newsfirstkannada.com

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಯಾವಾಗ? ಈ ಬಾರಿ ಎಷ್ಟು ಹಂತದಲ್ಲಿ ಮತದಾನ?

Share :

Published February 20, 2024 at 1:37pm

Update February 20, 2024 at 1:38pm

  ಮಾರ್ಚ್ 9ರ ಬಳಿಕ ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ

  543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಎಷ್ಟು ಹಂತದಲ್ಲಿ ಮತದಾನ?

  ಮೊದಲ ಹಂತದ ಮತದಾನದ ನಡುವೆ 45 ದಿನಗಳ ಅಂತರ ಇರಲಿದೆ

ನವದೆಹಲಿ: ದೇಶದ 18ನೇ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗ 2024ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭದ್ರತೆ ಹಾಗೂ ಅಂತಿಮ ಹಂತದ ಸಿದ್ಧತಾ ಕಾರ್ಯಗಳನ್ನು ಪರಿಶೀಲನೆ ನಡೆಸುತ್ತಿದೆ.

ಜಮ್ಮು ಕಾಶ್ಮೀರದ ಭದ್ರತೆ ಸ್ಥಿತಿಯ ಬಗ್ಗೆ ಮೊದಲಿಗೆ ಪರಿಶೀಲನೆ ನಡೆಸಲಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಹಲವು ಸುತ್ತಿನ ಸಭೆಗಳನ್ನು ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ಮಾರ್ಚ್ 9ರ ಬಳಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗೋ ಸಾಧ್ಯತೆ ಇದೆ. ಅಂದ್ರೆ ಏಪ್ರಿಲ್, ಮೇ ತಿಂಗಳಲ್ಲಿ ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯೋ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಎಲೆಕ್ಷನ್ ದಿನಾಂಕ ಘೋಷಣೆಯ ಒಂದೂವರೆ ತಿಂಗಳ ಬಳಿಕ ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣೆ ಘೋಷಣೆಯ ದಿನಾಂಕಕ್ಕೂ ಮೊದಲ ಹಂತದ ಮತದಾನದ ನಡುವೆ 45 ದಿನಗಳ ಅಂತರ ಇರೋ ಸಾಧ್ಯತೆ ಇದೆ.

ಆಂಧ್ರ, ಒಡಿಶಾ ವಿಧಾನಸಭೆಗೂ ಲೋಕಸಭೆಯ ಜೊತೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಆಂಧ್ರಪ್ರದೇಶ, ಒಡಿಶಾ, ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಮಾರ್ಚ್ 8, 9 ರಂದು ಚುನಾವಣಾ ಆಯೋಗದ ಅಧಿಕಾರಿಗಳು ಜಮ್ಮು ಕಾಶ್ಮೀರದ ಭದ್ರತೆ, ಪೊಲೀಸ್ ಪಡೆಗಳ ಲಭ್ಯತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಾರ್ಚ್ 12, 13 ರಂದು ಚುನಾವಣಾ ಆಯೋಗದ ಅಧಿಕಾರಿಗಳು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿ ನನ್ನ ತುಂಬಾನೇ LOVE ಮಾಡ್ತಾನೆ -ಸಿದ್ದರಾಮಯ್ಯ, ಮಾಜಿ ಸಿಎಂ ನಡುವೆ ಸ್ವಾರಸ್ಯಕರ ಮಾತುಕತೆ..!

ಕಳೆದ ಬಾರಿ 2019ರ ಮಾರ್ಚ್ 10ರಂದು ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿತ್ತು. ಏಪ್ರಿಲ್ 11ರಿಂದ ಮೇ 19ರವರೆಗೆ ದೇಶಾದ್ಯಂತ 7 ಹಂತದಲ್ಲಿ ಮತದಾನ ನಡೆದಿತ್ತು. 2019ರ ಮೇ, 23ರಂದು ಚುನಾವಣಾ ಫಲಿತಾಂಶ ಪ್ರಕಟ ಮಾಡಲಾಗಿತ್ತು. ಈ ಬಾರಿಯೂ 2019ರಂತೆ ದೇಶಾದ್ಯಂತ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ನಡೆಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಯಾವಾಗ? ಈ ಬಾರಿ ಎಷ್ಟು ಹಂತದಲ್ಲಿ ಮತದಾನ?

https://newsfirstlive.com/wp-content/uploads/2023/10/Election-Commission.jpg

Load More