/newsfirstlive-kannada/media/post_attachments/wp-content/uploads/2024/05/HD-Revanna.jpg)
ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅರೆಸ್ಟ್ ಆಗಿದ್ದಾರೆ. ಬಂಧನದಲ್ಲಿರುವ ರೇವಣ್ಣಗೆ ಎದುರಾಗಿರುವ ಸವಾಲುಗಳೇನು? ಮುಂದಿನ ಆಯ್ಕೆಗಳು ಏನೇನು ಅನ್ನೋ ವಿವರ ಇಲ್ಲಿದೆ.
ಬಂಧ ಮುಕ್ತಕ್ಕಾಗಿ ರೇವಣ್ಣ ಮುಂದಿನ ಆಪ್ಷನ್ ಏನು?
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ರೇವಣ್ಣಗೆ ರಾಹುಕಾಲ. ಪ್ರಕರಣದಲ್ಲಿ ಆರೋಪಿಯೋ ಅಪರಾಧಿಯೋ ಅನ್ನೋದು ಕೋರ್ಟ್ ತೀರ್ಮಾನಿಸಲಿದೆ.. ಮಾಜಿ ಸಚಿವರನ್ನ ನಾಲ್ಕು ದಿನಗಳ ಕಸ್ಟಡಿ ಪಡೆದ ಎಸ್‌ಐಟಿ, ವಿಚಾರಣೆಯೂ ನಡೆಸಿದೆ.. ಆದ್ರೆ, ಕಾನೂನು ಸಮರದಲ್ಲಿ ಗೆಲ್ಲುವ ಸವಾಲು ಹೊತ್ತಿದ್ದಾರೆ.
ಇದನ್ನೂ ಓದಿ:ಎಸ್‌ಐಟಿ ಬಂಧನದ ಬಳಿಕ ರೇವಣ್ಣ ಫಸ್ಟ್ ರಿಯಾಕ್ಷನ್.. ಭಾರೀ ಆಕ್ರೋಶ..!
ರೇವಣ್ಣ ಮುಂದಿನ ಆಯ್ಕೆಗಳೇನು?
- ಮೇ 8ರ ನಂತ್ರ ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ
- ಜಾಮೀನು ಅರ್ಜಿ ಸಲ್ಲಿಕೆಗೆ ಹೆಚ್.ಡಿ. ರೇವಣ್ಣ ಪರ ವಕೀಲರ ಸಿದ್ಧತೆ
- ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಹೊಸದಾಗಿ ಬೇಲ್ ಅರ್ಜಿ
- ಈಗಾಗಲೇ ಕಿಡ್ನಾಪ್ ಆಗಿದ್ದ ಸಂತ್ರಸ್ತೆಯನ್ನ ಪತ್ತೆ ಹಚ್ಚಿರುವ ಎಸ್‌ಐಟಿ
- ಕೇಸ್‌ಗೂ ರೇವಣ್ಣಗೂ ಸಂಬಂಧವಿಲ್ಲ ಅಂತ ವಾದ ಮಂಡಿಸುವುದು
- ಮತ್ತೆ ಜಾಮೀನು ವಜಾ ಆದ್ರೆ ಹೈಕೋರ್ಟ್ ಮೊರೆ ಹೋಗಬಹುದು
- ಹೈಕೋರ್ಟ್ ಜನಪ್ರತಿನಿಧಿಗಳ ಪೀಠದಲ್ಲಿ ಅರ್ಜಿ ಸಲ್ಲಿಸಲು ತಯಾರಿ
- ಎಲ್ಲವೂ ಈಗ ಕಿಡ್ನ್ಯಾಪ್ ಸಂತ್ರಸ್ತೆಯ ಹೇಳಿಕೆಯ ಮೇಲೆ ನಿರ್ಧಾರ
- ಸಂತ್ರಸ್ತೆ ಗುರುತರ ಆರೋಪ ಮಾಡದಿದ್ರೆ ಬೇಲ್ ಸಿಗೋ ಸಾಧ್ಯತೆ
ಒಟ್ಟಾರೆ, ಕಾನೂನು ಸಂಕೋಲೆಯಿಂದ ಪಾರಾಗಲು ರೇವಣ್ಣ ಕಾನೂನು ಸಮರವಷ್ಟೇ ಅಲ್ಲ, ದೈವದ ಮೊರೆ ಹೋಗಲಿದ್ದಾರೆ.. ರೇವಣ್ಣ ಪರವಾಗಿ ವಿಶೇಷ ಪೂಜೆಗೂ ಸಿದ್ಧತೆ ನಡೆದಿದೆ.
ಇದನ್ನೂ ಓದಿ:ಕೊನೆಗೂ ಹೊಸ ಭರವಸೆ ಕೊಟ್ಟ ಆರ್ಸಿಬಿ ಬೌಲರ್ಸ್.. ಬೊಂಬಾಟ್ ಬೌಲಿಂಗ್ನ ಹೈಲೆಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ