2 ತಿಂಗಳಿಗೂ ಮುನ್ನವೇ ಶುರುವಾಯ್ತು ವಿಶ್ವಕಪ್ ಫೀವರ್
ಇಲ್ಲಿತನಕ ಒಂದು ಲೆಕ್ಕ.. ಈ ಸಲ ಬೇರೆಯದ್ದೇ ಲೆಕ್ಕ
ವಿಮಾನ ಪ್ರಯಾಣ ದರದಲ್ಲಿ ಮೂರು ಪಟ್ಟು ಹೆಚ್ಚಳ
ನೀವೆಲ್ಲರೂ ಥಿಯೇಟರ್ ಹೌಸ್ಫುಲ್ ಆಗೋದನ್ನು ನೋಡಿರ್ತಿರಾ. ಕ್ರಿಕೆಟ್ ಮಟ್ಟಿಗೆ ಹೌಸ್ಫುಲ್ ಪದ ಕೇಳೋದೇ ಕಮ್ಮಿ. ಒಂದು ವೇಳೆ ಕೇಳಿದ್ರೆ ಅದು ಇಂಡೋ-ಪಾಕ್ ಪಂದ್ಯದಿಂದ ಮಾತ್ರ ಸಾಧ್ಯ. 2023ರ ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಫುಲ್ ಡಿಮ್ಯಾಂಡ್ ಹೆಚ್ಚಿದೆ.
2023ರ ಒನ್ಡೇ ವಿಶ್ವಕಪ್ಗೆ ಕೌಂಟ್ಡೌನ್ ಶುರುವಾಗಿದೆ. ಕ್ರಿಕೆಟ್ ಮಹಾಜಾತ್ರೆಗೆ ಹೆಚ್ಚೇನೂ ದಿನ ಉಳಿದಿಲ್ಲ. ಜಸ್ಟ್ 70 ದಿನ ಮಾತ್ರ ಬಾಕಿ ಇದೆ. ಫಿಫ್ಟಿ ಓವರ್ ಬಿಗ್ ಬ್ಯಾಟಲ್ ಸಮೀಪಿಸ್ತಿದ್ದಂತೆ ಇಂಡೋ-ಪಾಕ್ ಪಂದ್ಯಕ್ಕೆ ಸಿಕ್ಕಾಪಟ್ಟೇ ಬೇಡಿಕೆ ಹೆಚ್ಚಿದೆ.
ಬದ್ಧವೈರಿ ಭಾರತ-ಪಾಕಿಸ್ತಾನ ಪಂದ್ಯ ಅಂದರೆ ಅದೇನೋ ಗೊತ್ತಿಲ್ಲ. ಎಲ್ಲಿಲ್ಲದ ಕ್ರೇಜ್ ಹುಟ್ಟಿಕೊಳ್ಳುತ್ತೆ. ಯಾಕಂದ್ರೆ ಇದೊಂದು ಬರೀ ಪಂದ್ಯವಲ್ಲ. ಅಂಗಳದಲ್ಲಿ ನಡೆಯುವ ಮಹಾಯುದ್ಧ. ಈ ಮಹಾಯುದ್ಧವೇ 2023ರ ಒನ್ಡೇ ವಿಶ್ವಕಪ್ನ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅಕ್ಟೋಬರ್ 15 ರಂದು ಕ್ರಿಕೆಟ್ ಲೋಕದ ಬದ್ಧವೈರಿಗಳ ಕಾಳಗ ನಡೆಯಲಿದ್ದು, ಎರಡು ತಿಂಗಳಿಗೂ ಮುನ್ನವೇ ಹೈ-ವೋಲ್ಟೇಜ್ ಪಂದ್ಯದ ಫೀವರ್ ಶುರುವಾಗಿದೆ.
ಇಂಡೋ-ಪಾಕ್ ಕಾಳಗಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಇಂಡೋ-ಪಾಕ್ ಪಂದ್ಯದ ಪವರ್ ಅಂತಹದ್ದು. ಇಡೀ ವಿಶ್ವಕಪ್ನಲ್ಲಿ ಎಲ್ಲಾ ಪಂದ್ಯಗಳ ಕಥೆ ಒಂದಾದ್ರೆ ಸಾಂಪ್ರದಾಯಿಕ ಎದುರಾಳಿಗಳ ಕಾಳಗದ ಕಥೆಯೇ ಬೇರೆ. ಬದ್ಧವೈರಿಗಳ ಕದನದಲ್ಲಿ ಸಿಗುವಷ್ಟು ರೋಚಕತೆ ಯಾವ ಪಂದ್ಯದಲ್ಲೂ ದೊರೆಯಲ್ಲ. ಹೀಗಾಗಿ ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಫುಲ್ ಡಿಮ್ಯಾಂಡ್ ಬಂದಿದೆ.
ಇಂಡೋ-ಪಾಕ್ ಪಂದ್ಯ ವೀಕ್ಷಿಸಲು ಹಾಸ್ಪಿಟಲ್ ಬೆಡ್ ಬುಕ್
ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಅಹ್ಮದಾಬಾದ್ ಹೋಟೆಲ್ಗಳಿಗೆ ಫುಲ್ ಡಿಮ್ಯಾಂಡ್ ಕುದುರಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಹೋಟೆಲ್ಗಳ ಮಾಲೀಕರು ಹೋಟೆಲ್ಗಳ ದರವನ್ನ ದುಪ್ಪಟ್ಟು ಮಾಡಿದ್ದಾರೆ. 8 ಸಾವಿರ ಇದ್ದ ಹೋಟೆಲ್ ದರ ಲಕ್ಷಕ್ಕೆ ತಲುಪಿದೆ. ಇದರಿಂದ ಹೈರಾಣಾಗಿರೋ ಅಭಿಮಾನಿಗಳು ಪರ್ಯಾಯ ಮಾರ್ಗ ಹುಡುಕಿದ್ದಾರೆ. ಅದೇನಂದ್ರೆ ಅಹ್ಮದಾಬಾದ್ನಲ್ಲಿನ ಆಸ್ಪತ್ರೆಗಳನ್ನೇ ಬುಕ್ ಮಾಡುತ್ತಿದ್ದಾರೆ.
ಯಾವ್ಯಾಗ ಹೋಟೆಲ್ ದರ ದಿನವೊಂದಕ್ಕೆ 50 ರಿಂದ 70 ಸಾವಿರ ಆಯ್ತೋ ಆಗ ಫ್ಯಾನ್ಸ್ ನರೇಂದ್ರ ಮೋದಿ ಸ್ಟೇಡಿಯಂ ಸಮೀಪ ಇರುವ ಆಸ್ಪತ್ರೆಗಳ ಬೆಡ್ ಬುಕ್ ಮಾಡಲು ಮುಂದಾಗಿದ್ದಾರೆ. ಬಾಡಿ ಚೆಕಪ್ ನೆಪದಲ್ಲಿ ಮೂರು ಹೊತ್ತು ಉಪಾಹಾರ ನೀಡುವ ಸೌಲಭ್ಯ ಹೊಂದಿರುವ ಆಸ್ಪತ್ರೆಗಳನ್ನು ಬುಕ್ ಮಾಡುತ್ತಿದ್ದಾರೆ.
ಆಸ್ಪತ್ರೆ ಬೆಡ್ಗಳಿಗೆ ಹೆಚ್ಚಿದ ಬೇಡಿಕೆ..! ಬೆಡ್ಸ್ ಫುಲ್ ಭರ್ತಿ
ಹೌದು, ಇಂಡೋ-ಪಾಕ್ ಪಂದ್ಯದ ಪ್ರಯುಕ್ತ ಅಹ್ಮದಾಬಾದ್ನಲ್ಲಿ ಆಸ್ಪತ್ರೆಗಳ ಬೇಡಿಕೆ ಹೆಚ್ಚಿದೆ. ಯಾಕಂದ್ರೆ ಹೋಟೆಲ್ಗಳಿಗೆ ಹೋಲಿಸಿದ್ರೆ ಇಲ್ಲಿ ಶುಲ್ಕವೂ ಕಮ್ಮಿ. ಹಾಸಿಗೆಗೆ ದಿನಕ್ಕೆ 3 ಸಾವಿರದಿಂದ 25 ಸಾವಿರದವರೆಗೆ ಶುಲ್ಕ ವಿಧಿಸುತ್ತವೆ. ಇಲ್ಲಿ ಆಹಾರವೂ ನೀಡಲಾಗುತ್ತದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳು ಹೋಟೆಲ್ನಿಂದ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿವೊಬ್ಬರು ಹೇಳುವ ಪ್ರಕಾರ ಹೀಗಾಗಲೇ ಅಕ್ಟೋಬರ್ 20 ರ ತನಕ ಬೆಡ್ ಬುಕ್ ಆಗಿವೆಯಂತೆ.
ವಿಮಾನ ದರ ಮೂರು ಪಟ್ಟು ಹೆಚ್ಚಳ
ಬರೀ ಹೋಟೆಲ್, ಆಸ್ಪತ್ರೆಗಳ ದರ ಮಾತ್ರ ಹೆಚ್ಚಳವಾಗಿಲ್ಲ. ಬದಲಿಗೆ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದ ಕಾರಣಕ್ಕಾಗಿ ವಿಮಾನದ ದರವು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಎರಡು ತಿಂಗಳಿಗೂ ಮುನ್ನವೇ ಪಂದ್ಯ ವೀಕ್ಷಿಸಲು ಫ್ಲೈಟ್ ಬುಕ್ಕಿಂಗ್ ಶುರುವಾಗಿದ್ದು, ವಿಮಾನದ ದರ 40 ಸಾವಿರ ರೂಪಾಯಿಗೂ ಅಧಿಕವಾಗಿದೆ. ನಾರ್ಮಲ್ ದಿನದಲ್ಲಿ ಚೆನ್ನೈ ಟು ಅಹ್ಮದಾಬಾದ್ ವಿಮಾನ ದರ 10 ಸಾವಿರ ರೂಪಾಯಿ ಇರ್ತಿತ್ತು. ಆದ್ರೀಗ ವಿಶ್ವಕಪ್ ಪಂದ್ಯಾವಳಿ ಹಿನ್ನಲೆ ದರ ಮೂರು ಪಟ್ಟು ಏರಿಕೆಯಾಗಿದೆ.
ಒಟ್ಟಿನಲ್ಲಿ ಹಾಸ್ಪಿಟಲ್ ಬೆಡ್ ಬುಕ್ ಮತ್ತು ಹೋಟೆಲ್ ದರ ನೋಡಿದ್ರೆ ಇಂಡೋ-ಪಾಕ್ ವಿಶ್ವಕಪ್ ಪಂದ್ಯದ ಕ್ರೇಜ್ ಯಾವ ಮಟ್ಟಿಗೆ ಇದೆ ಅನ್ನೋದು ಗೊತ್ತಾಗುತ್ತೆ. ಒನ್ಡೇ ವಿಶ್ವಕಪ್ ಸಮೀಪಿಸಿದ ಬೆನ್ನಲ್ಲೇ ಈ ಕ್ರೇಜ್ ಮತ್ತಷ್ಟು ಹೆಚ್ಚಾದ್ರು ಆಶ್ಚರ್ಯವಿಲ್ಲ.
ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್