ಇಂದು ಗ್ರಹಣ: ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ, ಎಷ್ಟು ಗಂಟೆಗಳ ಕಾಲ ಗೋಚರ ಆಗಲಿದೆ?

author-image
Ganesh
Updated On
ಇಂದು ಗ್ರಹಣ: ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ, ಎಷ್ಟು ಗಂಟೆಗಳ ಕಾಲ ಗೋಚರ ಆಗಲಿದೆ?
Advertisment
  • 50 ವರ್ಷಗಳ ಬಳಿಕ ದೀರ್ಘಕಾಲದ ಗ್ರಹಣ ಇವತ್ತು ಸಂಭವಿಸಲಿದೆ
  • ಸಂಪೂರ್ಣ ಸೂರ್ಯಗ್ರಹಣ ಎಂದರೆ ಏನು?
  • ಭಾರತದಲ್ಲಿ ಕೊನೆಯ ಬಾರಿಗೆ ಸೂರ್ಯಗ್ರಹಣ ಗೋಚರ ಆಗಿದ್ದು ಯಾವಾಗ?

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸಲಿದ್ದು, ಇದು ಸಂಪೂರ್ಣ ಸೂರ್ಯಗ್ರಹಣ ಆಗಿರಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಭಾಗವು ಗೋಚರಿಸುವುದಿಲ್ಲ. ಈ ಪರಿಸ್ಥಿತಿಯನ್ನು ಸೂರ್ಯಗ್ರಹಣ ಎಂದು ಕರೆಯುತ್ತೇವೆ.

ಈ ವರ್ಷದ ಸೂರ್ಯಗ್ರಹಣವು ತುಂಬಾನೇ ವಿಶೇಷವಾಗಿದೆ. ಉತ್ತರ ಅಮೆರಿಕಾದ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದ್ದು, ಗಂಟೆಗಳ ಕಾಲ ಆಕಾಶ ಮಂಡಲದಲ್ಲಿ ವಿಸ್ಮಯಕಾರಿಯ ವಿದ್ಯಮಾನ ಸಂಭವಿಸಲಿದೆ. ಸಂಪೂರ್ಣ ಸೂರ್ಯಗ್ರಹಣ ಎಂದರೆ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಭೂಮಿಗೆ ಕತ್ತಲೆ ಆವರಿಸುತ್ತದೆ.

publive-image

ಭಾರತದಲ್ಲಿ ಕಾಣಿಸುತ್ತದಾ..?
ಇಂದು ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸಲ್ಲ. ಅಮೆರಿಕ, ಮೆಕ್ಸಿಕೊ, ಕೆನಡಾ ಸೇರಿದಂತೆ ಉತ್ತರ ಅಮೆರಿಕದ ಹಲವು ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ ಎಂದು ನಾಸಾ (NASA) ತಿಳಿಸಿದೆ. ಸೂರ್ಯಗ್ರಹಣವು ಸುಮಾರು 6 ಗಂಟೆಗಳ ಕಾಲ ಇರುತ್ತದೆ. ಇಂದು ರಾತ್ರಿ 9.13 ರಿಂದ ನಾಳೆ ಬೆಳಗ್ಗೆ 2:22 ರವರೆಗೆ ಗೋಚರಿಸುತ್ತದೆ. ಈ ಅವಧಿಯಲ್ಲಿ ಮೆಕ್ಸಿಕೋದಲ್ಲಿ ದೀರ್ಘಕಾಲದವರೆಗೆ ಗೋಚರಿಸುತ್ತದೆ. ಅಂದರೆ 4 ನಿಮಿಷ 28 ಸೆಕೆಂಡುಗಳ ಕಾಲ ಇಲ್ಲಿ ಕಾಣಬಹುದು.

ಇದನ್ನೂ ಓದಿ : ಸೋಮವಾರ ಸೂರ್ಯಗ್ರಹಣ!! ಭಾರತದಲ್ಲಿ ಗೋಚರ ಆಗದಿದ್ದರೂ ಭಾರತೀಯರಿಗೆ ಕಾಡಿದೆ ಟೆನ್ಷನ್, ಟೆನ್ಷನ್..! ಯಾಕೆ ಗೊತ್ತಾ?

ಸಂಪೂರ್ಣ ಸೂರ್ಯಗ್ರಹಣದ ದೃಶ್ಯವು 2017ರಲ್ಲಿ ನಡೆದಿತ್ತು. ಆದರೆ ಅದು 2 ನಿಮಿಷ 42 ಸೆಕೆಂಡುಗಳ ಕಾಲ ಮಾತ್ರ ಇತ್ತು. ಇದು ಸಹ ವಿಶೇಷವಾಗಿ USAನಲ್ಲಿ ಗೋಚರಿಸಿತು. ಆದರೆ ಈ ಬಾರಿ ಸಂಭವಿಸುತ್ತಿರುವ ಸಂಪೂರ್ಣ ಸುದೀರ್ಘ ಸೂರ್ಯಗ್ರಹಣವು 50 ವರ್ಷಗಳಿಗೊಮ್ಮೆ ಘಟಿಸುತ್ತಿದೆ. ಇನ್ನು ಭಾರತದಲ್ಲಿ 2019ರಲ್ಲಿ ಕೊನೆಯ ಬಾರಿಗೆ ಸೂರ್ಯಗ್ರಹಣ ಗೋಚರಿಸಿತ್ತು.

NASAಗೆ ಸೂರ್ಯಗ್ರಹಣ ತುಂಬಾನೇ ಮುಖ್ಯ..!
ಈ ಸಂಪೂರ್ಣ ಗ್ರಹಣಕ್ಕೆ ಸಂಬಂಧಿಸಿದಂತೆ NASA ಹಲವು ಸಂಶೋಧನೆಗಳನ್ನ ನಡೆಸಲಿದೆ. ಈ ಸಮಯದಲ್ಲಿ ಪ್ರಾಣಿಗಳ ನಡವಳಿಕೆ ಮತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ. ವಿಜ್ಞಾನ ಲೋಕದಲ್ಲಿ 2017 ರಿಂದ ಅನೇಕ ಬದಲಾವಣೆಗಳು ಸಂಭವಿಸಿವೆ. ಇದಕ್ಕಾಗಿಯೇ ನಾಸಾ ಸ್ವತಃ ಎರಡು ಹೊಸ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ವರ್ಷದ ಸೂರ್ಯಗ್ರಹಣವನ್ನು ಅಧ್ಯಯನ ಮಾಡಲು NASA 5 ವಿಭಿನ್ನ ಸಂಶೋಧನಾ ಯೋಜನೆಗಳಿಗೆ ಧನಸಹಾಯ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment