ನಿಮ್ಮ ಮುಖದ ಮೇಲೆ ಪದೇ ಪದೇ ಮೊಡವೆ ಹುಟ್ಟಿಕೊಳ್ಳಲು ಇದೇ ಮುಖ್ಯ ಕಾರಣ ನೋಡಿ.. ಏನದು?

author-image
Veena Gangani
Updated On
ನಿಮ್ಮ ಮುಖದ ಮೇಲೆ ಪದೇ ಪದೇ ಮೊಡವೆ ಹುಟ್ಟಿಕೊಳ್ಳಲು ಇದೇ ಮುಖ್ಯ ಕಾರಣ ನೋಡಿ.. ಏನದು?
Advertisment
  • ಮೊಡವೆ ಬಂದ ಜಾಗದಲ್ಲೇ ಮತ್ತೆ ಮತ್ತೆ ಹುಟ್ಟಿಕೊಳ್ಳುವ ಪಿಂಪಲ್ಸ್​!
  • ಮುಖದ ಮೇಲಿನ ಕೊಳಕಿನಿಂದಲೂ ಮೊಡವೆ ಕಾಣಿಸುತ್ತೆ ಎಚ್ಚರ
  • ಮುಖದ ಮೇಲಿನ ಮೊಡವೆಗಳನ್ನು ತಡೆಯುವುದು ಹೇಗೆ ಗೊತ್ತಾ?

ಯಾರಿಗೆ ತಾನೇ ಇಷ್ಟ ಇರೋದಿಲ್ಲ ಹೇಳಿ? ಸಾಕಷ್ಟು ಮಂದಿ ನಾನು ಸುಂದರವಾಗಿ ಕಾಣಬೇಕು, ನನ್ನ ಮುಖದ ಮೇಲೆ ಒಂದು ಕಲೆ ಕೂಡ ಇರಬಾರದು ಅಂತೆಲ್ಲಾ ಆಸೆ ಪಡುತ್ತಾರೆ. ಆದರೆ ಮೊಡವೆ ಅನ್ನೋದು ಎಲ್ಲರ ಲೈಫ್​ನಲ್ಲೂ ಕಟ್ಟಿಟ್ಟ ಬುತ್ತಿ. ಹುಡುಗಿಯರು ಅಥವಾ ಹುಡುಗರು ಆಗಲಿ ಮೊಡವೆ ಎಲ್ಲರ ಮುಖದ ಮೇಲೂ ಬರುತ್ತೆ.

ಇದನ್ನೂ ಓದಿ:ನಿಮಗಿದು ಗೊತ್ತಾ..? ಮಹಿಳೆಯರು ಏಕೆ ಮೂಗು ಚುಚ್ಚಿಸಿಕೊಳ್ಳುತ್ತಾರೆ; ಇದರ ಹಿಂದಿನ ಲಾಭವೇನು?

publive-image

ಆದರೆ ಮೊಡವೆ ಬಂದ ಜಾಗದಲ್ಲೇ ಮತ್ತೆ ಮತ್ತೆ ಹುಟ್ಟಿಕೊಳ್ಳುವ ಪಿಂಪಲ್ಸ್​ ನೋಡಿ ಬೇಸರಗೊಳ್ಳುತ್ತಾರೆ. ಆದರೆ ಯಾವುದೇ ಕ್ರೀಮ್ ಯೂಸ್​ ಮಾಡಿದ್ರೂ ಹೋಗುತ್ತಿಲ್ಲ ಎನ್ನುವವರು ಚಿಂತೆ ಬಿಟ್ಟು ಬಿಡಿ. ಮೊಡವೆಗಳನ್ನು ಹೊಗಲಾಡಿಸಲು ಈ ಕೆಳಗಿನ ಟ್ರಿಕ್​ ಅನ್ನು ಯೂಸ್​ ಮಾಡಿ.

ಮೊದಲು ಈ ಮೊಡವೆ ಹದಿಹರೆಯದವರು ಕಾಡುವುದು ಸಹಜ. ಸಾಮಾನ್ಯವಾಗಿ ಯಾರಲ್ಲಿ ಚರ್ಮದ ತೊಂದರೆ ಇರುತ್ತದೆಯೋ ಅಂಥವರ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ಚರ್ಮದಲ್ಲಿರುವ ಕೂದಲಿನ, ಜಿಡ್ಡಿನ ಹಾಗೂ ಬೆವರಿನ ಗ್ರಂಥಿಗಳಲ್ಲಿ ಆಗುವ ಬದಲಾವಣೆಯೇ. ಬಹಳ ಮುಖವಾಗಿ ಯುವತಿಯರಿಗೆ ಪಿರಿಯಡ್ಸ್ ಸಮಯದಲ್ಲಿ ಮೂಗು, ಹಣೆ, ಕೆನ್ನೆಯ ಮೇಲೆ ಮೊಡವೆ ಆಗುತ್ತದೆ. ಇದರ ಜೊತೆಗೆ ಮುಖ್ಯವಾಗಿ ಮುಖದ ಮೇಲಿನ ಕೊಳಕಿನಿಂದಲೂ ಮೊಡವೆಗಳು ಕಾಣಿಸುತ್ತವೆ.

ಇದನ್ನೂ ಓದಿ: ಪುಟ್ಟ ಮಕ್ಕಳ ಕೈಗೆ ಬೆಳ್ಳಿ ಬಳೆ ಮತ್ತು ಕಾಲಿಗೆ ಗೆಜ್ಜೆ ಹಾಕೋದ್ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ!

publive-image

ಮೊಡವೆಗಳು ಸಾಮಾನ್ಯವಾಗಿ ಹಾನಿಕಾರಕವಲ್ಲದ ಚರ್ಮದ ಸಮಸ್ಯೆಗಳಾಗಿದ್ದು, ಒಂದೇ ಪ್ರದೇಶದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದರಿಂದ ಕೆಲವರಲ್ಲಿ ಆತ್ಮ ವಿಶ್ವಾಸ ಕುಗ್ಗುತ್ತದೆ. ಇನ್ನೂ ಚರ್ಮದ ರಂಧ್ರಗಳು ಎಣ್ಣೆಯನ್ನು ಉತ್ಪತ್ತಿ ಮಾಡುತ್ತಿರುತ್ತವೆ. ಅದರಲ್ಲೂ ಹಣೆ, ಮೂಗು ಮತ್ತು ಕೆನ್ನೆಯಲ್ಲಿ ಯಾವಾಗಲೂ ಎಣ್ಣೆಯುಕ್ತವಾಗಿರುವುರಿಂದ, ಇಂತಹ ಎಣ್ಣೆಯು ಕೊಳಕಿನೊಂದಿಗೆ ಸೇರಿ ಚರ್ಮದ ರಂಧ್ರಗಳನ್ನು ಮುಚ್ಚುವುದರಿಂದ ವೈಟ್‌ಹೆಡ್‌ಗಳು, ಕಪ್ಪು ಚುಕ್ಕೆಗಳಾಗುತ್ತವೆ.

ನಿಮ್ಮ ಹಣೆ ಮತ್ತು ಮೂಗಿನ ಸುತ್ತಮುತ್ತ ಮೊಡವೆಗಳು ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ಹೆಚ್ಚುವರಿ ಎಣ್ಣೆ. ಇಲ್ಲದೆ ನಿದ್ರೆಯ ಕೊರತೆ ಮತ್ತು ಆಯಾಸವೂ ಆಗಿರಬಹುದು. ಸಾಕಷ್ಟು ನಿದ್ರೆ ಮಾಡುವುದು ಹಾಗೂ ಎಣ್ಣೆ ಚರ್ಮವನ್ನು ನಿರ್ವಹಿಸುವುದು ಬಹಳ ಮುಖ್ಯವಾಗುತ್ತದೆ. ನಿಮಗೆ ಕೆನ್ನೆಯ ಭಾಗದಲ್ಲಿ ಪದೇ ಪದೇ ಮೊಡವೆಗಳಾಗುತ್ತಿದ್ದರೆ ಅದಕ್ಕೆ ಕಾರಣ ನಿಮ್ಮ ಕೊಳಕು ದಿಂಬು, ಮೊಬೈಲ್ ಫೋನ್ ಅಥವಾ ನಿಮ್ಮ ಕೆನ್ನೆಯ ಸಂಪರ್ಕಕ್ಕೆ ಬರುವ ಯಾವುದೇ ವಸ್ತುಗಳ ಬ್ಯಾಕ್ಟಿರಿಯಾ ಕಾರಣವಾಗಿರಬಹುದು.

publive-image

ಮೊಬೈಲ್ ಬಳಕೆಯ ನಂತರ ಚೆನ್ನಾಗಿ ಅದನ್ನು ಕ್ಲಿನ್​ ಮಾಡಿ. ವಾರಕ್ಕೊಮ್ಮೆ ನಿಮ್ಮ ದಿಂಬು ಕವರ್​ಗಳನ್ನು ಬದಲಾಯಿಸಿದರೆ ಕೆನ್ನೆಯ ಭಾಗದಲ್ಲಿ ಮೊಡವೆ ಕಡಿಮೆಯಾಗಬಹುದು. ಹೀಗೆ ಮೊಡವೆಗಳು ನಿಮ್ಮ ಮುಖದಲ್ಲಿ ಕಾಣಿಸಿಕೊಂಡರೆ ಅದಕ್ಕೆ ಮುಟ್ಟಲು ಹೋಗಬೇಡಿ. ಜೊತೆಗೆ ಆ ಮೊಡವೆ ಕಿರಿಕಿರಿ ಉಂಟು ಮಾಡಿದ್ರೆ ತಕ್ಷಣವೇ ತಣ್ಣೀರಿನಿಂದ ಮುಖ ತೊಳೆಯಿರಿ. ನಿಮ್ಮ ಮುಖವನ್ನು ಮುಟ್ಟುವ ಮೊದಲು ಕೈಯನ್ನು ಸ್ವಚ್ಛಗೊಳಿಸಿ. ಬಳಿಕ ಮೊಡವೆಗಳ ಮೇಲೆ ಬೆಚ್ಚಗಿನ ನೀರಿನಿಂದ ಮುಟ್ಟಿಕೊಳ್ಳಿ. ಇದರ ಜೊತೆಗೆ ಊತವನ್ನು ಕಡಿಮೆ ಮಾಡಲು ಐಸ್ ಪ್ಯಾಕ್​ಗಳನ್ನು ಯೂಸ್ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment