ನಿತ್ಯ ತುಪ್ಪದಲ್ಲಿ ಮಾಡಿದ ಆಹಾರ ತಿನ್ನುವುದರಿಂದ ಕಾದಿದೆ ಅಪಾಯ
ಬಂಗಾರ ಬಣ್ಣದ ಈ ದ್ರಾವಣ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?
ತುಪ್ಪದ ಬಳಕೆ ಮಿತಿಮೀರಿದರೆ ಹೃದಯ ಸಂಬಂಧ ಕಾಯಿಲೆಗಳು ನಂಟು
ತುಪ್ಪ, ಭಾರತೀಯರ ಪ್ರತಿ ಅಡುಗೆಮನೆಯಲ್ಲಿಯೂ ಘಮಿಸುವ ಹೆಮ್ಮೆಯ ಪದಾರ್ಥ. ತುಪ್ಪ ಇಲ್ಲದೇ ಹಬ್ಬವಿಲ್ಲ. ತುಪ್ಪವಿಲ್ಲದೆ ನೈವೇದ್ಯವಿಲ್ಲ. ತುಪ್ಪದಾಚೆ ಸಿಹಿ ಪದಾರ್ಥಗಳು ತಯಾರಾಗುವುದೇ ವಿರಳ. ತುಪ್ಪ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ತನ್ನದೊಂದು ಜಾಗ ಮಾಡಿಕೊಂಡು ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿದೆ. ಆದ್ರೆ ನಿತ್ಯ ಅಡುಗೆಯ ವಿಚಾರಕ್ಕೆ ಬಂದಾಗ. ನಿತ್ಯ ಅಡುಗೆಯಲ್ಲೂ ತುಪ್ಪದ ಬಳಕೆ ಎಷ್ಟು ಅನುಕೂಲ ಹಾಗೂ ಎಷ್ಟು ಅಪಾಯಕಾರಿ ಅನ್ನೋದನ್ನ ನಾವು ತಿಳಿದುಕೊಳ್ಳಲೇಬೇಕು.
ಇದನ್ನೂ ಓದಿ: ಮಧ್ಯಂತರ ಉಪವಾಸದಲ್ಲಿ ಈ ಪಾನೀಯಗಳನ್ನು ಸೇವಿಸಿ, ತೂಕ ಇಳಿಸಲು ಈ 8 ಡ್ರಿಂಕ್ ರಾಮಬಾಣ
ತುಪ್ಪವನ್ನು ಬೆಣ್ಣೆಯನ್ನು ಕಾಯಿಸುವ ಮೂಲಕ ಅದರ ಒಳಗಿನ ನೀರನ್ನು ಹಾಗೂ ಹಾಲಿನ ಅಂಶವನ್ನು ತೆಗೆಯುವುದರಿಂದ ತಯಾರು ಮಾಡಲಾಗುತ್ತದೆ. ಬೆಣ್ಣೆಯನ್ನು ಕಾಯಿಸುವಾಗ ಅದರಲ್ಲಿದ್ದ ನೀರು ಆವಿಯಾಗಿ ಹೋಗುತ್ತದೆ, ಹಾಲಿನ ಘನರೂಪ ಪ್ರತ್ಯೇಕಗೊಂಡ ಪಾತ್ರೆಯ ತಳದಲ್ಲಿ ಕೂರುತ್ತದೆ. ಚಿನ್ನದ ಬಣ್ಣದ ತುಪ್ಪ ಹರಳುಗಟ್ಟಿಕೊಂಡು ಘಮಿಸುತ್ತಾ ಸಿದ್ಧಗೊಳ್ಳುತ್ತದೆ.
ಇದನ್ನೂ ಓದಿ:ಜೇನುಹುಳದ ವಿಷ ಕ್ಯಾನ್ಸರ್ ಕೊಲ್ಲುತ್ತಾ? ಏನಿದು ಹೊಸ ಆವಿಷ್ಕಾರ? ನೀವು ಓದಲೇಬೇಕು!
ತುಪ್ಪದಲ್ಲಿ ಅತಿಹೆಚ್ಚು ಕೊಬ್ಬಿನಾಂಶ ಇರುತ್ತದೆ. ಶುದ್ಧಾತೀಶುದ್ಧ ತುಪ್ಪದಲ್ಲಿ ಶೇಕಡಾ 62 ರಷ್ಟು ಫ್ಯಾಟ್ ಇರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಅನೇಕ ಸಂಶೋಧನೆಗಳು ಹಾಗೂ ಅಧ್ಯಯನಗಳು ಹೇಳುವ ಪ್ರಕಾರ ಅತಿಯಾದ ತುಪ್ಪ ಸೇವನೆ ಮಾಡುವುದರಿಂದ ಅದರಲ್ಲಿದ್ದ ಎಲ್ಡಿಎಲ್ ಕೊಲೆಸ್ಟ್ರಾಲ್ ಅಂದ್ರೆ ಉತ್ತಮವಲ್ಲದ ಕೊಬ್ಬು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಹೀಗಾಗಿ ನಿತ್ಯ ತುಪ್ಪದಲ್ಲಿಯೇ ತಯಾರಾದ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ನಾವು ನಿತ್ಯ ತುಪ್ಪದಲ್ಲಿಯೇ ಸಿದ್ಧಗೊಂಡ ಖಾದ್ಯಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಂಶ ಅದರಲ್ಲೂ ದೇಹಕ್ಕೆ ಅಪಾಯ ತಂದಿಡಬಲ್ಲ ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಇದರಿಂದ ಹೃದಯಾಘಾತ ಹಾಗೂ ಹೃದಯಸ್ತಂಭನದಂತಹ ಕಾಯಿಲೆಗಳು ಬರುತ್ತವೆ. ಹೀಗಾಗಿ ಕಡಿಮೆ ತುಪ್ಪ ಬಳಕೆ ಮಾಡುವುದು. ಹಿತಮಿತವಾಗಿ ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ