newsfirstkannada.com

×

ಯುದ್ಧದ ನಡುವೆ ಮತ್ತೊಂದು ಅನಾಹುತದ ಆತಂಕ: ಇಸ್ರೇಲ್​-ಲೆಬನಾನ್​ ಗಡಿಯಲ್ಲಿ ಕಾವಲಿಗೆ ನಿಂತ 900 ಭಾರತೀಯ ಯೋಧರು!

Share :

Published October 18, 2023 at 8:58am

    ಇಡೀ ಗಾಜಾ ಸ್ಟ್ರಿಪ್​ನ ಸರ್ವನಾಶಕ್ಕೆ ಪಣ ತೊಟ್ಟ ಇಸ್ರೇಲ್​

    ಲೆಬನಾನ್ ದಕ್ಷಿಣ ಗಡಿಯಲ್ಲಿ ಭಾರತೀಯ ಯೋಧರ ನಿಯೋಜನೆ

    ಹಿಜ್ಬುಲ್ಲಾ-ಇಸ್ರೇಲ್​ ಸೇನೆ ನಡುವೆ ಉದ್ವಿಗ್ನತೆ, ಯೋಧರು ಕಾವಲು

ಹಮಾಸ್​ ಭಯೋತ್ಪಾದಕರು ಇಸ್ರೇಲ್​ಗೆ ನುಗ್ಗಿ ಹಿಂಸಾಚಾರದಲ್ಲಿ ತೊಡಗಿದ್ದು ಅಲ್ಲಿನ ಜನರನ್ನು ಮನಬಂದಂತೆ ಶೂಟ್ ಮಾಡಿ ಹತ್ಯೆ ಮಾಡ್ತಿದ್ದಾರೆ. ಇದಕ್ಕೆ ಪ್ರತಿ ದಾಳಿ ಮಾಡುತ್ತಿರುವ ಇಸ್ರೇಲ್​, ಪ್ಯಾಲೆಸ್ತೀನ್ ಭಾಗವಾಗಿ ಇಡೀ ಗಾಜಾ ಸ್ಟ್ರಿಪ್​ನ ಸರ್ವನಾಶಕ್ಕೆ ಪಣ ತೊಟ್ಟಿದೆ. ಏರ್​ಸ್ಟ್ರೈಕ್​ ಮೂಲಕ ಬಾಂಬ್​ಗಳನ್ನು ಹಾಕುತ್ತಿರುವ ಇಸ್ರೇಲ್​ ದೊಡ್ಡ, ದೊಡ್ಡ ಕಟ್ಟಡಗಳನ್ನು ನೆಲ ಸಮಮಾಡಿದೆ. ಈ ಎಲ್ಲದರ ನಡುವೆ ಲೆಬನಾನ್‌ನ ದಕ್ಷಿಣ ಗಡಿಯಲ್ಲಿ 900 ಭಾರತೀಯ ಯೋಧರನ್ನು ನಿಯೋಜನೆ ಮಾಡಲಾಗಿದೆ.

ಗಾಜಾ ಸ್ಟ್ರಿಪ್​

ಲೆಬನಾನ್​ ದಕ್ಷಿಣ ಗಡಿಯಲ್ಲಿ ಇರಾನ್​ ಬೆಂಬಲಿತ ಸಂಘಟನೆ ಹಿಜ್ಬುಲ್ಲಾ ಮತ್ತು ಇಸ್ರೇಲ್​ ಸೇನೆ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭಾಗವಾಗಿ ಭಾರತೀಯ ಸೈನಿಕರನ್ನು ಲೆಬನಾನ್​ ಮತ್ತು ಇಸ್ರೇಲ್​ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಪ್ಯಾಲಿಸ್ತೀನ್ ನಾಗರಿಕರ ಮೇಲೆ ದಾಳಿ ಮಾಡದಂತೆ ಇರಾನ್, ಇಸ್ರೇಲ್​ಗೆ ವಾರ್ನಿಂಗ್ ಮಾಡಿದೆ. ಇಸ್ರೇಲ್, ದಾಳಿಯನ್ನು​ ಮುಂದುವರೆಸಿದರೆ ನಮ್ಮಿಂದ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದರಿಂದ ಇಸ್ರೇಲ್​, ಹಮಾಸ್​, ಪ್ಯಾಲೆಸ್ತೀನ್ ಭೀಕರ ಯುದ್ಧದ ನಡುವೆ ಇರಾನ್​ ಎಂಟ್ರಿಯಾಗುವುದು ದಟ್ಟವಾಗಿ ಕಾಣುತ್ತಿದೆ.

Israel-Lebanon ಗಡಿಯಲ್ಲಿ ವಿಶ್ವ ಸಂಸ್ಥೆಯ ​ಐಎಫ್​ಐಎಲ್ (United Nations Interim Force in Lebanon) ಭಾಗವಾಗಿ 900 ಭಾರತೀಯ ಯೋಧರು ನಿಯೋಜನೆಗೊಂಡಿದ್ದಾರೆ. UNIFILನಲ್ಲಿರುವ ಭಾರತೀಯ ಯೋಧರು ಸುಮಾರು 110 ಕಿಲೋ ಮೀಟರ್​ ದೂರ ಬ್ಲೂ ಲೈನ್​​ನಲ್ಲಿ ನಿಂತಿದ್ದಾರೆ. ಈ ಹಿಂದೆ ಇಸ್ರೇಲ್ ಮತ್ತು ಹೆಜ್ಬುಲ್ಲ ನಡುವೆ ಸಂಘರ್ಷ ನಡೆದಾಗಲೂ ಭಾರತೀಯ ಯೋಧರು ನಿಯೋಜನೆಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುದ್ಧದ ನಡುವೆ ಮತ್ತೊಂದು ಅನಾಹುತದ ಆತಂಕ: ಇಸ್ರೇಲ್​-ಲೆಬನಾನ್​ ಗಡಿಯಲ್ಲಿ ಕಾವಲಿಗೆ ನಿಂತ 900 ಭಾರತೀಯ ಯೋಧರು!

https://newsfirstlive.com/wp-content/uploads/2023/10/Lebanon_Border.jpg

Load More