newsfirstkannada.com

WhatsApp ಮೂಲಕ ಫೇಕ್ ಕಾಲ್ ಮಾಡಿದ್ರೆ ಇನ್ಮುಂದೆ ಜೈಲಿಗೆ; ಆನ್​ಲೈನ್​​ನಲ್ಲಿ ದೂರು ಕೊಡೋದು ಹೇಗೆ?

Share :

Published March 26, 2024 at 12:48pm

    ನಕಲಿ, ಸ್ಪ್ಯಾಮ್ ಕರೆಗಳ ತಪ್ಪಿಸಲು ಹೊಸ ಐಡಿಯಾ

    Chakshu ಎಂಬ ಪೋರ್ಟಲ್ ತೆರೆದ ಕೇಂದ್ರ ಸರ್ಕಾರ

    ಸೈಬರ್ ವಂಚನೆ, ಮೋಸದ ಜಾಲದ ವಿರುದ್ಧ ಪಾರಾಗಲು ಇಲ್ಲಿದೆ ಐಡಿಯಾ

ಪ್ರಪಂಚದ ಬಹುತೇಕ ಮಂದಿ WhatsApp ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ನಕಲಿ ಕರೆಗಳು (Fake Calls) ಆ್ಯಪ್‌ನಲ್ಲಿ ಬರುತ್ತಿವೆ. ಇದು ವಾಟ್ಸ್​​ಆ್ಯಪ್ ಬಳಕೆದಾರರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ. ಸೈಬರ್ ಅಪರಾಧಿಗಳು, ಹ್ಯಾಕರ್ಸ್​ ‘ನಕಲಿ ಸರ್ಕಾರಿ’ ಅಧಿಕಾರಿಗಳಂತೆ ನಟಿಸಿ ಯಾಮಾರಿಸ್ತಿದ್ದಾರೆ. ಅಲ್ಲದೇ ಬ್ಲ್ಯಾಕ್​​ ಮೇಲ್ ಮಾಡ್ತಿರುವ ಕಿಡಿಗೇಡಿಗಳು ತಮಗೆ ಬೇಕಾದ ರೀತಿಯಲ್ಲಿ ಮುಗ್ಧರನ್ನು ಉಪಯೋಗಿಸಿಕೊಳ್ತಿದ್ದಾರೆ.

ಇದರಿಂದಾಗಿ ಅನೇಕ ಜನರು ನಷ್ಟವನ್ನು ಅನುಭವಿಸ್ತಿದ್ದಾರೆ. ಆದರೆ ಇನ್ಮುಂದೆ ಈ ರೀತಿಯ ಕರೆಗಳು ಬಂದರೆ ನೀವು ಭಯಪಡುವ ಅಗತ್ಯ ಇಲ್ಲ. ನಕಲಿ ಕರೆಗಳ ವಿರುದ್ಧ ಆನ್​ಲೈನ್​​ನಲ್ಲಿಯೇ ದೂರು ನೀಡಬಹುದು. ಜೊತೆಗೆ ಕರೆ ಮತ್ತು ಸಂದೇಶಗಳನ್ನು ಕಳುಹಿಸುವ ದುಷ್ಟರನ್ನು ಜೈಲಿಗೂ ಕಳುಹಿಸಬಹುದು. ಅದಕ್ಕಾಗಿ ಸರ್ಕಾರ ‘Chakshu’ ಎಂಬ ಪೋರ್ಟಲ್ ಆರಂಭಿಸಿದೆ. ಅದರಲ್ಲಿ ವಂಚನೆ ಕರೆಗಳು, ಸಂದೇಶಗಳ ವಿರುದ್ಧ ದೂರು ನೀಡಬಹುದಾಗಿದೆ.

ಇದನ್ನೂ ಓದಿ: ಚುನಾವಣಾ ಅಖಾಡಕ್ಕೆ ಎಂಟ್ರಿಕೊಟ್ಟ ವೀರಪ್ಪನ್ ಪುತ್ರಿ; ಕಳ್ಳ ಅಪ್ಪನ ಇವರ ಒಡನಾಟ ಹೇಗಿತ್ತು..?

ಅನುಮಾನಾಸ್ಪದ ವಂಚನೆ ಸಂದೇಶ, ನಕಲಿ ಕರೆಗಳು, ಸ್ಪ್ಯಾಮ್ ಕರೆಗಳು ಮತ್ತು WhatsAppನಲ್ಲಿ ಬರುವ ಸಂದೇಶಗಳ ವಿರುದ್ಧ ದೂರು ದಾಖಲಿಸಬಹುದು. ಇವುಗಳಲ್ಲಿ ಬ್ಯಾಂಕ್ ಖಾತೆ, ಪಾವತಿ ವ್ಯಾಲೆಟ್, ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ, ಸೆಕ್ಸ್‌ಟಾರ್ಶನ್, KYC ಅಪ್‌ಡೇಟ್‌ಗೆ ಸಂಬಂಧಿಸಿದ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಲೂ ಸೇರಿವೆ.

ಆನ್‌ಲೈನ್‌ನಲ್ಲಿ ದೂರು ನೀಡುವುದು ಹೇಗೆ..?

  • ಇದಕ್ಕಾಗಿ, ಮೊದಲು ನೀವು ಸಂಚಾರಸಾಥಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು (https://sancharsaathi.gov.in/)
    ಸಂಚಾರಸಾಥಿ ಹೋಮ್ ಪೇಜ್​​ನಲ್ಲಿ ಕಾಣುವ Citizen Centric Services (ಸಿಟಿಜನ್ ಸೆಂಟ್ರಿಕ್ ಸೇವೆ)ಗಳ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ
  • ಇಲ್ಲಿ ನೀವು Citizen Centric Services ಹೋಗಿ ಅದರ ಮೇಲೆ ಕ್ಲಿಕ್ ಮಾಡಬೇಕು
  • ನಂತರ Continue For Reporting ಆಯ್ಕೆಗೆ ಹೋದರೆ ಒಂದು ಫಾರ್ಮ್ ತೆರೆದುಕೊಳ್ಳುತ್ತದೆ
  • ಈ ನಮೂನೆಯಲ್ಲಿ ನೀವು ನಕಲಿ WhatsApp ಕರೆ ಅಥವಾ ಸಂದೇಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು
  • ವಂಚನೆಯ ಪಟ್ಟಿಯಲ್ಲಿ ಯಾವುದೇ ದೂರನ್ನು ಹೊಂದಿದ್ದರೂ, ನೀವು ಅದರ ಮೇಲೆ ಕ್ಲಿಕ್ ಮಾಡಬೇಕು
  • ನೀವು ನಕಲಿ ಕರೆ ಅಥವಾ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಸಹ ಇಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ
  • ದೂರಿನ ವಿವರಗಳನ್ನು ಬರೆಯುವಾಗ, ನೀವು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕು
  • ಕ್ಯಾಪ್ಚಾ ಕೋಡ್ ಮತ್ತು OTP ಪರಿಶೀಲನೆಯ ನಂತರ ನೀವು ಅದನ್ನು ಸಲ್ಲಿಸಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WhatsApp ಮೂಲಕ ಫೇಕ್ ಕಾಲ್ ಮಾಡಿದ್ರೆ ಇನ್ಮುಂದೆ ಜೈಲಿಗೆ; ಆನ್​ಲೈನ್​​ನಲ್ಲಿ ದೂರು ಕೊಡೋದು ಹೇಗೆ?

https://newsfirstlive.com/wp-content/uploads/2023/08/whatsapp.jpg

Load More