/newsfirstlive-kannada/media/post_attachments/wp-content/uploads/2024/09/peacock-feather1.jpg)
ನವಿಲು ಗರಿ ಅಂದ್ರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನವಿಲು ಗರಿ ಅಂದ್ರೆ ಒಂಥರಾ ಇಷ್ಟ ಪಡ್ತಾರೆ. ನವಿಲು ಗರಿ ನೋಡಲು ಎಷ್ಟು ಚೆನ್ನಾಗಿ ಇರುತ್ತೆ ಅಲ್ವಾ? ನವಿಲು ಗರಿಯನ್ನು ನೋಡುತ್ತ ಇದ್ದರೆ ಹಾಗೇ ನೋಡುತ್ತಲೇ ಇರಬೇಕು ಅನಿಸುತ್ತದೆ. ಅದರಲ್ಲಿ ಇರುವ ಬಣ್ಣಗಳು ಕಣ್ಣುಗಳಿಗೆ ಒಂದು ತರ ತಂಪು ನೀಡುತ್ತದೆ.
/newsfirstlive-kannada/media/post_attachments/wp-content/uploads/2024/09/peacock-feather.jpg)
ಇದಕ್ಕಾಗಿಯೇ ಸಾಕಷ್ಟು ಮಂದಿ ನವಿಲು ಗರಿಯನ್ನು ಫೋನ್​ ಹಿಂದೆ, ಮನೆಯಲ್ಲಿ, ದೇವರ ಕೋಣೆಯಲ್ಲಿ ಅಷ್ಟೇ ಯಾಕೆ ಬುಕ್​ಗಳ ಮಧ್ಯೆ ಇಟ್ಟಕೊಳ್ಳುತ್ತಾರೆ. ಆದರೆ ಬುಕ್​ಗಳ ನಡುವೆ ನವಿಲು ಗರಿ ಇಟ್ಟುಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನೆ ಆಗುತ್ತೆ ಅಂತ ಮೊದಲು ತಿಳಿದುಕೊಳ್ಳಿ. ಪುಸ್ತಕಗಳ ಮಧ್ಯೆ ನವಿಲು ಗರಿಗಳನ್ನು ಇಡುವುದು ಹಿಂದೂ ಧರ್ಮದಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಸೌಂದರ್ಯ ಮತ್ತು ಸಮೃದ್ಧಿಯ ಸಂಕೇತವಾದ ನವಿಲನ್ನು ಹಿಂದೂ ಧರ್ಮದಲ್ಲಿ ಅತ್ಯುತ್ತಮ ಪಕ್ಷಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಪುಸ್ತಕದಲ್ಲಿ ನವಿಲು ಗರಿಗಳನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.
View this post on Instagram
ನಂಬಿಕೆ ಪ್ರಕಾರ..
ಭಗವಾನ್ ಕೃಷ್ಣ ನವಿಲು ಗರಿಗಳನ್ನು ಪ್ರೀತಿಸುವುದರಿಂದ ಅವುಗಳನ್ನು ನಿಮ್ಮ ಪುಸ್ತಕದಲ್ಲಿ ಇಟ್ಟುಕೊಳ್ಳುವುದು ಆತನ ಆಶೀರ್ವಾದ ಮತ್ತು ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಿಕ್ಕಂತೆ ಆಗುತ್ತದೆ. ಇದರ ಜೊತೆಗೆ ನಿಮ್ಮ ಕಲಿಕೆಯ ನಡುವೆ ಬರುವ ಅಡೆತಡೆಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ಅಧ್ಯಯನದಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ. ಇನ್ನು ಸುಖಾ ಸುಮ್ಮನೆ ಪುಸ್ತಕದಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಬಾರದು. ಮೊದಲು ನೀವು ಯಾವ ನವಿಲು ಗರಿಯನ್ನು ಇಟ್ಟುಕೊಂಡರೆ ಉತ್ತಮ ಅನ್ನೋದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಮುರಿದ ನವಿಲು ಗರಿಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಪುಸ್ತಕದಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳವು ಮೊದಲು ಅದಕ್ಕೆ ಏನಾದರು ಆಗಿದೆಯೇ ಅಂತ ಪರಿಶೀಲಿಸಬೇಕು.
/newsfirstlive-kannada/media/post_attachments/wp-content/uploads/2024/08/krishna1.jpg)
ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ಪಾಕಿಸ್ತಾನಕ್ಕೆ ಜಾಕ್‌ಪಾಟ್.. ಕೊನೆಗೂ ಐಶ್ವರ್ಯದ ಬಾಗಿಲು ತೆರೆಯಿತಾ? ಏನಿದರ ರಹಸ್ಯ?
ನವಿಲನ್ನು ಜ್ಞಾನ ಮತ್ತು ಕಲಿಕೆಯ ದೇವತೆಯಾದ ಸರಸ್ವತಿಯ ವಾಹನವೆಂದು ಹೇಳಲಾಗುತ್ತದೆ. ಆದ್ದರಿಂದ, ಪುಸ್ತಕದಲ್ಲಿ ನವಿಲು ಗರಿಯನ್ನು ಇಡುವುದರಿಂದ ನಿಮ್ಮ ಜ್ಞಾನ ಮತ್ತು ಕಲಿಕೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನವಿಲು ಗರಿಗಳು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತವೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಇದನ್ನು ಪುಸ್ತಕದಲ್ಲಿ ಇಡುವುದರಿಂದ ಏಕಾಗ್ರತೆ ಮತ್ತು ಗ್ರಹಣಶಕ್ತಿ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕುತ್ತದೆ. ಜೊತೆಗೆ ನವಿಲು ಗರಿಗಳನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಎಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ಪುಸ್ತಕದಲ್ಲಿ ಇಡುವುದು ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.
/newsfirstlive-kannada/media/post_attachments/wp-content/uploads/2024/08/krishna2.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us