ಫೇಸ್ಬುಕ್ ಮೂಲಕ 2024 ಜನವರಿಯಲ್ಲಿ ಯುವತಿ ಜೊತೆ ನಟ ಪರಿಚಯ
ನೇತ್ರಾವತಿ ಸೀರಿಯಲ್ ನಟ ಸನ್ನಿ ಮಹಿಪಾಲ್ ಮೇಲೆ ಗಂಭೀರ ಆರೋಪ
ಗಂಭೀರವಾಗಿ ಗಾಯಗೊಂಡ ಸಂತ್ರಸ್ತೆ ಯುವತಿ ಖಾಸಗಿ ಆಸ್ಪತ್ರೆಗೆ ದಾಖಲು
ಬೆಂಗಳೂರು: ಕನ್ನಡದ ನೇತ್ರಾವತಿ ಸೀರಿಯಲ್ ನಟ ಸನ್ನಿ ಮಹಿಪಾಲ್ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ನಟ ಮಹಿಪಾಲ್ ನನ್ನನ್ನೂ ಮದುವೆಯಾಗೋದಾಗಿ ನಂಬಿಸಿ, ಬಳಿಕ ದೈಹಿಕ ಸಂಪರ್ಕ ಬೆಳೆಸಿ, ನನ್ನನ್ನೂ ಗರ್ಭಿಣಿ ಮಾಡಿದ್ದಾನೆ. ಇದಾದ ಬಳಿಕ ಮತ್ತೊಂದು ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದಾನೆ. ಇದನ್ನೂ ಪ್ರಶ್ನೆ ಮಾಡಿದ್ದಕ್ಕೆ ಗರ್ಭಿಣಿ ಪತ್ನಿಯ ಎಡಗೈಗೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ ಎಂದು ಸಂತ್ರಸ್ತೆ ಯುವತಿ ಆರೋಪ ಮಾಡಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡ ಸಂತ್ರಸ್ತೆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: 2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು
ಇದೇ ವಿಚಾರವಾಗಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುಣಾರೆ ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ನಿನ್ನೆ ರಾತ್ರಿ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂತ್ರಸ್ತೆ ತನ್ನ ಗಂಡನ ಮೇಲೆ ಗಂಭೀರ ಆರೋಪ ಮಾಡಿದ್ದರು. ಸಂತ್ರಸ್ತೆ ಹೇಳಿಕೆ ಮೇಲೆ ಕೇಸ್ ದಾಖಲಿಸಿಕೊಂಡಿದ್ದೇವೆ. ಸಂತ್ರಸ್ತೆ ಗಂಡ ಸೀರಿಯಲ್ನಲ್ಲಿ ನಟನಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸನ್ನಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ನನ್ನನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಸನ್ನಿ ಇರುವ ಅಪಾರ್ಟ್ಮೆಂಟ್ಗೆ ಇವರು ಹೋಗಿದ್ದರು. ಅವರು 3 ತಿಂಗಳ ಗರ್ಭಿಣಿಯಾಗಿದ್ದಾರೆ. ನಿನ್ನೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಕಲೆ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ.
2024 ಜನವರಿಯಲ್ಲಿ ಯುವತಿಯೊಂದಿಗೆ ಮಹಿಪಾಲ್ ಪರಿಚಯ ಮಾಡಿಕೊಂಡಿದ್ದಾರೆ. ಹೀಗೆ ಈ ಇಬ್ಬರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಶುರುವಾಗಿದೆ. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿದೆ. ಆಗ ನಟ ಮಹಿಪಾಲ್ ಮದುವೆಯಾಗೋದಾಗಿ ನಂಬಿಸಿ ಯುವತಿ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಅನ್ನೋ ಆರೋಪವಿದೆ. ಇದಾದ ನಂತರ ಜೂನ್ 15ರಂದು ಮಹಿಪಾಲ್ ಯುವತಿ ಜೊತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಆದರೆ ಮದುವೆಯಾದರು ಈ ಇಬ್ಬರು ಒಟ್ಟಿಗೆ ಇರಲಿಲ್ಲವಂತೆ. ನಮ್ಮ ಪೋಷಕರನ್ನ ಒಪ್ಪಿಸಿ ಬರ್ತೀನಿ ಎಂದು ನಟ ಸನ್ನಿ ಮಹಿಪಾಲ್ ಯುವತಿಗೆ ಹೇಳಿದ್ದನಂತೆ.
ಇದನ್ನೂ ಓದಿ: ಹಿಟ್ ಆ್ಯಂಡ್ ರನ್; ಬೈಕ್ಗೆ ಭಯಾನಕ ಡಿಕ್ಕಿ.. ರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ
ಅಲ್ಲದೇ ಸ್ನೇಹಿತರ ರೀತಿಯೇ ಇರಬೇಕು. ಸ್ನೇಹಿತರಂತೆಯೇ ಮೆಸೇಜ್ ಮಾಡ್ಬೇಕು ಎಂದು ಕಂಡೀಷನ್ ಹಾಕಿದ್ದರಂತೆ. ಪತಿ ಹೇಳಿದ ಹಾಗೇ ಪತ್ನಿ ನಡೆದುಕೊಂಡಿದ್ದಳಂತೆ. ಅದಾಗಲೇ ಕೆಲ ದಿನದ ಹಿಂದೆ ಬೇರೆ ಯುವತಿ ಜೊತೆಗೆ ಈ ನಟ ಸನ್ನಿ ನಿಶ್ಚಿತಾರ್ಥ ಆಗಿದ್ದನಂತೆ. ಈ ವಿಚಾರ ತಿಳಿದ ಕೂಡಲೇ ಇದನ್ನು ಪ್ರಶ್ನಿಸಲು ನಿನ್ನೆ ರಾತ್ರಿ 9.30ರ ಸುಮಾರಿಗೆ ವಿಜ್ಞಾನ ನಗರದಲ್ಲಿರೋ ಮಹಿಪಾಲ್ ಮನೆಗೆ ಹೋಗಿದ್ದರಂತೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಇದೇ ಕೋಪದಲ್ಲಿ ಪತ್ನಿ ಮೇಲೆ ನಟ ಚಾಕುವಿನಿಂದ ತೋಳಿಗೆ ಇರಿದಿದ್ದಾನಂತೆ. ಆದರೆ ಈ ಗಲಾಟೆಯಲ್ಲಿ ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿದೆ ಎಂದು ಪತ್ನಿ ಕಣ್ಣೀರು ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ