newsfirstkannada.com

ಪಾಂಡ್ಯ ಬಿಟ್ಟು ಸೂರ್ಯಕುಮಾರ್​ಗೆ T20 ಕ್ಯಾಪ್ಟನ್ಸಿ ಕೊಟ್ಟಿದ್ಯಾರು.. ರೋಹಿತ್, ಗಂಭೀರ್ ಅಲ್ಲವೇ ಅಲ್ಲ!

Share :

Published August 26, 2024 at 11:46am

    ಸೂರ್ಯಗಾಗಿ ಆ ಉದ್ದೆ ಬಿಟ್ಟು ಹೋಗಲು ರೆಡಿಯಾಗಿದ್ರಾ.?

    ಶ್ರೀಲಂಕಾ ಪ್ರವಾಸಕ್ಕೆ ತಂಡ ಪ್ರಕಟವಾದಾಗ ಎಲ್ಲರಿಗೂ ಶಾಕ್

    ಹಾರ್ದಿಕ್​ಗೆ ಹೋಗಬೇಕಿದ್ದ ನಾಯಕ ಸ್ಥಾನ ತಡೆದಿದ್ಯಾರು?

ಬಿಸಿಸಿಐ.. ವಿಶ್ವ ಶ್ರೀಮಂತ ಕ್ರಿಕೆಟ್​ ಬೋರ್ಡ್​. ವಿಶ್ವ ಕ್ರಿಕೆಟ್​ ಲೋಕವನ್ನೇ ನಿಯಂತ್ರಿಸೋ ಈ ಶ್ರೀಮಂತ ಕ್ರಿಕೆಟ್​ ಬೋರ್ಡ್​ನ ಬಾಸ್​​ಗಳು, ಚೀಫ್​ ಸೆಲೆಕ್ಟರ್ ಅಜಿತ್​​ ಅಗರ್ಕರ್ ಮುಂದೆ ಮಾತ್ರ ಫುಲ್​ ಸೈಲೆಂಟ್​ ಅಂತೇ. ಅದ್ಯಾಕೆ?.

ಇದನ್ನೂ ಓದಿ: ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು?

ಗೌತಮ್​ ಗಂಭೀರ್​ ಹೆಡ್ ​ಕೋಚ್​ ಹುದ್ದೆಗೇರಿದ ಬಳಿಕ ಬಿಸಿಸಿಐನಿಂದ ಅಚ್ಚರಿಯ ನಿರ್ಧಾರ ಹೊರ ಬಿತ್ತು. ರೋಹಿತ್​ ಶರ್ಮಾ ನಿವೃತ್ತಿಯ ಬಳಿಕ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾದ ಟಿ20 ಕ್ಯಾಪ್ಟನ್​ ಎಂದೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ, ಶ್ರೀಲಂಕಾ ಪ್ರವಾಸಕ್ಕೆ ತಂಡ ಪ್ರಕಟವಾದಾಗ ಶಾಕ್​ ಕಾದಿತ್ತು. ಹಾರ್ದಿಕ್ ಬದಲು ಸೂರ್ಯಕುಮಾರ್​ ಯಾದವ್​ಗೆ ಪಟ್ಟ ಕಟ್ಟಲಾಗಿತ್ತು. ಎಲ್ಲರೂ ಇದು ಗಂಭೀರ್​ ಮಾಸ್ಟರ್​ ಸ್ಟ್ರೋಕ್​ ಎಂದೆ ಅಂದು ಕೊಂಡಿದ್ರು. ಅಸಲಿಗೆ ಸೂರ್ಯ ಪಟ್ಟ ಕಟ್ಟಿದ್ರ ಹಿಂದಿದ್ದ ಸೂತ್ರದಾರ ರೋಹಿತ್ ಶರ್ಮಾನೂ ಅಲ್ಲ, ಗಂಭೀರ್​ ಅಲ್ಲ, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​.

ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್​?

ರೋಹಿತ್​ ಬಳಿಕ ಯಾರು ಟಿ20 ಕ್ಯಾಪ್ಟನ್​ ಆಗಬೇಕು ಅನ್ನೋ ಚರ್ಚೆ ಬಿಸಿಸಿಐ ಹಾಗೂ ಟೀಮ್​ ಮ್ಯಾನೇಜ್​​ಮೆಂಟ್​ ವಲಯದಲ್ಲಿ ನಡೆದಿತ್ತು. ಈ ವೇಳೆ ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​​, ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟೋದನ್ನ ತೀವ್ರವಾಗಿ ವಿರೋದಿಸಿದ್ರಂತೆ. ಮುಂಬೈ ಇಂಡಿಯನ್ಸ್​ ಪರ ನಾಯಕನಾಗಿ ವೈಫಲ್ಯ ಅನುಭವಿಸಿದ್ದಾರೆ. ಜೊತೆಗೆ ಪಾಂಡ್ಯ ನಾಯಕನಾದ್ರೆ ಡ್ರೆಸ್ಸಿಂಗ್​ ರೂಮ್​ನ ವಾತಾವರಣ ಹದಗೆಡುತ್ತೆ ಎಂದು ತಿಳಿಸಿದ್ರಂತೆ. ಆದ್ರೂ, ಬಿಸಿಸಿಐಗೆ ಹಾರ್ದಿಕ್​ ಮೇಲೆ ಒಲವಿತ್ತಂತೆ. ಆಗ ಹಾರ್ದಿಕ್​ ನಾಯಕತ್ವ ನೀಡೋದಾದ್ರೆ, ನಾನು ನನ್ನ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂದು ಅಗರ್ಕರ್​ ಹೇಳಿದ್ರಂತೆ. ಅಗರ್ಕರ್​ ನಿವೃತ್ತಿ ಮಾತಾಡಿದ ಬಳಿಕ ಸೈಲೆಂಟಾದ ಬಾಸ್​ಗಳು ಸೂರ್ಯನಿಗೆ ಪಟ್ಟ ಕಟ್ಟಲು ಸಮ್ಮತಿಸಿದ್ರಂತೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಂಡ್ಯ ಬಿಟ್ಟು ಸೂರ್ಯಕುಮಾರ್​ಗೆ T20 ಕ್ಯಾಪ್ಟನ್ಸಿ ಕೊಟ್ಟಿದ್ಯಾರು.. ರೋಹಿತ್, ಗಂಭೀರ್ ಅಲ್ಲವೇ ಅಲ್ಲ!

https://newsfirstlive.com/wp-content/uploads/2024/07/SURYA_PANDYA.jpg

Load More