/newsfirstlive-kannada/media/post_attachments/wp-content/uploads/2024/08/Jay-Shah.jpg)
ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ಗೆ ಜಯ್​​ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಅಧ್ಯಕ್ಷ ಪಟ್ಟವನ್ನೇರುವ ಮೂಲಕ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 35 ವರ್ಷ ವರ್ಷಕ್ಕೆ ಐಸಿಸಿ ಮುಖ್ಯಸ್ಥರಾಗಿರುವ 5ನೇ ಭಾರತೀಯ ಮತ್ತು ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಯೂ ಅವರ ಮೇಲಿದೆ.
ಇದೇ ಡಿಸೆಂಬರ್​​ನಲ್ಲಿ ಜಯ್​​ ಶಾ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೀಗ ಅವರ ಸಂಬಳ ಎಷ್ಟಿರಬಹುದು ಎಂಬ ಕುತೂಹಲತೆ ಎಲ್ಲರಲ್ಲಿ ಮನೆ ಮಾಡಿದೆ? ಅನೇಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಮಾಡುತ್ತಿದ್ದಾರೆ.
2019ರಲ್ಲಿ ಜಯ್​ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಜಯ್​​ ಶಾರವರು ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಜಿ ಮತ್ತು ಕಾರ್ಯದರ್ಶಿ ಎಲ್ಲಾ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಇಲ್ಲಿವರೆಗೆ ಅವರು ಅಧಿಕಾರದ ವೇಳೆ ಎಷ್ಟು ವೇತನ ಪಡೆಯುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ.
/newsfirstlive-kannada/media/post_attachments/wp-content/uploads/2024/08/JAY-SHAH-ICC-PRESIDENT.jpg)
ಇದನ್ನೂ ಓದಿ: ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ಇವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಟಿ..?
ಬಿಸಿಸಿಐ ಅವರಿಗೆ ಅನೇಕ ಸೇವೆಗಳನ್ನು ನೀಡಿದೆ. ದೇಶದಿಂದ ಅಂತರರಾಷ್ಟ್ರೀಯ ಸಭೆಗಳಲ್ಲಿ ಭಾಗವಹಿಸಲು, ಭಾರತವನ್ನು ಪ್ರತಿನಿಧಿಸಲು 82 ಸಾವಿರ ರೂಪಾಯಿಯನ್ನು ನೀಡುತ್ತದೆ. ಇನ್ನು ಭಾರತದಲ್ಲಿ ನಡೆಯುವ ಸಭೆಗಳಲ್ಲಿ ಭಾಗಿಯಾಗಲು 40 ಸಾವಿರ ರೂಪಾಯಿ ಸ್ಟೈಫಂಡ್​​ ನೀಡುತ್ತದೆ.
ಸಭೆಗಳನ್ನು ಹೊರತಾಗಿ ದೇಶದ ಒಳಗೆ ಪ್ರವೇಶಿಸಲು ಬಿಸಿಸಿಐ 30 ಸಾವಿರ ರೂಪಾಯಿಯನ್ನು ನೀಡುತ್ತದೆ. ಇದಲ್ಲದೆ ಮಂಡಳಿಯು ಐಷಾರಾಮಿ ಹೋಟೆಲ್​ ವಸತಿ, ವಿದೇಶಗಳಿಗೆ ಹೋಗುವಾಗ ಟಿಕೆಟ್​ ವ್ಯವಸ್ಥೆ ಮಾಡುತ್ತದೆ.
ಐಸಿಸಿ ಎಷ್ಟು ಪಾವತಿಸುತ್ತದೆ?
ಮಾಹಿತಿ ಪ್ರಕಾರ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಯಾವುದೇ ನಿರ್ದಿಷ್ಟ ವೇತನವಿಲ್ಲ. ಜವಾಬ್ದಾರಿ ಮತ್ತು ಕೆಲಸದ ಆಧಾರದ ಮೇಲೆ ಪಾವತಿಸುತ್ತದೆ ಎನ್ನಲಾಗುತ್ತಿದೆ. ಇನ್ನು ಐಸಿಸಿ ಸಭೆ, ಹೋಟೆಲ್​ ವಸತಿ, ಪ್ರಯಾಣದ ಟಿಕೆಟ್​​ ಇವುಗಳ ಕುರಿತಾಗಿ ಐಸಿಸಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us