Advertisment

ರತನ್​ ಟಾಟಾ ಆ ಒಂದು ಆಸೆ ಈಡೇರಲಿಲ್ಲ ಯಾಕೆ? ಇದನ್ನು ನನಸು ಮಾಡೋದ್ಯಾರು?

author-image
Gopal Kulkarni
Updated On
ರತನ್​ ಟಾಟಾ ಆ ಒಂದು ಆಸೆ ಈಡೇರಲಿಲ್ಲ ಯಾಕೆ? ಇದನ್ನು ನನಸು ಮಾಡೋದ್ಯಾರು?
Advertisment
  • ಇಹಲೋಕಕ್ಕೆ ಟಾಟಾ ಹೇಳಿದ ರತನ್​ಗಿತ್ತು ಒಂದು ಕೊನೆ ಕನಸು
  • ಟಾಟಾ ಗ್ರೂಪ್ ಆ ಕನಸು ನನಸು ಮಾಡಲು ಪಣ ತೊಟ್ಟಿದ್ದೇಕೆ?
  • ಟಾಟಾ ಸಾಮ್ರಾಜ್ಯಕ್ಕೆ ಹೊಸ ಅಧಿಪತಿಯಾಗಿ ಯಾರು ನಿಲ್ಲಲಿದ್ದಾರೆ?

ಸಾವಿರಾರು ಕೋಟಿಯ ಆಸ್ತಿ, ಲಕ್ಷಾಂತರ ಕೋಟಿಯ ಕಂಪನಿ ವಹಿವಾಟು. ನಾವು ನಿತ್ಯ ಅಡುಗೆಗೆ ಬಳಸೋ ಉಪ್ಪಿನಿಂದ ಹಿಡಿದು ಕಾರು, ವಿಮಾನದವರೆಗೂ ಟಾಟಾ ಕಂಪನಿಯದ್ದೇ ಪಾರುಪತ್ಯ. ಈ ಸಾಮ್ರಾಜ್ಯದ ಒಡೆಯರಾಗಿದ್ದ ರತನ್ ಟಾಟಾ ಮಾತ್ರ ಮದುವೆಯನ್ನೇ ಆಗಲಿಲ್ಲ. ನಾಲ್ಕು ಬಾರಿ ಪ್ರೇಮ ವೈಫಲ್ಯ. ಎಲ್ಲವೂ ಮದುವೆವರೆಗೂ ಬಂದು ಮುರಿದುಬಿದ್ದಿದ್ದ ಸಂಬಂಧಗಳು. ರತನ್ ಟಾಟಾರ ಪರೋಪಕಾರ, ದೇಶಭಕ್ತಿಯ ಮುಂದೆ ಅವೆಲ್ಲವೂ ನಗಣ್ಯವಾಗಿಬಿಟ್ಟವು. ಉಸಿರು ಚೆಲ್ಲೋ ಕಟ್ಟ ಕಡೆಯ ಕ್ಷಣದವರೆಗೂ ಉಸಿರ ಕಣಕಣದಲ್ಲಿ ಸಂಚರಿಸಿದ್ದು ದೇಶಭಕ್ತಿ, ಜನಸೇವೆ ಮಾತ್ರ. ಹಾಗಂತ, ರತನ್ ಟಾಟಾ ಸಂಬಂಧಗಳಿಗೆ ಬೆಲೆ ಕೊಡ್ತಾ ಇರ್ಲಿಲ್ವಾ? ಖಂಡಿತ ಕೊಡುತ್ತಿದ್ದರು. ಸಂಬಂಧಗಳ ಮೌಲ್ಯ ಏನು ಅನ್ನೋದು ರತನ್ ಟಾಟಾರಿಗೆ ಬೇರೆಲ್ಲರಿಗಿಂತ ಹೆಚ್ಚಿನ ಅರಿವಿತ್ತು.

Advertisment

86 ವರ್ಷದವರಾಗಿದ್ದ ರತನ್ ಟಾಟಾ ದೇಶಕ್ಕಾಗಿ ಕೇವಲ ತಮ್ಮ ತನು, ಮನ, ಧನ ಅರ್ಪಿಸಲಿಲ್ಲ. ದೇಶವನ್ನೇ ಕಟ್ಟಿದ ರತನ್ ಟಾಟಾ ಸಂಬಂಧಗಳ ವಿಚಾರದಲ್ಲಿ ಎಂದಿಗೂ ನಾಟಕೀಯವಾಗಲಿಲ್ಲ. ಉದ್ಯಮ ವಿಸ್ತರಣೆ ಗುಂಗಿನಲ್ಲಿ ಸಂಬಂಧಗಳನ್ನ ಮರೆಯಲಿಲ್ಲ. ಮದುವೆ ಆಗಲಿಲ್ಲ, ಮಕ್ಕಳು ಇಲ್ಲ ಅನ್ನೋದು ಬಿಟ್ಟರೆ ರತನ್ ಟಾಟಾ ನಿಜವಾದ ಫ್ಯಾಮಿಲಿ ಮ್ಯಾನ್.

publive-image

ಇದನ್ನೂ ಓದಿ: ಆಡು ಮುಟ್ಟದ ಸೊಪ್ಪಿಲ್ಲ ಟಾಟಾ ಗ್ರೂಪ್ ಹೂಡಿಕೆ ಮಾಡದ ಕ್ಷೇತ್ರವಿಲ್ಲ; ಯಾವೆಲ್ಲಾ ಕ್ಷೇತ್ರಗಳಲ್ಲಿ ಟಾಟಾ ಹೂಡಿಕೆ ಮಾಡಿದೆ ಗೊತ್ತಾ?

ವಿಶೇಷ ಅಂದ್ರೆ ಮಹಾಪುರುಷ ರತನ್ ಟಾಟಾರಲ್ಲಿ ಒಬ್ಬ ಮಹಾನ್ ಕನಸುಗಾರನಿದ್ದ. ಬಿಸಿಲು, ಮಳೆ, ಬಿರುಗಾಳಿಯಲ್ಲಿ ಬೈಕ್‌ಗಳಲ್ಲಿ ಸಾಗುತ್ತಾ ಬಡ ಕುಟುಂಬಗಳು ಪಡ್ತಿದ್ದ ಕಷ್ಟ ನೋಡದಾಗಲೇ ನ್ಯಾನೋ ಕಾರಿನ ಕನಸು ಕಂಡು ಸಾಧಿಸಿ ತೋರಿಸಿದ್ದ ಟಾಟಾಗೆ.. ಮತ್ತೊಂದು ದೊಡ್ಡ ಕನಸಿತ್ತು. ಆ ಕನಸು ಈಡೇರುವ ಮುನ್ನವೇ ದೂರವಾಗಿದ್ದಾರೆ. ಅದುವೇ, ನೀರಿನ ಮೇಲೆ ಸಾಗುವ ಕಾರನ್ನು ತಯಾರಿಸಿ ಕಡಿಮೆ ಬೆಲೆಗೆ ನೀಡುವ ಮಹಾನ್ ಕನಸು!

Advertisment

ನೀರಿನ ಮೇಲೆ ಸಾಗುವ ಕಾರು ತಯಾರಿಸೋದು ಟಾಟಾ ಕನಸಾಗಿತ್ತು!
ಟಾಟಾ ಅನ್ನೋದು ದೇಶದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಅನ್ನೋದರಲ್ಲಿ ಎರಡು ಮಾತಿಲ್ಲ. ಯಾವ ಪ್ರಮೋಷನ್ನೂ ಬೇಡ, ಗಿಮ್ಮಿಕ್ಕೂ ಬೇಡ. ರತನ್ ಟಾಟಾ ಹೆಸರೇ ಈ ಬ್ರ್ಯಾಂಡ್‌ಗೆ ಬ್ರ್ಯಾಂಡ್ ಅಂಬಾಸಿಡರ್. ಕಾರಣ ಜನರ ಮೇಲೆ ರತನ್ ಟಾಟಾರಿಗಿದ್ದ ಕಾಳಜಿ. ರತನ್ ಟಾಟಾ ಎಂಥಾ ಮಹಾನ್ ಕನಸುಗಾರ ಅಂದ್ರೆ ಇಳಿವಯಸ್ಸಲ್ಲೂ ಒಂದು ಮಹಾನ್ ಕನಸು ಕಂಡಿದ್ರು. ನೀರಿನ ಮೇಲೆ ಸಾಗುವ ಕಾರೊಂದನ್ನು ಉತ್ಪಾದಿಸಿ ಕಡಿಮೆ ಬೆಲೆಗೆ ನೀಡಬೇಕೆಂಬ ಹಂಬಲವಿತ್ತು. ತಮ್ಮ ಕನಸನ್ನು ಕಂಪನಿಯ ಇಂಜಿನಿಯರ್‌ಗಳಿಗೆ ಹೇಳಿದ್ದರು ಮತ್ತು ಟಾಟಾ ಮೋಟಾರ್ಸ್‌ ನ ಅಧಿಕಾರಿಗಳು ಆ ಕನಸನ್ನು ನನಸು ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿದ್ರು. ಇಂಥಾ ಹೊತ್ತಲ್ಲೇ ರತನ್ ಟಾಟಾ ಇನ್ನಿಲ್ಲವಾಗಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದ GDPಗಿಂತ ಟಾಟಾ ಗ್ರೂಪ್​ನ ಮೌಲ್ಯವೇ ಹೆಚ್ಚು.. ಎಷ್ಟು ಲಕ್ಷ ಕೋಟಿ ಇದೆ ಗೊತ್ತಾ?

ರತನ್ ಟಾಟಾರ ಈ ಮಹಾ ಆಸೆಯನ್ನು ನನಸು ಮಾಡಿಯೇ ತೀರಲು ಟಾಟಾ ಕಂಪನಿ ಪಣ ತೊಟ್ಟಿದೆ. ಅದು ಕೆಲವೇ ಸಮಯದಲ್ಲಿ ಸಾಕಾರಗೊಳ್ಳಲಿದೆ ಎಂಬ ನಿರೀಕ್ಷೆಯಿದೆ. ಹಾಗಾದ್ರೆ, ರತನ್ ಟಾಟಾರ ಬಳಿಕವೀಗ ಅವರ ಆಸ್ತಿಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ರತನ್ ಟಾಟಾರ ಉತ್ತರಾಧಿಕಾರ ಅವರ ಮಲ ಸಹೋದರನ ಪುತ್ರಿಯಾಗಿರೋ ಈ ಮಾಯಾ ಟಾಟಾರ ಹೆಗಲೇರಲಿದೆ ಎನ್ನಲಾಗ್ತಿದೆ.

Advertisment

publive-image

ಕೇವಲ 34ನೇ ವಯಸ್ಸಿನಲ್ಲೇ ಟಾಟಾ ಗ್ರೂಪ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಚಾಣಾಕ್ಷತೆ ತೋರಿಸಿರೋ ಗಟ್ಟಿಗಿತ್ತಿ ಈ ಮಾಯಾ ಟಾಟಾ. ರತನ್ ಟಾಟಾ ಅವರ ಮಲ ಸಹೋದರ ನೋಯಲ್‌ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಮಗಳಾಗಿರೋ ಮಾಯಾ. ಈಗ ರತನ್ ಟಾಟಾರ 3800 ಕೋಟಿ ಆಸ್ತಿಯ ಒಡತಿಯಾಗಲಿದ್ದಾರೆ ಎಂಬ ಮಾಹಿತಿಯಿದೆ. ಜೊತೆಯಲ್ಲಿ, ಟಾಟಾ ಗ್ರೂಪ್‌ನ 66 ಪರ್ಸೆಂಟ್ ಮಾಲಿಕತ್ವದ ಟಾಟಾ ಟ್ರಸ್ಟ್‌ಗಳ ನಿರ್ವಹಣೆಯೂ ಮಾಯಾ ಅವರದ್ದಾಗಲಿದೆ ಎನ್ನಲಾಗಿದೆ. ಈಗ ಕಾಡ್ತಿರೋದು ಒಂದೇ ಪ್ರಶ್ನೆ. ಮಾಯಾ ಟಾಟಾಗೆ ರತನ್ ಟಾಟಾರ ಸ್ಥಾನ ತುಂಬಲು ಸಾಧ್ಯವಾ ಅನ್ನೋದು!

ಇದನ್ನೂ ಓದಿ:ಟಾಪ್ ಬಿಲಿಯನೇರ್ ಪಟ್ಟಿಯಲ್ಲಿ ರತನ್ ಟಾಟಾ ಹೆಸರು ಯಾಕಿಲ್ಲ? ಕಾರಣ ಗೊತ್ತಾದ್ರೆ ಮತ್ತಷ್ಟು ಹೆಮ್ಮೆ ಪಡ್ತೀರಿ..

ಯಾಕಂದ್ರೆ, ತಂದೆ ಮತ್ತು ತಾತನಿಂದ ಸಿಕ್ಕ ಸುವರ್ಣ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದ ರತನ್ ಟಾಟಾ. ಟಾಟಾ ಕಂಪನಿಯ ಬೇರುಗಳನ್ನು ಮತ್ತಷ್ಟು ಭದ್ರಗೊಳಿಸಿದ್ರು. ಬಹುಶಃ ರತನ್ ಟಾಟಾ ಅವರ ಕಾರಣಕ್ಕಾಗಿಯೇ ಇಂದು ಟಾಟಾ ಗ್ರೂಪ್ ಈ ಎತ್ತರಕ್ಕೆ ಬೆಳೆದಿರೋದು ಅಂದ್ರೂ ತಪ್ಪಿಲ್ಲ. ಇದಷ್ಟೇ. ಇಂದು ದೇಶದಲ್ಲಿ ಶರವೇಗದಲ್ಲಿ ಬೆಳೆಯುತ್ತಿರೋ ಹಲವಾರು ಕಂಪನಿಗಳಿಗೆ ರತನ್ ಟಾಟಾ ಆರ್ಥಿಕ ಸಹಾಯ ಮಾಡಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ರತನ್ ಟಾಟಾ ಅಪರೂಪಕ್ಕೆ ಅಪರೂಪದ ಮಹಾಪುರುಷ! ಪ್ರತಿಯೊಬ್ಬ ತಾಯಿಯ ಹೊಟ್ಟೆಯಲ್ಲೂ ಇಂಥಾ ಒಬ್ಬೊಬ್ಬ ಮಗನೋ. ಮಗಳೋ ಹುಟ್ಟಲಿ ಅನ್ನೋದು ಎಲ್ಲರ ಆಶಯ! ಹೋಗಿ ಬನ್ನಿ, ಟಾಟಾ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment