newsfirstkannada.com

×

ಚುನಾವಣಾ ಅಖಾಡದಲ್ಲಿ ಸ್ವರಾಜ್ ಕುಟುಂಬದ ಕುಡಿ; ಕಾನೂನು ಪಾಂಡಿತ್ಯ ಹೊಂದಿರೋ ಬಾನ್ಸುರಿ ಯಾರು..?

Share :

Published March 20, 2024 at 1:41pm

    ನವದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಬಾನ್ಸುರಿ ಸ್ವರಾಜ್

    ಬಾನ್ಸುರಿ ಸ್ವರಾಜ್​ಗೆ ಆಗಿತ್ತು ಸ್ಟ್ರೋಕ್, ಇವರ ಸುತ್ತ ಇರುವ ವಿವಾದ ಏನು?

    ಸುಷ್ಮಾ ಸ್ವರಾಜ್​ ವೈಯಕ್ತಿಕ ಬದುಕು ಹೇಗಿದೆ? ಇವರ ತಂದೆ ಪ್ರಸಿದ್ದ ವಕೀಲರು

ಲೋಕಸಭೆ ಚುನಾವಣೆಗೆ ಕಹಳೆ ಮೊಳಗಿಸಿರುವ ಬಿಜೆಪಿ ಮಾರ್ಚ್​ 2 ರಂದು 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅದರಲ್ಲಿ 7 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಕಳೆದ ಬಾರಿ ಕ್ಲೀನ್​ಸ್ವೀಪ್ ಮಾಡಿತ್ತು. ಹೀಗಿದ್ದೂ, ಈ ಬಾರಿಯ ಟಿಕೆಟ್ ಘೋಷಣೆಯಲ್ಲಿ ಹಾಲಿ ಸಂಸದ ಮನೋಜ್ ತಿವಾರಿಯನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳ ಸಂಸದರಿಗೂ ಕೊಕ್ ನೀಡಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ಅದರಲ್ಲಿ ‘ನವದೆಹಲಿ ಲೋಕಸಭಾ ಕ್ಷೇತ್ರ’ದಿಂದ ಬಾನ್ಸುರಿ ಸ್ವರಾಜ್ ಅವರನ್ನು ಕಣಕ್ಕೆ ಇಳಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಬಾರಿ ಅವರಿಗೆ ಟಿಕೆಟ್ ಮಿಸ್ ಆಗಿದ್ದು, ಬಾನ್ಸುರಿ ಸ್ವರಾಜ್ ಎಂಬ ಹೊಸ ಮುಖವನ್ನು ಪರಿಚಯಿಸಿದೆ.

ಯಾರು ಈ ಬಾನ್ಸುರಿ ಸ್ವರಾಜ್..?

ಶ್ರೀಮಂತ ರಾಜಕೀಯ ಪರಂಪರೆಯ ಕುಡಿ ಬಾನ್ಸುರಿ ಸ್ವರಾಜ್. ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳನ್ನು ಅರೆದು ಕುಡಿದುಕೊಂಡಿರುವ ಸುಪ್ರಸಿದ್ಧ ಸ್ವರಾಜ್ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳು. ಇವರ ಮೂಲ ಬೇರೆ ಯಾವುದೂ ಅಲ್ಲ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ದಿವಂಗತ ಸುಷ್ಮ ಸ್ವರಾಜ್ ಹಾಗೂ ಮಿಜೋರಾಂನ ಪ್ರಸಿದ್ಧ ವಕೀಲರೂ ಆಗಿರುವ ಮಾಜಿ ರಾಜಪಾಲ ಸ್ವರಾಜ್ ಕೌಶಲ್ ದಂಪತಿಯ ಮುದ್ದಿನ ಮಗಳೇ ಬಾನ್ಸುರಿ ಸ್ವರಾಜ್. ಇವರು ತಮ್ಮ ತಂದೆಯಂತೆ ಕಾನೂನು ಕ್ಷೇತ್ರವನ್ನು ಆಳವಾಗಿ ತಿಳಿದುಕೊಂಡಿದ್ದು, ವಕೀಲ ವೃತ್ತಿಯಲ್ಲಿ ಪ್ರವೀಣೆ ಎನಿಸಿಕೊಂಡಿದ್ದಾರೆ.

ಕಾನೂನು ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಹಿರಿಯರು ಹಾಕಿಕೊಟ್ಟಿರುವ ದಾರಿಯಲ್ಲಿ ಸಾಗುತ್ತಿರುವ ಬಾನ್ಸುರಿ.. ತೀಕ್ಷ್ಣವಾದ ಬುದ್ಧಿಶಕ್ತಿ, ಅಚಲ ನಿರ್ಣಯ, ಕಾನೂನಿನ ಆಳವಾದ ಜ್ಞಾನ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ಸ್ವರಾಜ್ ಫ್ಯಾಮಿಲಿಯ ಮತ್ತೊಬ್ಬ ಹೆಗ್ಗುರುತು ಎಂದೇ ಗುರುತಿಸಿಕೊಳ್ತಿದ್ದಾರೆ.

ಹೇಗಿದೆ ಕಾನೂನು ಪಾಂಡಿತ್ಯ..?

ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಮತ್ತು ಲಂಡನ್​ ಇನ್ನರ್ ಟೆಂಪಲ್ (Inner Temple in London)​​ ಕಾನೂನು ಪದವಿ ಪಡೆದುಕೊಂಡಿರುವ ಸ್ವರಾಜ್, 2007 ರಿಂದ ವಕೀಲ ವೃತ್ತಿಯನ್ನು ಶುರುಮಾಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲೇ ತಮ್ಮ ಜ್ಞಾನದ ಮೂಲಕ ಉನ್ನತ ಶ್ರೇಣಿ ಅಲಂಕರಿಸಿರುವ ಇವರು.. ಸಿವಿಲ್, ಕ್ರಿಮಿನಲ್, ಕಮರ್ಷಿಯಲ್, ಟ್ಯಾಕ್ಸ್​, ಸಂವಿಧಾನ ವಿಚಾರಗಳ ಬಗ್ಗೆ ಆಳವಾದ ಹಿಡಿತ ಹೊಂದಿದ್ದಾರೆ. ದೆಹಲಿ ಹೈಕೋರ್ಟ್​ ಹಾಗೂ ಸುಪ್ರೀಂ ಕೋರ್ಟ್​ ಎರಡರಲ್ಲೂ ನ್ಯಾಯವಾದಿಯಾಗಿ ಕೆಲಸ ಮಾಡ್ತಿದ್ದಾರೆ. Legasis Partners ಜೊತೆಗೆ ಆತ್ಮೀಯ ಒಡನಾಟ ಹಿನ್ನೆಲೆಯಲ್ಲಿ ಕಾನೂನು ಭಾತೃತ್ವದ ವ್ಯಾಪ್ತಿಯಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಇನ್ನು, ಲಂಡನ್​ ವಾರ್ವಿಕ್ ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬ್ಯಾಚುಲರ್ ಪದವಿಯನ್ನೂ ಪಡೆದುಕೊಂಡಿದ್ದಾರೆ.

ರಾಜಕೀಯ ಜರ್ನಿ..

ಬಾನ್ಸುರಿ ಅವರು ಕಾನೂನು ಕ್ಷೇತ್ರಗಳಲ್ಲಿ ಹಿಡಿತ ಹೊಂದಿರುವುದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಪ್ರಭಾವ ಬೀರಿದ್ದಾರೆ. ರಾಜಕೀಯ ಪ್ರವೇಶವು ಅವರಿಗಿದ್ದ ರಾಜಕೀಯ ಆಕಾಂಕ್ಷೆ ಮತ್ತು ಕೆಲವು ಆರೋಪಗಳಿಂದ ಆಗಿದೆ. ತಮ್ಮ ತಾಯಿ ಸುಷ್ಮ ಸ್ವರಾಜ್, ಹೆಜ್ಜೆಗಳನ್ನು ಅನುಸರಿಸಿ ರಾಜಕೀಯಕ್ಕೆ ಪ್ರವೇಶ ಮಾಡಿ ಸಾರ್ವಜನಿಕ ಸೇವೆ ಹಾಗೂ ಆಡಳಿತದಲ್ಲಿ ಬದ್ಧತೆಯನ್ನು ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಮೋದಿ, ರಾಹುಲ್, ಅಮಿತ್ ಶಾ.. 10 VIP ಅಭ್ಯರ್ಥಿಗಳ ಕ್ಷೇತ್ರ, ಎದುರಾಳಿ ಕುರಿತ ಕಂಪ್ಲೀಟ್ ಡೀಟೇಲ್ಸ್..!

ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿರುವ ಬಾನ್ಸುರಿ, ದೆಹಲಿ ಬಿಜೆಪಿಯ ಕಾನೂನು ಘಟಕದ ಸಂಚಾಲಕಿಯೂ ಆಗಿದ್ದಾರೆ. ಈ ಮೂಲಕ ರಾಜಕೀಯ ಚಟುವಟಿಕೆ ಸಕ್ರಿಯರಾಗಿರುವ ಅವರು, ಪಕ್ಷಕ್ಕೆ ಬೇಕಾಗಿರುವ ಕಾನೂನು ಬೆಂಬಲವನ್ನೂ ನೀಡುತ್ತಿದ್ದಾರೆ. ಇದೀಗ ನ್ಯೂ ದೆಹಲಿ ಲೋಕಸಭೆ ಕ್ಷೇತ್ರದ ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದು, ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಇಂದು ಅನೇಕ ಬಿಜೆಪಿಯ ಅನೇಕ ಬೆಂಬಲಿಗರು ಬಾನ್ಸುರಿ ಸ್ವರಾಜ್​​ ಅವರಲ್ಲಿ ದಿವಂಗತ ಸುಷ್ಮ ಸ್ವರಾಜ್ ಅವರನ್ನು ನೋಡ್ತಿದ್ದಾರೆ.

ವೈಯಕ್ತಿ ಜೀವನ..

1982ರಲ್ಲಿ ನವದೆಹಲಿಯಲ್ಲಿ ಜನಿಸಿರುವ ಬಗ್ಗೆ ಮಾಹಿತಿ ಇದೆ. ಅವರ ಗ್ಲಾಮರ್, ವೃತ್ತಿ ಜೀವನಕ್ಕೆ ಸಂಬಂಧಿಸಿ ಸಾಕಷ್ಟು ಮಾಹಿತಿಗಳು ಸಿಕ್ಕರೂ, ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಸ್ವರಾಜ್ ಕುಟುಂಬದ ಹಿನ್ನೆಲೆ ಹೊಂದಿದ್ದರೂ, ವೈಯಕ್ತಿಕ ಬದುಕಿನ ಬಗ್ಗೆ ಆಳವಾದ ಮಾಹಿತಿ ಇಲ್ಲಿಯೂ ಇಲ್ಲ. ಅವರ ಮದುವೆ ವಿಚಾರವಾಗಲಿ ಅಥವಾ ರಿಲೇಷನ್​ಶಿಪ್​ ಕುರಿತ ಯಾವುದೇ ಮಾಹಿತಿ ಇಲ್ಲ. ಬನ್ಸುರಿ ಮದುವೆ ಆಗಿಲ್ಲ ಎಂಬಷ್ಟೇ ಮಾಹಿತಿ ಇದೆ.

ಬಾನ್ಸೂರಿ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಂಕಷ್ಟಗಳು ಕೂಡ ಎದುರಾಗಿದ್ದವು. 2015ರಲ್ಲಿ ಅವರಿಗೆ ಮೈನರ್ ಸ್ಟ್ರೋಕ್ ಆಗಿತ್ತು. ಅತಿಯಾದ ಕೆಲಸದ ಒತ್ತಡದಿಂದ ಹೀಗೆ ಆಗಿದೆ ಎಂದು ಹೇಳಲಾಗಿದೆ. ನಿರಂತರ ವೈದ್ಯಕೀಯ ಚಿಕಿತ್ಸೆ ಬಳಿಕ ಗುಣಮುಖರಾಗಿ ತಮ್ಮ ಕಾರ್ಯಚಟುವಟಿಕೆಗಳಿಗೆ ಹಿಂತಿರುಗಿದರು. ಇನ್ನು ಕಾನೂನು ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯಿಂದಾಗಿ ಅವರ ಆರ್ಥಿಕ ಸ್ಥಿತಿ ಭದ್ರವಾಗಿದೆ ಎಂದು ವರದಿಗಳು ಹೇಳಿವೆ. ಸುಮಾರು 9 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ‘SIES – Rise With Education’ ಗೌರವ ದೊರೆತಿದೆ.

ವಿವಾದಗಳು..!

ಬಾನ್ಸುರಿ ಸ್ವರಾಜ್ ಅವರು ವಿವಾದಗಳಿಂದಲೂ ಹೊರತಾಗಿಲ್ಲ, ಉದ್ಯಮಿ ಲಲತ್ ಮೋದಿ ಅವರ ಪಾಸ್​ಪೋರ್ಟ್ ಪ್ರಕರಣದಲ್ಲಿ ಬಾನ್ಸುರಿ ಹೆಸರು ತಳುಕು ಹಾಕಿಕೊಂಡಿತ್ತು. ಸುಷ್ಮ ಸ್ವರಾಜ್ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ, ಬಾನ್ಸುರಿ ಸ್ವರಾಜ್ ತಮ್ಮ ಪ್ರಭಾವ ಬಳಸಿ ಲಲಿತ್ ಮೋದಿಗೆ ಪಾಸ್​ಪೋರ್ಟ್​ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ.

ಬರೋಬ್ಬರಿ 16 ವರ್ಷಗಳ ಕಾಲ ವಕೀಲರಾಗಿ ಅನುಭವ ಪಡೆದಿರುವ ಬಾನ್ಸುರಿ ಸ್ವರಾಜ್, ಇಂದು ಬಿಜೆಪಿ ಕಾನೂನು ಘಟಕಕ್ಕೆ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಇದೇ ಕಾರಣಕ್ಕೆ 2023ರಲ್ಲಿ ಅವರಿಗೆ ದೆಹಲಿ ಬಿಜೆಪಿಯ ಕಾನೂನು ಘಟಕದ ಸಂಚಾಲಕಿಯನ್ನಾಗಿ ಮಾಡಲಾಗಿತ್ತು. ಇದೀಗ ಲೋಕಸಭೆ ಚುನಾವಣೆಯ ಟೆಕೆಟ್​ ಕೂಡ ಒಲಿದು ಬಂದಿದ್ದು, ಅಮ್ಮ ಸುಷ್ಮಾ ಸ್ವರಾಜ್​ರಂತೆ ರಾಜಕೀಯದಲ್ಲಿ ದಿಟ್ಟ ಹೆಜ್ಜೆಯನ್ನಿಡಲು ತಯಾರಿ ನಡೆಸ್ತಿದ್ದಾರೆ. ಅದರಂತೆ ಬಾನ್ಸುರಿ ಸ್ವರಾಜ್ ಮೇಲೆ ನಿರೀಕ್ಷೆಗಳು ಕೂಡ ದುಪ್ಪಟ್ಟು ಇವೆ. ಬಿಜೆಪಿ ಹೈಕಮಾಂಡ್ ದೆಹಲಿಗೆ ಮದನ್ ಲಾಲ್ ಖೂರಾನಾ ಅವರಂಥ ಮತ್ತೊಬ್ಬ ನಾಯಕನ ಹುಡುಕಾಟದಲ್ಲಿದೆ. ಇದೇ ಕಾರಣಕ್ಕೆ ಸುಷ್ಮ ಸ್ವರಾಜ್ ಅವರ ಪುತ್ರಿ, ಬಾನ್ಸುರಿ ಸ್ವರಾಜ್​ಗೆ ಟಿಕೆಟ್​ ನೀಡಿ ಅವರನ್ನು ರಾಜಕೀಯವಾಗಿ ಎತ್ತರಕ್ಕೆ ತೆಗೆದುಕೊಂಡು ಹೋಗುವ ಇರಾದೆಯಲ್ಲಿದೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣಾ ಅಖಾಡದಲ್ಲಿ ಸ್ವರಾಜ್ ಕುಟುಂಬದ ಕುಡಿ; ಕಾನೂನು ಪಾಂಡಿತ್ಯ ಹೊಂದಿರೋ ಬಾನ್ಸುರಿ ಯಾರು..?

https://newsfirstlive.com/wp-content/uploads/2024/03/bansuri-swaraj-3.jpg

Load More