/newsfirstlive-kannada/media/post_attachments/wp-content/uploads/2024/09/IAS-OFFICER-DEAD-IN-GANGA-RIVER.jpg)
ಉನ್ನಾವೋ: ಸ್ನಾನಕ್ಕೆಂದು ಗಂಗಾ ನದಿಗೆ ಇಳಿದ ಐಎಎಸ್​ ಅಧಿಕಾರಿ ದುರಂತ ಅಂತ್ಯ ಕಂಡ ಘಟನೆ ಉತ್ತರಪ್ರದೇಶದ ಬಿಲ್ಹೌರ್​ನಲ್ಲಿ ನಡೆದಿದೆ. ಹಿರಿಯ ಐಎಎಸ್ ಅಧಿಕಾರಿ ಆದಿತ್ಯವರ್ಧನ್ ಸಿಂಗ್ ಇದೇ ಆಗಸ್ಟ್ 31 ರಂದು ಈ ಭೀಕರ ಘಟನೆ ನಡೆದಿದೆ. ಸ್ನಾನಕ್ಕೆಂದು ಆದಿತ್ಯವರ್ಧನ್ ಬಿಲ್ಹೌರ್ ಬಳಿ ಗಂಗಾನದಿಗೆ ಇಳಿದಿದ್ದರು. ಈಗ ಗಂಗೆ ರೌದ್ರ ರೂಪದಲ್ಲಿ ಉಕ್ಕಿ ಹರಿಯುತ್ತಿದ್ದಾಳೆ. ರಣಭೀಕರ ಸೆಳೆತ ಆದಿತ್ಯವರ್ಧನ್ ಸಿಂಗ್​ರನ್ನ ಕೊಚ್ಚಿಕೊಂಡು ಹೋಗಿದೆ. ಎನ್​ಡಿಆರ್​ಎಫ್ ತಂಡದಿಂದ ಶೋಧ ಕಾರ್ಯ ನಡೆದರು ಕೂಡ ಆದಿತ್ಯವರ್ಧನ್ ಸಿಂಗ್​ ದೇಹ ಪತ್ತೆಯಾಗಿಲ್ಲ.
ಇನ್ನೂ ಒಂದು ದುರಂತ ಅಂದ್ರೆ ಅಲ್ಲಿಯೇ ಸ್ಥಳದಲ್ಲಿಯೇ ಇದ್ದ ಬೋಟ್ ಸಿಬ್ಬಂದಿ ನಾನು ಕಾಪಾಡುತ್ತೇನೆ ಆದ್ರೆ 10 ಸಾವಿರ ರೂಪಾಯಿ ಕೊಡುವಂತೆ ಕೇಳಿದ್ದಾನೆ. ಅದಕ್ಕೂ ಒಪ್ಪಿದ ಅಧಿಕಾರಿ ಸ್ನೇಹಿತರು 10 ಸಾವಿರ ರೂಪಾಯಿಯನ್ನು ಆ ಬೋಟ್ ಸಿಬ್ಬಂದಿಗೆ ನೀಡಿದ್ದಾರೆ. ಆದ್ರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಅವನು ಕಾಪಾಡುವಷ್ಟರಲ್ಲಿ ನದಿ ನೀರು ಆದಿತ್ಯವರ್ಧನ್ ಕೊಚ್ಚಿಕೊಂಡು ಹೋಗಿತ್ತು.
ಇದನ್ನೂ ಓದಿ:ಹುಡುಗಿ ಜೊತೆ ಗೋವಾಗೆ ಹೋಗುತ್ತಿದ್ದ ಯುವಕ.. ಗಾಬರಿಯಿಂದ ನದಿಗೆ ಬಿದ್ದ ಕಾರು; ಆಮೇಲೇನಾಯ್ತು?
ಉತ್ತರಪ್ರದೇಶದ ಆರೋಗ್ಯ ಇಲಾಖೆಯಲ್ಲಿ ಆದಿತ್ಯವರ್ಧನ್ ಸಿಂಗ್ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ವಾರಣಾಸಿಗೆ ಅವರನ್ನು ಪೋಸ್ಟ್ ಮಾಡಲಾಗಿತ್ತು. ಇದೇ ಖುಷಿಯಲ್ಲಿ ಉತ್ತರಪ್ರದೇಶದ ಉನ್ನಾವೋ ಕಡೆಗೆ ಗೆಳೆಯರೊಂದಿಗೆ ಪ್ರವಾಸಕ್ಕೆ ತೆರಳಿದ್ದರು ಆದಿತ್ಯವರ್ಧನ್, ಇದೇ ವೇಳೆ ಬಿಲ್ಹೌರ್ ಬಳಿ ಸ್ನೇಹಿತರೊಂದಿಗೆ ಸ್ನಾನಕ್ಕೆ ಎಂದು ನದಿಗೆ ಇಳಿದಿದ್ದಾರೆ. ತಮ್ಮ ಫೋಟೋ ತೆಗೆಯುವಂತೆ ಗೆಳೆಯರಿಗೆ ಹೇಳಿ ನದಿಗೆ ಇಳಿದ ಆದಿತ್ಯವರ್ಧನ್, ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸದ್ಯ ಅವರಿಗಾಗಿ ಶೋಧಕಾರ್ಯ ನಡೆಸಿದರೂ ಕೂಡ ಅವರ ದೇಹ ಇನ್ನೂ ಪತ್ತೆಯಾಗಿಲ್ಲ. ಪ್ರವಾಸಕ್ಕೆಂದು ತೆರಳಿ ಭೀಕರವಾಗಿ ಅಂತ್ಯ ಕಂಡ ತಮ್ಮ ಗೆಳೆಯನನ್ನು ನೆನೆದು ಸ್ನೇಹಿತರು ದುಃಖಿಸಿದ್ದಾರೆ. ಆದಿತ್ಯನಾಥ್ ಮೂಲತಃ ಉನ್ನಾವೋದ ಕಬ್ರಿಪುರ ಗ್ರಾಮದವರು. ಅವರ ಕುಟುಂಬ ಲಖನೌನ ಇಂದಿರಾನಗರದಲ್ಲಿ ನೆಲೆಸಿದೆ. ಅವರ ಪತ್ನಿ ಶೈಲಜಾ ಮಿಶ್ರಾ ಮಹಾರಾಷ್ಟ್ರದ ಅಕೋಲಾದಲ್ಲಿ ನ್ಯಾಯಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಆದಿತ್ಯವರ್ಧನ್ ಪಾಲಕರು ಅವರ ಪುತ್ರಿಯೊಂದಿಗೆ ಅಂದ್ರೆ ಆದಿತ್ಯನಾಥ ಸಹೋದರಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸುತ್ತಿದ್ದಾರೆ. ಸುದ್ದಿ ಕೇಳಿ ಆಸ್ಟ್ರೇಲಿಯಾದಿಂದ ಅವರು ಕೂಡ ಬಂದಿದ್ದು, ಕಳೆದು ಹೋದ ಪುತ್ರನಿಗಾಗಿ ಕಣ್ಣೀರಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us