ಗೆಳೆಯನ ಏಳು-ಬೀಳಿನಲ್ಲಿ ಅದಿತಿ ಪಾತ್ರ ಅಪಾರ..!
ಪೋಸ್ಟ್ ಹಾಕಿ ಕಿಶನ್ ಹುರಿದುಂಬಿಸಿದ ಸುಂದರಿ
ಕಿಶನ್ಗೂ ಅದಿತಿಗೆ ಏನು ಸಂಬಂಧ? ಈ ಸ್ಟೋರಿ ಓದಿ
ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರ್ತಾಳೆ. ಇದು ಎಲ್ಲರ ಜೀವನದಲ್ಲಿ ಎಷ್ಟು ನಿಜವಾಗಿದೆಯೋ ಗೊತ್ತಿಲ್ಲ. ಆದರೆ ಟೀಮ್ ಇಂಡಿಯಾದ ಸೆನ್ಷೆಷನಲ್ ಸ್ಟಾರ್ ಇಶಾನ್ ಕಿಶನ್ ಸಕ್ಸಸ್ಗೆ ಆ ಲೇಡಿನೆ ಕಾರಣ. ಜಾರ್ಖಂಡ್ ಪುತ್ತರ್ನ ಏಳು-ಬೀಳಿನಲ್ಲಿ ಈ ಚೆಂದುಳ್ಳಿ ಸದಾ ಬೆನ್ನಿಗೆ ನಿಂತಿದ್ದಾಳೆ. ಅಷ್ಟಕ್ಕೂ ಆಕೆ ಯಾರಪ್ಪಾ ಅಂತೀರಾ ? ಈ ಸ್ಟೋರಿ ಓದಿ.
ಇಶಾನ್ ಕಿಶನ್. ಕಳೆದೆರಡು ದಿನಗಳಿಂದ ನ್ಯೂಸ್ ಪೇಪರ್ಗಳಲ್ಲಿ ಹೆಡ್ಲೈನ್ ಆಗಿದ್ದಾರೆ. ಇಷ್ಟು ದಿನ ಎಲೆಮರಿ ಕಾಯಿಯಂತಿದ್ದ ಪಂಜಾಬ್ ಪುತ್ತರ್ ಸದ್ಯ ಹಾಟ್ ಟಾಫಿಕ್. ಬದ್ಧವೈರಿ ಪಾಕಿಸ್ತಾನ ವಿರುದ್ಧ ವೀರಾವೇಶ ತೋರಿದ್ದೆ ಬಂತು. ಕ್ರಿಕೆಟ್ ಪಡಸಾಲೆಯಲ್ಲಿ ಯಂಗ್ಗನ್ ಕಿಶನ್ ಜಪವೇ ನಡೆಯುತ್ತಿದೆ.
ಬಿಗ್ ಸ್ಟೇಜ್, ಬಿಗ್ ಗೇಮ್ನಲ್ಲಿ ಕಿಶನ್ ನಡೆಸಿದ ಕೆಚ್ಚದೆಯ ಹೋರಾಟಕ್ಕೆ ನಿಜಕ್ಕೂ ಸಲಾಂ ಹೇಳಲೇಬೇಕು. ಯಾಕಂದ್ರೆ ಪಾಕ್ನ ಬಲಿಷ್ಠ ಬೌಲಿಂಗ್ ಕೋಟೆಯನ್ನ ಛಿದ್ರಗೊಳಿಸಿ 82 ರನ್ ಹೊಡೆಯೋದು ಸುಲಭದ ಮಾತಾಗಿರ್ಲಿಲ್ಲ. ನಿಜಕ್ಕೂ ಅದಕ್ಕೆ ಡಬಲ್ ಗುಂಡಿಗೆ ಬೇಕು. ಅಷ್ಟಕ್ಕೂ 25 ರ ಕಿಶನ್ಗೆ ಹೈ ಪ್ರೆಶರ್ ಗೇಮ್ನಲ್ಲಿ ನಿರ್ಭಯವಾಗಿ ಬ್ಯಾಟ್ ಬೀಸುವ ಧೈರ್ಯ ಬಂದಿದ್ದಾದ್ರು ಹೇಗೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಕೊನೆಗೂ ಆ ಪ್ರಶ್ನೆಗೆ ಆನ್ಸರ್ ಸಿಕ್ಕಿದೆ.
ಕಿಶನ್ ಯಶಸ್ಸಿನ ಹಿಂದಿದ್ದಾಳೆ ಅದಿತಿ ಹುಂಡಿಯಾ
ಕಿಶನ್ರನ್ನ ಇಂದು ಎಲ್ಲರೂ ಹೆಗಲ ಮೇಲೆ ಹೊತ್ತು ಮೆರೆಸ್ತಿದ್ದಾರೆ. ಪ್ರಶಂಸೆಗಳ ಮಹಾಪೂರವೇ ನಡೀತಿದೆ. ಟಿವಿ-ಪತ್ರಿಕೆಗಳಲ್ಲಿ ಕಿಶನ್ರನ್ನ ಹೊಗಳಿ ಅಟ್ಟಕ್ಕೇರಿಸಲಾಗ್ತಿದೆ. ಅಷ್ಟಕ್ಕೂ ಯಂಗ್ ಆ್ಯಂಡ್ ಎನರ್ಜಿಕ್ ಬ್ಯಾಟ್ಸ್ಮನ್ ಈ ಸಕ್ಸಸ್ಗೆ ಕಾರಣ ಅದಿತಿ ಹುಂಡಿಯಾ.
ಕಿಶನ್ ಇಂದು ಏನೇ ಆಗಿದ್ರೂ ಅದರ ರಿಯಲ್ ಕ್ರೆಡಿಟ್ ಅದಿತಿ ಹುಂಡಿಯಾಗೆ ಸೇರಬೇಕು. ಯಾಕಂದ್ರೆ ಕಿಶನ್ ಸಕ್ಸಸ್ನಲ್ಲಿ ಈಕೆಯ ಪಾತ್ರ ಅಪಾರ. ಎಲ್ಲ ಸಮಯದಲ್ಲಿ ಕಿಶನ್ಗೆ ಬೆನ್ನೆಲುಬಾಗಿ ನಿಂತಿದ್ದಾಳೆ.
ಪೋಸ್ಟ್ ಹಾಕಿ ಕಿಶನ್ ಹುರಿದುಂಬಿಸಿದ ಸುಂದರಿ
81 ಎಸೆತಗಳಲ್ಲಿ 82 ರನ್. ಪಾಕ್ ವಿರುದ್ಧ ಕಿಶನ್ ಕಟ್ಟಿದ ಈ ಬೆಂಕಿ ಇನ್ನಿಂಗ್ಸ್ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿತ್ತು. ಈಗ ಅದಿತಿ ಹುಂಡಿಯಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿ ಗೆಳೆಯ ಕಿಶನ್ರನ್ನ ಹುರಿದುಂಬಿಸಿದ್ದಾರೆ. ಕಿಶನ್ ಫೋಟೋ ಹಂಚಿಕೊಂಡು ಇದೊಂದು ಡ್ರೀಮ್ ಇನ್ನಿಂಗ್ಸ್, ಇದಕ್ಕೆ ನೀನು ನಿಜಕ್ಕೂ ಅರ್ಹನಾಗಿದ್ದೀಯಾ ಎಂದು ಹಾರ್ಟ್ ಇಮೋಜಿ ಹಾಕಿದ್ದಾರೆ.
ಇನ್ನು ಗೆದ್ದಾಗ ಜೊತೆಗಿದ್ದು ಸೋತಾಗ ಕೈಕೊಡೋರೆ ಹೆಚ್ಚು ಮಂದಿ. ಆದ್ರೆ ಅದಿತಿ ಹುಂಡಿಯಾ ಆಗಲ್ಲ. ಫೇಲ್ಯೂರ್ ಕಂಡಾಗಲು ಕಿಶನ್ ಜೊತೆಗಿದ್ದು ಹುರಿದುಂಬಿಸಿದ್ದಾರೆ. ಆ ಮೂಲಕ ಗೆಳೆಯನ ಏಳು-ಬೀಳಿನ ಪಯಣದಲ್ಲಿ ಅದಿತಿ ಕೂಡ ಹೆಜ್ಜೆ ಹಾಕಿದ್ದಾರೆ.
ಯಾರು ಈ ಅದಿತಿ ಹುಂಡಿಯಾ..?
ಇಷ್ಟೆಲ್ಲಾ ಕೇಳಿದ್ಮೇಲೆ ಈ ಅದಿತಿ ಹುಂಡಿಯಾ ಯಾರು ಅನ್ನೋ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿರಬಹುದು. ಅದಕ್ಕೆ ಕ್ಲಾರಿಟಿ ಕೊಡ್ತೀವಿ ಕೇಳಿ. ಅದಿತಿ ಹುಂಡಿಯಾ ಬೇಸಿಕಲಿ ಮಾಡೆಲ್. 2017 ರಲ್ಲಿ ಮಿಸ್ ಇಂಡಿಯಾದ ಫೈನಲಿಸ್ಟ್. 2018 ರಲ್ಲಿ ಕಿರೀಟಕ್ಕೆ ಮುತ್ತಿಟ್ಟ ಸುಂದರಿ. ಈ ಸುಂದರಿಗಳ ಸುಂದರಿಗೆ ಟೀಮ್ ಇಂಡಿಯಾ ಮನಸೋತಿದ್ದಾರೆ. ಅಂದ್ರೆ 2019 ರಿಂದ ಕಿಶನ್ ಹಾಗೂ ಅದಿತಿ ಡೇಟಿಂಗ್ ನಡೆಸ್ತಿದ್ದಾರೆ. ಅನೇಕ ಬಾರಿ ಈ ಲವ್ ಬರ್ಡ್ಸ್ ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಇಷ್ಟು ದಿನ ಈ ಇಬ್ಬರ ಪ್ರೇಮ ಕಹಾನಿ ಬರೀ ಗಾಸಿಪ್ ಎಂದು ಹೇಳಲಾಗ್ತಿತ್ತು. ಆದ್ರೆ ಅದಿತಿ ಹಾರ್ಟ್ ಇಮೋಜಿ ಜೊತೆ ಕಿಶನ್ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮಿಬ್ಬರ ಲವ್ಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಸೋ ಇಶಾನ್ ಕಿಶನ್-ಅದಿತಿ ಹುಂಡಿಯಾ ಮತ್ತೊಂದು ಸ್ಟಾರ್ ಸೆಲಬ್ರಿಟಿ ಪೇರ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ