newsfirstkannada.com

ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್‌ಗೆ ಮುಂದಾಗಿದ್ದೇಕೆ? ಫ್ಯಾಮಿಲಿ ಕೋರ್ಟ್‌ನಲ್ಲಿ ಹೇಳಿದ್ದೇನು?

Share :

Published June 7, 2024 at 4:51pm

Update June 7, 2024 at 5:20pm

  ಡಿವೋರ್ಸ್ ಅರ್ಜಿಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಹೇಳಿದ್ದೇನು?

  ನಿನ್ನೆಯಷ್ಟೇ ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಇಬ್ಬರು ಅರ್ಜಿ ಸಲ್ಲಿಕೆ

  ಸಹಬಾಳ್ವೆ ನಿಲ್ಲಿಸಲು ಮುಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಂಪತಿ

ಬೆಂಗಳೂರು: ಕನ್ನಡದ ಖ್ಯಾತ ಱಪರ್ ಚಂದನ್ ಶೆಟ್ಟಿ ಹಾಗೂ ಗಿಚ್ಚಿಗಿಲಿಗಿಲಿ ಖ್ಯಾತಿಯ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಜೂನ್‌ 06ರಂದೇ ಫ್ಯಾಮಿಲಿ ಕೋರ್ಟ್‌ನಲ್ಲಿ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ಡಿವೋರ್ಸ್‌ ಕೇಸ್ ನಂ. MC 3388/2024.

ನಿನ್ನೆಯಷ್ಟೇ ಫ್ಯಾಮಿಲಿ ಕೋರ್ಟ್‌ನಲ್ಲಿ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ ಅರ್ಜಿಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಜೊತೆ ಸಹಬಾಳ್ವೆ ನಿಲ್ಲಿಸಲು ಮುಂದಾಗಿದ್ದೇವೆ ಎಂದಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಕೋರಲಾಗಿದೆ.

ಚಂದನ್ ಶೆಟ್ಟಿ, ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್‌ಗೆ ಇಬ್ಬರೂ ಒಪ್ಪಿರುವುದರಿಂದ ಇಬ್ಬರಿಗೂ ಒಬ್ಬರೇ ಮಹಿಳಾ ವಕೀಲರಿದ್ದಾರೆ. ಡಿವೋರ್ಸ್‌ಗಾಗಿ ಫ್ಯಾಮಿಲಿ ಕೋರ್ಟ್‌ಗೆ ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಜರಾಗಿದ್ದಾರೆ.

ಇದನ್ನೂ ಓದಿ: ಕೊನೆ ಬಾರಿ ತಮ್ಮ ಲವ್​ ಸ್ಟೋರಿ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದ ಚಂದನ್​​, ನಿವೇದಿತಾ..! 

ಚಂದನ್ ಮತ್ತು ನಿವೇದಿತಾ ಇಬ್ಬರೂ ಕ್ಯೂಟ್ ಕಪಲ್ ಎಂದೇ ಹೆಸರುವಾಸಿಯಾಗಿದ್ದರು. 2018ರ ಬಿಗ್ ಬಾಸ್ ಸೀಸನ್‌ 5ರಲ್ಲಿ ಪರಿಚಯವಾಗಿದ್ದ ಚಂದನ್ & ನಿವೇದಿತಾ ಜೋಡಿ 2019ರಲ್ಲಿ ಮೈಸೂರು ದಸರಾದ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದರು.

2020ರಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರ ಮದುವೆಯನ್ನು ಕುಟುಂಬಸ್ಥರು ಬಹಳ ಅದ್ಧೂರಿಯಾಗಿ ಮಾಡಿದ್ದರು. ಈ ತಾರಾ ಜೋಡಿ ರಾಜ-ರಾಣಿ ಸೇರಿದಂತೆ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡ್ತಾ ಎಲ್ಲರ ಮನಸು ಗೆದ್ದಿದ್ದ ಕಪಲ್ ಈಗ ಬೇರೆ, ಬೇರೆ ಆಗಲು ತೀರ್ಮಾನಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್‌ಗೆ ಮುಂದಾಗಿದ್ದೇಕೆ? ಫ್ಯಾಮಿಲಿ ಕೋರ್ಟ್‌ನಲ್ಲಿ ಹೇಳಿದ್ದೇನು?

https://newsfirstlive.com/wp-content/uploads/2024/06/chandan-shetty2.jpg

Load More