ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಬಿರುಸು
ಪುಷ್ಪ ಅಮರನಾಥ್ ಬಳಿಕ ಯಾರಾಗ್ತಾರೆ ಯುವ ಘಟಕದ ಮುಖ್ಯಸ್ಥರು?
ರಾಜ್ಯ ಮಹಿಳಾ ಅಧ್ಯಕ್ಷರು, ಯುವ ಘಟಕದ ಅಧ್ಯಕ್ಷ ಗಾದಿಗೆ ಪೈಪೋಟಿ!
ರಾಜ್ಯ ಕಾಂಗ್ರೆಸ್ನ 2 ಪ್ರಮುಖ ಘಟಕಗಳ ಸಾರಥಿಯ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಮುಖ್ಯ ಘಟಕದ ಜತೆಗೆ ಪರಿಣಾಮಕಾರಿಯಾಗಿ ಸಂಘಟನೆ ಕೆಲಸ ಮಾಡುವ, ಎದುರಾಳಿಗಳ ವಿರುದ್ಧ ಹೋರಾಟ ನಡೆಸಿ ದನಿ ಎತ್ತುವ ಮಹಿಳಾ ಘಟಕ ಹಾಗೂ ಯುವ ಘಟಕದ ಮುಖ್ಯಸ್ಥರನ್ನು ಆಯ್ಕೆ ಮಾಡುವ ಎರಡು ರೀತಿಯ ಪ್ರಕ್ರಿಯೆ ಚುರುಕುಗೊಂಡಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಸರ್ವಿಸ್ ಸ್ಟಾಫ್ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಮೂರು ಬಾರಿ ಪ್ರಯತ್ನ ನಡೆದರೂ ಹೊಂದಾಣಿಕೆ ಆಗಿರಲಿಲ್ಲ. ಹೀಗಾಗಿ ಹಾಲಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರನ್ನೇ ಅವಧಿ ಮುಗಿದರೂ ಮುಂದುವರಿಸಲಾಗಿತ್ತು. ಇದೀಗ ದೆಹಲಿಯಲ್ಲಿ ಆಯ್ಕೆ ಪ್ರಕ್ರಿಯೆಗೆ ಎಐಸಿಸಿ ಮಹಿಳಾ ಘಟಕ ಕೈಹಾಕಿದೆ. ಮಹಿಳಾ ಘಟಕದ ಅಧ್ಯಕ್ಷೆ ಅಲಕಾ ಲಂಬಾ ರಾಜ್ಯದ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿ ಸಮಾಲೋಚನೆ ನಡೆಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ರಕ್ಷಿತಾ ಈಟಿ, ಕೃಪಾ ಅಮರ್ ಆಳ್ವಾ, ಕಮಲಾಕ್ಷಿ ರಾಜಣ್ಣ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ನೆಟಲ್ಡಾ ಡಿಸೋಜಾ, ಕವಿತಾ ರೆಡ್ಡಿ ಹೆಸರೂ ಸಹ ಚರ್ಚೆಗೆ ಬಂದಿದೆ. ಬಹುತೇಕ ಸೌಮ್ಯ ರೆಡ್ಡಿ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ಗೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದಲ್ಲಿ ಜವಾಬ್ದಾರಿ ನೀಡಲಾಗಿದೆ.
ನಂಬರ್:1 ಸೌಮ್ಯ ರೆಡ್ಡಿ
ಜಯನಗರ ಶಾಸಕಿಯಾಗಿ ಒಂದು ಬಾರಿ ಶಾಸನ ಸಭೆಯಲ್ಲಿದ್ದ ಸೌಮ್ಯ ರೆಡ್ಡಿ ಕಾಂಗ್ರೆಸ್ನಲ್ಲಿ ಚಿರಪರಿಚಿತ. ತಂದೆ ರಾಮಲಿಂಗಾ ರೆಡ್ಡಿ ಸಚಿವರೂ ಆಗಿರುವ ಕಾರಣ, ಪಕ್ಷದ ವಿವಿಧ ಹೋರಾಟದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇರುವ ಕಾರಣ ಸೌಮ್ಯ ರೆಡ್ಡಿಗೆ ಅವಕಾಶ ಕೊಡುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದ ಬಹುತೇಕ ನಾಯಕರಲ್ಲಿದೆ.
ನಂಬರ್:2 ರಕ್ಷಿತಾ ಈಟಿ
ಹಿಂದುಳಿದ ವರ್ಗದಿಂದ ಬಂದ ರಕ್ಷಿತಾ ಈಟಿ, ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾಜಿಕ ವಲಯದಲ್ಲಿ ಮುಂದಿದ್ದಾರೆ. ಸಿಎಂ ಸಿದ್ದರಾಮಯ್ಯರ ಆಪ್ತವಲಯದಲ್ಲಿ ಗುರುತಿಸಿಕೊಂಡಿರೋ ರಕ್ಷಿತಾ ಈಟಿ ಪರ ಸರ್ವೇಯಲ್ಲೂ ಒಳ್ಳೇ ರೆಸ್ಪಾನ್ಸ್ ಬಂದಿದೆ. ಜೊತೆಗೆ ಕೋವಿಡ್ ಸಮಯದಲ್ಲಿ ಜನರಿಗೆ ಫುಡ್ ಕಿಟ್ ಹಾಗೂ ದಿನಸಿಪದಾರ್ಥಗಳನ್ನ ಕೊಟ್ಟು, ಜನರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಅತ್ತ ಮಹಿಳಾ ಘಟಕದ ಅಧ್ಯಕ್ಷ ಚುನಾವಣೆ ನಡೆದ್ರೆ, ಇತ್ತ ಯುವ ಕಾಂಗ್ರೆಸ್ ಅಧ್ಯಕ್ಷರಾಗುವುದಕ್ಕೂ ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ ಇದೆ. ಕಳೆದ ಬಾರಿ ಆಯ್ಕೆಯಾಗಿದ್ದ ಮೊಹಮ್ಮದ್ ನಲಪಾಡ್ ಪುನರಾಯ್ಕೆ ಬಯಸಿದ್ದಾರೆ. ಅದೇ ರೀತಿ ಯುವ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ್ ಕೂಡ ಸ್ಪರ್ಧಿಸಲು ಬಯಸಿದ್ದಾರೆ. ಎನ್ಎಸ್ಯುಐ ಅಧ್ಯಕ್ಷರಾಗಿದ್ದ ಕೀರ್ತಿ ಗಣೇಶ್, ಕಳೆದ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿನೋದ್ ಅಸೂಟಿ, ಹೆಚ್.ಆರ್ ದೀಪಿಕಾ ರೆಡ್ಡಿ ಕೂಡ ಆಕಾಂಕ್ಷಿಗಳಾಗಿದ್ದಾರೆ.
ಇದನ್ನೂ ಓದಿ: ಅತಿ ವೇಗದಿಂದ ಅಪಘಾತ.. ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು; ಮಗಳು, 1 ವರ್ಷದ ಮಗು ಸ್ಥಿತಿ ಗಂಭೀರ
ಯಾರಾಗ್ತಾರೆ ಕಾಂಗ್ರೆಸ್ ಯುವ ನಾಯಕ?
ಅಧ್ಯಕ್ಷರ ಆಯ್ಕೆಗಾಗಿ ಜುಲೈ 24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 2ರವರೆಗೆ ಅಂತಿಮ ದಿನವಾಗಿದೆ, ಆಗಸ್ಟ್ 3ರಿಂದ 8ರವರೆಗೆ ನಾಮಪತ್ರ ಪರಿಶೀಲನೆ ನಡೆದು, ಆಗಸ್ಟ್ 9ರಂದು ನಾಮಪತ್ರ ಸಲ್ಲಿಸಿದವರ ಪೈಕಿ ಅರ್ಹರನ್ನು ಅಂತಿಮಗೊಳಿಸಲಾಗುತ್ತದೆ. ಸದಸ್ಯತ್ವ ನೋಂದಣಿಯನ್ನು ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೂ ಮಾಡಲಾಗುವುದು. ಈ ಬಾರಿ ಹೊಸ ತೀರ್ಮಾನವೆಂದರೆ, ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವರಿಗೆ ಇತರೆ ಸ್ಥಾನ ನೀಡಲಾಗುತ್ತದೆ. ಹೀಗಾಗಿ ನೋಂದಣಿ ಮಾಡಿಸಲು ಕೃತಕ ಪೈಪೋಟಿ ಸೃಷ್ಟಿಸಲಾಗುತ್ತಿದೆ. ಒಟ್ಟಾರೆ ಹಸ್ತ ಪಾಳಯದಲ್ಲಿ ಒಂದ್ಕಡೆ ರಾಜ್ಯ ಮಹಿಳಾ ಅಧ್ಯಕ್ಷರು ಹಾಗೂ ಯುವ ಘಟಕದ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಯುತ್ತಿದೆ. ಅಂತಿಮವಾಗಿ ಯಾರು ಸ್ಥಾನ ಅಲಂಕರಿಸುತ್ತಾರೋ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ