ಒಟ್ಟಿಗೆ ಕಳೆಯಬೇಕು. ಒಟ್ಟಿಗೆ ಬಹಳಷ್ಟು ಮಾತನಾಡಬೇಕು. ಬಹಳಷ್ಟು ಸಮಯ ಜೊತೆಯಲ್ಲಿದ್ದಾಗ ಇದ್ದಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ.

ಜೀವನದಲ್ಲಿ ಒಮ್ಮೊಮ್ಮೆ ಹೀಗೆಲ್ಲಾ ಆಗುತ್ತೆ. ಆಗಿದ್ದೆಲ್ಲಾ ಆಗಿ ಹೋಯ್ತು. ನನಗೀಗ ನಿಮ್ಮ ಬೆಂಬಲದ ಅಗತ್ಯವಿದೆ. ನಿಮ್ಮ ಎಲ್ಲರ ಬೆಂಬಲ ಇದ್ರೆ ನಾನು ಹೆಂಡತಿಯನ್ನು ಹುಡುಕುತ್ತೇನೆ. ನನ್ನನ್ನು ಎಲ್ಲರೂ ಸಪೋರ್ಟ್ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment