newsfirstkannada.com

ಮನೆಯಲ್ಲಿ ಸಮಸ್ಯೆ ಇಲ್ಲ.. ಗಂಡನ ಕಿರುಕುಳವೂ ಇರಲಿಲ್ಲ; ಅಡ್ವೊಕೇಟ್ ಚೈತ್ರಾ ಸಾವಿಗೆ ಕಾರಣವೇನು?

Share :

Published May 12, 2024 at 4:10pm

    ವಕೀಲೆ ಚೈತ್ರಾ ಆತ್ಮಹತ್ಯೆಗೆ ಶರಣಾಗಿದ್ದೇಕೆ ಅನ್ನೋದೇ ದೊಡ್ಡ ಪ್ರಶ್ನೆ!

    ಚೈತ್ರಾ ಡೆತ್​ನೋಟ್​, ಮೊಬೈಲ್ ಸೀಜ್ ಮಾಡಿರುವ ಪೊಲೀಸರು

    ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಚೈತ್ರಾಗೆ ಏನಾಯ್ತು?

ಬೆಂಗಳೂರು: ಮನೆಯಲ್ಲಿ ಸಮಸ್ಯೆ ಇರಲಿಲ್ಲ. ಗಂಡನ ಕಿರುಕುಳವೂ ಇರಲಿಲ್ಲ. ಆದರೂ ವಕೀಲೆ ಚೈತ್ರಾ ಸಾವಿನ್ನಪ್ಪಿದ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆ ಸಂಬಂಧ ಸಂಜಯನಗರ ಪೊಲೀಸರು UDR (Unnatural death report) ದಾಖಲು ಮಾಡಿದ್ದಾರೆ. ಚೈತ್ರಾ ಅವರ ಡೆತ್‌ನೋಟ್‌ ಸಿಕ್ಕ ಬಳಿಕ ಪೊಲೀಸರಿಗೂ ಈ ಪ್ರಕರಣ ಸವಾಲಾಗಿದೆ.

ಅಡ್ವೊಕೇಟ್ ಚೈತ್ರಾ ಅವರ ಸಾವಿಗೆ ನಿಖರ ಕಾರಣವಿಲ್ಲದೆ, ಆತ್ಮಹತ್ಯೆಗೆ ಶರಣಾಗಿದ್ದೇಕೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಚೈತ್ರಾ ಡೆತ್​ನೋಟ್​ನಲ್ಲಿ ನನ್ನ ಪತಿ ಒಳ್ಳೆಯವರು ಎಂದು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನೆಯಲ್ಲಿ ಸಮಸ್ಯೆ ಇರಲಿಲ್ಲ, ಗಂಡ-ಹೆಂಡತಿ ಸಂಬಂಧ ಚೆನ್ನಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: 26 ವರ್ಷದ ಬದುಕಿನಲ್ಲಿ ದುರಂತ.. ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ಅಭಿಮಾನಿ 

ಚೈತ್ರಾ ಅವರ ಡೆತ್​ನೋಟ್ ಸಿಕ್ಕ ಬಳಿಕ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಡೆತ್​ನೋಟ್, ಮೊಬೈಲ್ ಸೀಜ್ ಮಾಡಿರೋ ಅಗತ್ಯಬಿದ್ರೆ ಮೊಬೈಲ್ ರಿಟ್ರೀವ್​​ ಗೊಳಿಸಲು ಮುಂದಾಗಿದ್ದಾರೆ.
ಚೈತ್ರಾ ಅವರ ಮರಣೋತ್ತರ ಪರೀಕ್ಷೆ ವರದಿ ನಂತರ ಮೊಬೈಲ್ ರಿಟ್ರಿವ್ ಮಾಡುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಚೈತ್ರಾ ಅವರು ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯಲ್ಲೇ ಚೈತ್ರಾ ಅವರದ್ದು ಕೊಲೆಯೋ ನಿಜವಾಗಿಯೂ ಆತ್ಮಹತ್ಯೆಯೋ ಅನ್ನೋದು ಗೊತ್ತಾಗಲಿದೆ.

ವೃತ್ತಿಯಲ್ಲಿ ವಕೀಲೆಯಾಗಿದ್ದ ಚೈತ್ರಾ ಅವರು ಸ್ಪೋರ್ಟ್ಸ್ & ಮಾಡಲಿಂಗ್​ನಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ರು. ಚೈತ್ರಾ ಪತಿ ಶಿವಕುಮಾರ್ KAS ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಚೈತ್ರಾ ಅವರ ಸಾವಿಗೆ ಅವರ ಪರಿಚಯಸ್ಥರು ಆಘಾತಗೊಂಡಿದ್ದಾರೆ.

ಚೈತ್ರಾ ಅವರು ಸಾವಿಗೂ ಮುನ್ನ ಕಾಲ್ ಡಿಟೇಲ್ಸ್ ಹಾಗೂ ವಾಟ್ಸಾಫ್ ಚಾಟಿಂಗ್ ಅನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಸೀಜ್ ಆಗಿರೋ ಚೈತ್ರಾ ಮೊಬೈಲ್​​ ಅನ್ನು ರಿಟ್ರಿವ್ ಮಾಡಿದ ಮೇಲೆ ಅಸಲಿ ಸತ್ಯ ಏನು ಅನ್ನೋದು ಹೊರ ಬರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಯಲ್ಲಿ ಸಮಸ್ಯೆ ಇಲ್ಲ.. ಗಂಡನ ಕಿರುಕುಳವೂ ಇರಲಿಲ್ಲ; ಅಡ್ವೊಕೇಟ್ ಚೈತ್ರಾ ಸಾವಿಗೆ ಕಾರಣವೇನು?

https://newsfirstlive.com/wp-content/uploads/2024/05/Bng-Chaitra-Advocate-1.jpg

Load More