newsfirstkannada.com

ರೇಣುಕಾಸ್ವಾಮಿ ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ; ವಿಕೃತ ಮುಖದ ಕರಾಳ ಸತ್ಯ ಬಯಲು

Share :

Published September 4, 2024 at 2:45pm

    ರೇಣುಕಾಸ್ವಾಮಿ ಸಾವಿಗೆ ಪವಿತ್ರಾ ಗೌಡ ಅವರೇ ಮೂಲ ಕಾರಣ?

    ಪವಿತ್ರಾ ಗೌಡ ಸೀರೆಯ ಫೋಟೋಗೆ ಕಾಮೆಂಟ್ ಮಾಡಿದ್ದ ರೇಣುಕಾ

    ದರ್ಶನ್‌ ಗ್ಯಾಂಗ್‌ ಹೊಡೆಯುವಾಗ ಪವಿತ್ರಾ ಗೌಡ ಕಿರುಚಾಡಿ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 17 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಪಾತ್ರ ಮತ್ತು ಆರೋಪಿಗಳ ವಿರುದ್ಧ ಲಭ್ಯವಾಗಿರುವ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಬರೋಬ್ಬರಿ 3991 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಅಷ್ಟೂ ಜನ ಆರೋಪಿಗಳ ಪಾತ್ರದ ಬಗ್ಗೆ ಮಾಹಿತಿ ದಾಖಲಿಸಲಾಗಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಪವಿತ್ರಾ ಗೌಡ ಅವರನ್ನೇ A1 ಮಾಡಲಾಗಿದೆ. ಅಂದ್ರೆ ರೇಣುಕಾಸ್ವಾಮಿ ಅವರ ಕೊಲೆ ಮಾಡಲು ಪವಿತ್ರಾ ಗೌಡ ಅವರೇ ಮೂಲ ಕಾರಣ. ಅಷ್ಟೇ ಅಲ್ಲದೇ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್ ಲಾಕ್‌ ಮಾಡಿದ್ದೇ ಈ ವಿಡಿಯೋ; ಶವದ ಮುಂದೆ ಸಂಭಾಷಣೆ! 

ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಅವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರಾ ಗೌಡ ಅವರು ಅಲ್ಲೇ ಇರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿದೆ. ಪವಿತ್ರಾ ಗೌಡ ಅವರ ಮೊಬೈಲ್ ಪಟ್ಟಣಗೆರೆ ಶೆಡ್‌ನಲ್ಲಿ ಆ್ಯಕ್ಟಿವ್ ಆಗಿದ್ದು, ಸಿಸಿಟಿವಿಯಲ್ಲೂ ಪವಿತ್ರಾ ಗೌಡ ಅವರು ಸೆರೆಯಾಗಿದ್ದಾರೆ.

ರೇಣುಕಾಸ್ವಾಮಿ ಕಾಮೆಂಟ್‌ ರಹಸ್ಯ!
ಚಿತ್ರದುರ್ಗದ ರೇಣುಕಾಸ್ವಾಮಿ A1 ಪವಿತ್ರಾ ಗೌಡ ಅವರ ಮೂರು ಫೋಟೋಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದ. ಪವಿತ್ರಾ ಗೌಡ ಅವರು ಸೀರೆಯಲ್ಲಿ ಹಾಕಿದ್ದ ಫೋಟೋಗೆ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ.

ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ!
A1 ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ಏನು ಮಾಡಿದ್ರು ಅನ್ನೋದು ಇತರೆ ಆರೋಪಿಗಳಿಂದ ಗೊತ್ತಾಗಿದೆ. ರೇಣುಕಾಸ್ವಾಮಿಯನ್ನು ಸಾಯಿಸಲು ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಇತರೆ ಆರೋಪಿಗಳು ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಅವರ ಪಾತ್ರ ದೃಢವಾಗಿದೆ.

ಇದನ್ನೂ ಓದಿ: ‘ಅಷ್ಟೊಂದು ಸಾಕ್ಷಿನಾ?’ ಜೈಲಲ್ಲಿ ದಂಗಾದ ದರ್ಶನ್.. ಚಾರ್ಜ್​ಶೀಟ್ ಪುಟಗಳ ಸಂಖ್ಯೆ ತಿಳಿದು ಹೇಳಿದ್ದೇನು? 

ರೇಣುಕಾಸ್ವಾಮಿ ಮೇಲೆ ದರ್ಶನ್‌ ಗ್ಯಾಂಗ್‌ನ ಪ್ರತಿಯೊಬ್ಬರೂ ಹೊಡೆಯುವಾಗ ಪವಿತ್ರಾ ಗೌಡ ನಿಂತು ಕಿರುಚಾಡುತ್ತಿದ್ದಾರೆ. ಬಿಡಬೇಡಿ, ಸಾಯಿಸಿ ಅವನನ್ನ ಅಂತ ಪವಿತ್ರಾ ಕೂಗಾಡಿದ್ದಾರೆ. ಆಕೆ ಹೇಳಿದ್ದಕ್ಕೆ ನಾವು ಹಲ್ಲೆ ಮಾಡಿದ್ದೇವೆ ಅಂತ ಇತರ ಆರೋಪಿಗಳು ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿಯನ್ನು ಬಿಡಬೇಡಿ ಸಾಯಿಸಿ ಅಂದಿದ್ದ ಪವಿತ್ರಾ ಗೌಡ ಅವರ ಹೇಳಿಕೆಯಿಂದಲೇ ಪವಿತ್ರಾ ಗೌಡ ಅವರನ್ನು ಪೊಲೀಸರು A1 ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ; ವಿಕೃತ ಮುಖದ ಕರಾಳ ಸತ್ಯ ಬಯಲು

https://newsfirstlive.com/wp-content/uploads/2024/09/Pavithra-gowda-Renukaswamy.jpg

Load More